Viral Video: ಅದ್ಭುತ ಕ್ಯಾಚ್ ಹಿಡಿದು ಎಲ್ಲರೂ ಹೌಹಾರುವಂತೆ ಮಾಡಿದ ಪೆಪ್ಪರ್

Vitality t20 blast: ಈ ಪಂದ್ಯದಲ್ಲಿ ಸ್ಟೀಫನ್ ಕ್ರಾಫ್ಟ್ (76) ಹಾಗೂ ಡೇನ್ ವಿಲಾಸ್ (51) ಅವರ ಅರ್ಧಶತಕಗಳ ನೆರವಿನಿಂದ ಲಂಕಾಶೈರ್ ತಂಡವು 16ನೇ ಓವರ್​ನಲ್ಲಿ 162 ರನ್​ಗಳ ಗುರಿಮುಟ್ಟುವ ಮೂಲಕ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

Viral Video: ಅದ್ಭುತ ಕ್ಯಾಚ್ ಹಿಡಿದು ಎಲ್ಲರೂ ಹೌಹಾರುವಂತೆ ಮಾಡಿದ ಪೆಪ್ಪರ್
Vitality T20 Blast
Follow us
| Updated By: ಝಾಹಿರ್ ಯೂಸುಫ್

Updated on:Jul 09, 2022 | 1:26 PM

ಕ್ರಿಕೆಟ್ ಅಂಗಳದಲ್ಲಿ ಅದ್ಭತ ಕ್ಯಾಚ್​ಗಳು ಆಗಾಗ್ಗೆ ಕಂಡು ಬರುತ್ತದೆ. ಅದರಲ್ಲೂ ಕೆಲವೊಂದು ಕ್ಯಾಚ್​ಗಳು ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸುತ್ತಿದೆ. ಅಂತಹದೊಂದು ಕ್ಯಾಚ್​ಗೆ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವಿಟಾಲಿಟಿ ಟಿ20 ಬ್ಲಾಸ್ಟ್​ ಲೀಗ್ ಸಾಕ್ಷಿಯಾಗಿದೆ. ಮ್ಯಾಂಚೆಸ್ಟರ್​ನಲ್ಲಿ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಎಸೆಕ್ಸ್ ಹಾಗೂ ಲಂಕಾಶೈರ್ ತಂಡಗಳು ಮುಖಾಮುಖಿಯಾಗಿತ್ತು.

ಮೊದಲು ಬ್ಯಾಟ್ ಮಾಡಿದ ಎಸೆಕ್ಸ್ ತಂಡವು ನಿಗದಿತ ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಈ ಟಾರ್ಗೆಟ್​ ಅನ್ನು ಬೆನ್ನತ್ತಿದ ಲಂಕಾಶೈರ್ ತಂಡಕ್ಕೆ ಆರಂಭಿಕ ಆಟಗಾರ ಫಿಲಿಪ್ ಸಾಲ್ಟ್ ಉತ್ತರ ಆರಂಭ ಒದಗಿಸಿದ್ದರು. ಪಂದ್ಯ 9ನೇ ಓವರ್​ನಲ್ಲಿ ಸಾಲ್ಟ್ ಭರ್ಜರಿ ಹೊಡೆತಕ್ಕೆ ಯತ್ನಿಸಿದ್ದರು. ಅತ್ತ ಬೌಂಡರಿ ಲೈನ್​ನಲ್ಲಿದ್ದ ಫೀಲ್ಡರ್ ಚೆಂಡನ್ನು ಅದ್ಭುತವಾಗಿ ಗುರುತಿಸಿ ಕೈಯಲ್ಲಿ ಬಂಧಿಸಿದರು. ಆದರೆ ನಿಯಂತ್ರಣ ತಪ್ಪಿ ಬೌಂಡರಿ ಗೆರೆ ದಾಟುತ್ತಿದ್ದಂತೆ ಜಿಗಿದು ಚೆಂಡನ್ನು ಮೈದಾನದೊಳಕ್ಕೆ ಎಸೆದರು. ಅಷ್ಟರಲ್ಲಾಗಲೇ ಓಡಿ ಬಂದಿದ್ದ ಬೆನ್ ಅಲಿಸನ್ ಚೆಂಡನ್ನು ಹಿಡಿದರು.

ಮೈಕೆಲ್ ಪೆಪ್ಪರ್ ಹಾಗೂ ಬೆನ್​ ಅಲಿಸನ್ ಅದ್ಭುತ ಫೀಲ್ಡಿಂಗ್​ನಿಂದ 27 ರನ್​ಗಳಿಸಿದ್ದ ಫಿಲಿಪ್ ಸಾಲ್ಟ್ ಹೊರನಡೆಯಬೇಕಾಯಿತು. ಇದೀಗ ಈ ಅದ್ಭುತ ಫೀಲ್ಡಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಮೈಕೆಲ್ ಪೆಪ್ಪರ್ ಅವರ ಅದ್ಭುತ ಪ್ರಯತ್ನಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

View this post on Instagram

A post shared by Spark Sport (@sparknzsport)

ಇನ್ನು ಈ ಪಂದ್ಯದಲ್ಲಿ ಸ್ಟೀಫನ್ ಕ್ರಾಫ್ಟ್ (76) ಹಾಗೂ ಡೇನ್ ವಿಲಾಸ್ (51) ಅವರ ಅರ್ಧಶತಕಗಳ ನೆರವಿನಿಂದ ಲಂಕಾಶೈರ್ ತಂಡವು 16ನೇ ಓವರ್​ನಲ್ಲಿ 162 ರನ್​ಗಳ ಗುರಿಮುಟ್ಟುವ ಮೂಲಕ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಲಂಕಾಶೈರ್ ತಂಡವು ಟಿ20 ಬ್ಲಾಸ್ಟ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.

Published On - 1:25 pm, Sat, 9 July 22

ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ