ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ ವಿಚಿತ್ರ ಘಟನೆಗೆ ಸಾಕ್ಷಿಯಾಯಿತು. ಮೊದಲ ಇನಿಂಗ್ಸ್‌ನಲ್ಲಿ 325 ರನ್ ಕಲೆಹಾಕಿದ್ದ ಭಾರತ ತಂಡವು ದ್ವಿತೀಯ ಇನಿಂಗ್ಸ್‌ನಲ್ಲಿ 276 ರನ್ಗೆ ಡಿಕ್ಲೇರ್ ಮಾಡಿಕೊಂಡಿದೆ. ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಇದೀಗ ನ್ಯೂಜಿಲೆಂಡ್ ತಂಡವು 540 ರನ್ಗಳ ಟಾರ್ಗೆಟ್ ಪಡೆದುಕೊಂಡಿದೆ. ಅತ್ತ ಡಿಕ್ಲೇರ್ ಬಳಿಕ ಬೌಲಿಂಗ್ ಆರಂಭಿಸಿದ ಭಾರತ ತಂಡವು ಉತ್ತಮ ಆರಂಭವನ್ನೇ ಪಡೆದಿತ್ತು. 13 ರನ್ಗೆ ಒಂದು ವಿಕೆಟ್ ಪಡೆದಿದ್ದ ವೇಳೆ ತಕ್ಷಣವೇ ಪಂದ್ಯವನ್ನು ನಿಲ್ಲಿಸಲಾಯಿತು. ಹೀಗೆ ಪಂದ್ಯವನ್ನು ದಿಢೀರಣೆ ಸ್ಥಗಿತಗೊಳಿಸಲು ಕಾರಣ ಸ್ಪೈಡರ್ ಕ್ಯಾಮ್.
ಹೌದು, ಪಂದ್ಯ ನಡೆಯುತ್ತಿದ್ದ ವೇಳೆ ಸ್ಪೈಡರ್ ಕ್ಯಾಮ್ ಮೈದಾನದ ಭಾಗಕ್ಕೆ ಇಳಿದಿತ್ತು. ತಾಂತ್ರಿಕ ದೋಷದಿಂದಾಗಿ ಕ್ಯಾಮೆರಾವನ್ನು ಮತ್ತೆ ಮೇಲೆತ್ತಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಚಹಾ ವಿರಾಮವನ್ನು 15 ನಿಮಿಷ ಮೊದಲೇ ಘೋಷಿಸಿ ಪಂದ್ಯವನ್ನು ನಿಲ್ಲಿಸಲಾಯಿತು. ಇತ್ತ ಕ್ಯಾಮೆರಾ ಕೆಳಗೆ ಬಂದಿರುವುದನ್ನು ಗಮನಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಲ್ಲೇನು ಮಾಡ್ತಿದ್ದೀಯಾ? ಮೇಲೆಕ್ಕೆ ಹೋಗು ಎಂಬಾರ್ಥದಲ್ಲಿ ಕ್ಯಾಮೆರಾ ಸೂಚಿಸಿರುವುದು ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.
Lmao?♥️ pic.twitter.com/Dcp5iSOpar
— Sanjana? (@sanjjxo) December 5, 2021
ಭಾರತದ ಮೇಲುಗೈ:
ಈ ಪಂದ್ಯದಲ್ಲಿ ಇಲ್ಲಿಯವರೆಗೆ ಭಾರತ ಮೇಲುಗೈ ಸಾಧಿಸಿದೆ. ಭಾರತ ಮೊದಲ ಇನಿಂಗ್ಸ್‌ನಲ್ಲಿ 325 ರನ್ ಗಳಿಸಿತ್ತು. ಈ ಇನ್ನಿಂಗ್ಸ್‌ನಲ್ಲಿ ಭಾರತದ ಎಲ್ಲಾ 10 ಬ್ಯಾಟರ್ಗಳನ್ನು ಔಟ್ ಮಾಡುವ ಮೂಲಕ ಎಜಾಝ್ ಪಟೇಲ್ ಇತಿಹಾಸ ನಿರ್ಮಿಸಿದ್ದರು. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಬೌಲರುಗಳು ನ್ಯೂಜಿಲೆಂಡ್ ಅನ್ನು ಕೇವಲ 62 ರನ್‌ಗಳಿಗೆ ಆಲೌಟ್ ಮಾಡಿತ್ತು. ಇನ್ನು ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ಏಳು ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ಭಾರತದ ಪರ ಮಯಾಂಕ್ ಅಗರ್ವಾಲ್ 62 ರನ್‌ಗಳಿಸಿದರೆ, ಚೇತೇಶ್ವರ ಪೂಜಾರ ಮತ್ತು ಶುಭಮನ್ ಗಿಲ್ 47 ರನ್ ಬಾರಿಸಿದರು. ಇನ್ನು ದ್ವಿತೀಯ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ 32 ಓವರ್ ವೇಳೆಗೆ 114 ರನ್ಗಳಿಸಿ 3 ವಿಕೆಟ್ ಕಳೆದುಕೊಂಡಿದೆ.
ಇದನ್ನೂ ಓದಿ: World Record: ಬರೋಬ್ಬರಿ 15 ಸಿಕ್ಸ್: ಕ್ರಿಕೆಟ್ ಇತಿಹಾಸದ ಅತೀ ವೇಗದ ಶತಕ
ಇದನ್ನೂ ಓದಿ: IPL 20222: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
ಇದನ್ನೂ ಓದಿ: Aakash Chopra: ಚಹಲ್ ಬದಲಿಗೆ RCB ಇವರನ್ನು ಟಾರ್ಗೆಟ್ ಮಾಡಲಿದೆ..!
ಇದನ್ನೂ ಓದಿ: IPL 2022: RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ಮತ್ತೆ ಬರ್ತಾರಂತೆ ABD
(Watch Spidercam forces early Tea on Day 3 of IND vs NZ Test)
Published On - 4:42 pm, Sun, 5 December 21