Abu Dhabi T10 League: ರಸೆಲ್ ಸಿಡಿಲಬ್ಬರ: ಡೆಕ್ಕನ್ ಗ್ಲಾಡಿಯೇಟರ್ಸ್​ ಚಾಂಪಿಯನ್

Deccan Gladiators: ಅಂತಿಮವಾಗಿ ರಸೆಲ್ 32 ಎಸೆತಗಳಲ್ಲಿ 90 ರನ್​ ಬಾರಿಸಿದರೆ, ಕೊಹ್ಲರ್ 28 ಎಸೆತಗಳಲ್ಲಿ 59 ರನ್ ಸಿಡಿಸಿದರು. ಪರಿಣಾಮ ಡೆಕ್ಕನ್ ಗ್ಲಾಡಿಯೇಟರ್ಸ್​ 10 ಓವರ್​ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 159 ರನ್​ ಕಲೆಹಾಕಿತು.

1/5
 ಅಬುಧಾಬಿಯಲ್ಲಿ ನಡೆದ ಟಿ10 ಲೀಗ್​ನ ಹೊಸ ಚಾಂಪಿಯನ್ ಆಗಿ ಡೆಕ್ಕನ್ ಗ್ಲಾಡಿಯೇಟರ್ಸ್ ಹೊರಹೊಮ್ಮಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ಬುಲ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತು. ಆದರೆ ಡೆಲ್ಲಿ ಲೆಕ್ಕಚಾರಗಳನ್ನು ಆರಂಭಿಕರಾದ ಆಂಡ್ರೆ ರಸೆಲ್ ಹಾಗೂ ಕೊಹ್ಲರ್ ತಲೆಕೆಳಗಾಗಿಸಿದರು.

2/5
ಬಿರುಸಿನ ಇನಿಂಗ್ಸ್​ ಆರಂಭಿಸಿದ ಈ ಜೋಡಿ ಡೆಲ್ಲಿ ಬೌಲರುಗಳ ಬೆಂಡೆತ್ತಿದರು. ಅದರಲ್ಲೂ ರಸೆಲ್ ಅಬ್ಬರವನ್ನು ತಡೆಯಲಾಗಲಿಲ್ಲ. ಸ್ಪೋಟಕ ಬ್ಯಾಟಿಂಗ್ ಮಾಡಿದ ರಸೆಲ್ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅಷ್ಟೇ ಅಲ್ಲದೆ 7 ಸಿಕ್ಸ್ ಹಾಗೂ 9 ಬೌಂಡರಿ ಸಿಡಿಸಿದರು.

3/5
ಅದರಂತೆ ಅಂತಿಮವಾಗಿ ರಸೆಲ್ 32 ಎಸೆತಗಳಲ್ಲಿ 90 ರನ್​ ಬಾರಿಸಿದರೆ, ಕೊಹ್ಲರ್ 28 ಎಸೆತಗಳಲ್ಲಿ  59 ರನ್ ಸಿಡಿಸಿದರು. ಪರಿಣಾಮ ಡೆಕ್ಕನ್ ಗ್ಲಾಡಿಯೇಟರ್ಸ್​ 10 ಓವರ್​ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 159 ರನ್​ ಕಲೆಹಾಕಿತು.

4/5
160 ರನ್​ಗಳ ಗುರಿ ಬೆನತ್ತಿದ ಡೆಲ್ಲಿ ಬುಲ್ಸ್​ ಪರ ಆರಂಭಿಕ ಹೇಮರಾಜ್ ಮಾತ್ರ 42 ರನ್​ ಬಾರಿಸಿ ಅಬ್ಬರಿಸಿದರು. ಉಳಿದ ಯಾವುದೇ ಬ್ಯಾಟ್ಸ್​ಮನ್​ಗಳಿಂದ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ. ಅದರಂತೆ 10 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 103 ರನ್​ಗಳಿಸಲಷ್ಟೇ ಶಕ್ತರಾದರು.

5/5
ಇತ್ತ 56 ರನ್​ಗಳ ಭರ್ಜರಿ ಜಯದೊಂದಿಗೆ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು. ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ಆಂಡ್ರೆ ರಸೆಲ್ ಪ್ಲೇಯರ್ ಆಫ್​ ದಿ ಮ್ಯಾಚ್ ಪ್ರಶಸ್ತಿ ಪಡೆದರು.

Click on your DTH Provider to Add TV9 Kannada