Viral Video: ಎಂಥಾ ಅದ್ಭುತ ಕ್ಯಾಚ್: ಕ್ರಿಕೆಟ್​ ಅಂಗಳದಲ್ಲಿ ‘ಸೂಪರ್ ಗರ್ಲ್’

Laura Wolvaardt: ಮೂರನೇ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ 96 ರನ್‌ಗಳ ಭರ್ಜರಿ ಜಯ ದಾಖಲಿಸಿದರೆ, ನಾಲ್ಕನೇ ಹಾಗೂ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 6 ವಿಕೆಟ್‌ಗಳಿಂದ ವಿಂಡೀಸ್‌ ತಂಡವನ್ನು ಸೋಲಿಸಿತು.

Viral Video: ಎಂಥಾ ಅದ್ಭುತ ಕ್ಯಾಚ್: ಕ್ರಿಕೆಟ್​ ಅಂಗಳದಲ್ಲಿ 'ಸೂಪರ್ ಗರ್ಲ್'
Laura Wolvaardt
TV9kannada Web Team

| Edited By: Zahir PY

Feb 08, 2022 | 3:49 PM

ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡವು ನಾಲ್ಕನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ 4 ಪಂದ್ಯಗಳ ಸರಣಿಯನ್ನು 2-1 ರಿಂದ ಗೆದ್ದುಕೊಂಡಿದೆ. ಈ ಸರಣಿಯ ನಾಲ್ಕನೇ ಹಾಗೂ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಗೆಲುವಿಗಿಂತಲೂ ಹೆಚ್ಚಾಗಿ ಲಾರಾ ವೊಲ್ವಾರ್ಡ್ ಅವರ ‘ಸೂಪರ್ ಗರ್ಲ್’ ಕ್ಯಾಚ್ ಚರ್ಚೆಯಾಗಿತ್ತು. ಏಕೆಂದರೆ ಮಹಿಳಾ ಕ್ರಿಕೆಟ್‌ನಲ್ಲಿ ಇಂತಹ ಕ್ಯಾಚ್‌ಗಳು ಅಪರೂಪ. ವೊಲ್ವಾರ್ಡ್ ಈ ಅತ್ಯುತ್ತಮ ಕ್ಯಾಚ್‌ನೊಂದಿಗೆ ವಿಶ್ವದ ಅತ್ಯಂತ ಬೆಸ್ಟ್ ಫೀಲ್ಡರ್ ಜಾಂಟಿ ರೋಡ್ಸ್ ಅವರ ಗಮನ ಸೆಳೆದಿರುವುದು ವಿಶೇಷ.

ಈ ಸರಣಿಯ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ವಿಂಡೀಸ್ ಎರಡನೇ ಪಂದ್ಯವನ್ನು ಸೂಪರ್ ಓವರ್‌ನಲ್ಲಿ ಗೆದ್ದುಕೊಂಡಿತು. ಮೂರನೇ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ 96 ರನ್‌ಗಳ ಭರ್ಜರಿ ಜಯ ದಾಖಲಿಸಿದರೆ, ನಾಲ್ಕನೇ ಹಾಗೂ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 6 ವಿಕೆಟ್‌ಗಳಿಂದ ವಿಂಡೀಸ್‌ ತಂಡವನ್ನು ಸೋಲಿಸಿತು.

ನಾಲ್ಕನೇ ಪಂದ್ಯದಲ್ಲಿ ವೊಲ್ವಾರ್ಡ್ ಅವರು ಒಂದು ಕೈಯಲ್ಲಿ ಹಿಡಿದ ಕ್ಯಾಚ್ ಎಲ್ಲರನ್ನು ದಂಗಾಗಿಸಿತು. ವಿಂಡೀಸ್ ಇನ್ನಿಂಗ್ಸ್‌ನ 30 ನೇ ಓವರ್‌ನ ಮೂರನೇ ಎಸೆತದಲ್ಲಿ ವೊಲ್ವಾರ್ಡ್ ಈ ಕ್ಯಾಚ್ ಹಿಡಿದಿದ್ದರು. ಹೀಲಿ ಮ್ಯಾಥ್ಯೂಸ್ ಕಟ್ ಶಾಟ್ ಬಾರಿಸಿದ್ದರು. ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಲಾರಾ ವೊಲ್ವಾರ್ಡ್ ಬಲಭಾಗಕ್ಕೆ ಜಿಗಿದು ಒಂದು ಕೈಯಿಂದ ಕ್ಯಾಚ್ ಹಿಡಿದರು. ಇದೀಗ ಈ ಅದ್ಭುತ ಕ್ಯಾಚ್​ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲೂ ಈ ಅತ್ಯುತ್ತಮ ಫೀಲ್ಡಿಂಗ್ ವಿಡಿಯೋವನ್ನು ಹಂಚಿಕೊಂಡಿರುವ ಜಾಂಟಿ ರೋಡ್ಸ್​ ವೊಲ್ವಾರ್ಡ್ ಅವರ ಕ್ಯಾಚ್​ನ್ನು ಹಾಡಿಹೊಗಳಿದ್ದಾರೆ.

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: Yuzvendra Chahal: ವಿಕೆಟ್​ಗಳ ಶತಕ ಪೂರೈಸಿದ ಚಹಾಲ್

ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!

(Watch video: Laura Wolvaardt Single Hand stunning catch)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada