
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 64ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲನುಭವಿಸಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 220 ರನ್ ಕಲೆಹಾಕಿದ್ದರು. ಈ ಗುರಿಯನ್ನು 19.1 ಓವರ್ಗಳಲ್ಲಿ ಚೇಸ್ ಮಾಡಿ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಸೋಲಿನ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರಸಿದ್ಧ ನಿರೂಪಕ ಇಯಾನ್ ಬಿಷಪ್ ಅವರು ತಂಡದ ಕಳಪೆ ಪ್ರದರ್ಶನದ ಕುರಿತು ರಿಷಭ್ ಪಂತ್ ಅವರನ್ನು ತಂಡದ ಸಮತೋಲನ ಹಾಗೂ ಪ್ಲ್ಯಾನಿಂಗ್ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ತೀವ್ರ ಭಾವುಕರಾಗಿ ಉತ್ತರಿಸಿದ ಪಂತ್, ತಮ್ಮ ತಂಡವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ನಿಯಂತ್ರಣ ತಪ್ಪಿದ್ದಾರೆ.
“ನಮ್ಮ ನಿರೀಕ್ಷೆಯಂತೆ ಪಂದ್ಯಗಳು ಸಾಗುತ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ ಆ ಕಾರಣಕ್ಕಾಗಿ ನಾವು ಕೆಟ್ಟ ತಂಡವಾಗುವುದಿಲ್ಲ. ನಾವು ನಿಜಕ್ಕೂ ನಮ್ದು ಉತ್ತಮ ಫ…ಗ್ ತಂಡ” ಎಂದಿದ್ದಾರೆ.
ನೇರ ಪ್ರಸಾರದಲ್ಲೇ ರಿಷಭ್ ಪಂತ್ ಅಸಭ್ಯ ಪದ ಬಳಸಿದ್ದನ್ನು ಕೇಳಿ ನಿರೂಪಕ ಇಯಾನ್ ಬಿಷಪ್ ಕೆಲಕಾಲ ಸ್ತಬ್ಧರಾದರು. ತಕ್ಷಣವೇ ಅವರು ಸಂದರ್ಶನವನ್ನು ಅಲ್ಲಿಗೆ ಕೊನೆಗೊಳಿಸಿದರು.
ಇದನ್ನೂ ಓದಿ: 750 ಬ್ಯಾಟರ್ಗಳಿಗೆ ಸಾಧ್ಯವಾಗಿಲ್ಲ… ಪ್ರಚಂಡ ದಾಖಲೆ ಬರೆದ ವೈಭವ್!
ಇದೀಗ ರಿಷಭ್ ಪಂತ್ ಅವರ F-Word ಇಂಟರ್ವ್ಯೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಈ ಸೀಸನ್‌ನ ಸ್ಥಿತಿ ಮತ್ತು ರಿಷಭ್ ಪಂತ್ ಮೇಲಿರುವ ಒತ್ತಡವೇ ಈ ಆಕ್ರೋಶಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಏಕೆಂದರೆ….
ಒಟ್ಟಾರೆಯಾಗಿ ಹೇಳುವುದಾದರೆ ರಿಷಭ್ ಪಂತ್ ಲೈವ್ ಟಿವಿಯಲ್ಲಿ ಅಸಭ್ಯ ಪದ ಬಳಸಿದ್ದು ಕ್ರೀಡಾ ಜಗತ್ತಿನಲ್ಲಿ ದೊಡ್ಡ ವಿವಾದ ಸೃಷ್ಟಿಸಿರುವುದು ನಿಜ. ಕೋಟಿಗಟ್ಟಲೆ ವೀಕ್ಷಕರು ನೋಡುವ ವೇದಿಕೆಯಲ್ಲಿ ಇಂತಹ ಭಾಷಾ ಪ್ರಯೋಗ ಶಿಸ್ತಿನ ಉಲ್ಲಂಘನೆಯೇ ಸರಿ. ಆದರೆ, ಆ ಕ್ಷಣದ ಆಕ್ರೋಶವನ್ನು ಬದಿಗಿಟ್ಟು ನೋಡಿದರೆ, ಅದರ ಹಿಂದೆ ತನ್ನ ತಂಡದ ಮೇಲಿದ್ದ ಅಪಾರ ನಂಬಿಕೆ ಮತ್ತು ನಾಯಕನೊಬ್ಬನ ತೀವ್ರ ಭಾವುಕತೆ ಎದ್ದು ಕಾಣುತ್ತದೆ.
ಸತತ ಸೋಲುಗಳಿಂದ ಜರ್ಜರಿತವಾಗಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಇಡೀ ಜಗತ್ತೇ ಟೀಕಿಸುತ್ತಿರುವಾಗ, ನಾಯಕನಾಗಿ ರಿಷಭ್ ಪಂತ್ ಅವರ ಬೆಂಬಲಕ್ಕೆ ನಿಂತ ರೀತಿ ಅವರ ಕಠಿಣ ಮನಸ್ಥಿತಿಯನ್ನು ತೋರಿಸುತ್ತದೆ. ಮಾತು ತಪ್ಪಾಗಿರಬಹುದು, ಆದರೆ ತನ್ನ ಆಟಗಾರರನ್ನು ರಕ್ಷಿಸುವ ಅವರ ಜವಾಬ್ದಾರಿ ಮತ್ತು ಧೈರ್ಯ ಮಾತ್ರ ಅನನ್ಯವಾದದ್ದು.