
T20 World Cup 2026: ಟಿ20 ವಿಶ್ವಕಪ್ನ 32ನೇ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಪಲ್ಲೆಕೆಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಝಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಣ ಈ ಪಂದ್ಯವು ಸಂಪೂರ್ಣ ಮಳೆಗೆ ಆಹುತಿಯಾಗಿದ್ದು, ಹೀಗಾಗಿ ಉಭಯ ತಂಡಗಳು ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ. ಈ ಒಂದು ಅಂಕದೊಂದಿಗೆ ಒಟ್ಟು 5 ಪಾಯಿಂಟ್ಸ್ ಗಳಿಸಿ ಝಿಂಬಾಬ್ವೆ ತಂಡ ಸೂಪರ್-8 ಹಂತಕ್ಕೇರಿದೆ. ಇತ್ತ ಪಾಕಿಸ್ತಾನ್ ಕೂಡ ಇಂದು ಕೊಲಂಬೊದಲ್ಲಿ ನಿರ್ಣಾಯಕ ಪಂದ್ಯವಾಡಬೇಕಿದೆ. ಅಂದರೆ ನಮೀಬಿಯ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಮಾತ್ರ ಪಾಕ್ ಪಡೆ ಮುಂದಿನ ಹಂತಕ್ಕೇರಲಿದೆ.
ಈ ಪಂದ್ಯವು ಕೊಲಂಬೊದ ಎಸ್ಎಸ್ಎ ಸ್ಟೇಡಿಯಂನಲ್ಲಿ ನಡೆಯಲಿರುವುದರಿಂದ ಈ ಮ್ಯಾಚ್ಗೂ ಮಳೆ ಭೀತಿ ಎದುರಾಗಿದೆ. ಒಂದು ವೇಳೆ ಈ ಪಂದ್ಯವು ಮಳೆಯಿಂದಾಗಿ ರದ್ದಾದರೆ ಯಾರಿಗೆ ಚಾನ್ಸ್? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…
ಅಂದರೆ ಮಳೆ ಬಂದು ಪಂದ್ಯ ರದ್ದಾದರೆ ಪಾಕಿಸ್ತಾನ್ ತಂಡ ನೇರವಾಗಿ ಸೂಪರ್-8 ಹಂತಕ್ಕೇರುವುದು ಖಚಿತ. ಹೀಗಾಗಿ ಯುಎಸ್ಎ ಪಾಲಿಗೆ ಪಾಕ್ ಮತ್ತು ನಮೀಬಿಯ ನಡುವಣ ಪಂದ್ಯ ನಡೆಯುವುದು ಅನಿವಾರ್ಯ. ಅಲ್ಲದೆ ಈ ಪಂದ್ಯದಲ್ಲಿ ನಮೀಬಿಯ ಗೆದ್ದರೆ ಮಾತ್ರ ಯುಎಸ್ಎ ತಂಡ ದ್ವಿತೀಯ ಸುತ್ತಿಗೆ ಪ್ರವೇಶಿಸಲಿದೆ.
ಇದನ್ನೂ ಓದಿ: ಟೀಮ್ ಇಂಡಿಯಾದ ‘ಸೂಪರ್-8’ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ
ಒಂದು ವೇಳೆ ಪಾಕಿಸ್ತಾನ್ ತಂಡವು ನಮೀಬಿಯ ವಿರುದ್ಧ ಗೆದ್ದರೆ ಅಥವಾ ಈ ಪಂದ್ಯವು ಕಾರಣಾಂತರದಿಂದ ರದ್ದಾದರೆ, ಪಾಕ್ ಪಡೆಯು ಸೂಪರ್-8 ಹಂತಕ್ಕೇರುವುದು ಖಚಿತ. ಅದರಂತೆ ಪಾಕಿಸ್ತಾನ್ ತಂಡ ಕೊನೆಯ ಲೀಗ್ ಮ್ಯಾಚ್ನಲ್ಲಿ ಗೆದ್ದು ಮುಂದಿನ ಹಂತಕ್ಕೇರಲಿದೆಯಾ ಕಾದು ನೋಡಬೇಕಿದೆ.