WI vs IND: 800 ಬೌಂಡರಿ, 1000 ರನ್, ಶತಕ ಮಿಸ್; ವಿಂಡೀಸ್ ಮಣಿಸಿ ಪಾಕಿಸ್ತಾನದ ವಿಶ್ವದಾಖಲೆ ಮುರಿದ ಭಾರತ

| Updated By: ಪೃಥ್ವಿಶಂಕರ

Updated on: Jul 28, 2022 | 4:55 PM

WI vs IND: 2007 ರಿಂದ 12 ನೇ ಬಾರಿಗೆ ಭಾರತ ತಂಡವು ವೆಸ್ಟ್ ಇಂಡೀಸ್ ತಂಡವನ್ನು ದ್ವಿಪಕ್ಷೀಯ ODI ಸರಣಿಯಲ್ಲಿ ಸೋಲಿಸಿತು. ಇದರೊಂದಿಗೆ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿಶ್ವ ದಾಖಲೆಯನ್ನು ಮುರಿದಿದೆ.

WI vs IND: 800 ಬೌಂಡರಿ, 1000 ರನ್, ಶತಕ ಮಿಸ್; ವಿಂಡೀಸ್ ಮಣಿಸಿ ಪಾಕಿಸ್ತಾನದ ವಿಶ್ವದಾಖಲೆ ಮುರಿದ ಭಾರತ
ಟೀಂ ಇಂಡಿಯಾ
Follow us on

ಟೀಂ ಇಂಡಿಯಾ ನಿನ್ನೆ ವೆಸ್ಟ್ ಇಂಡೀಸ್ (Ind vs WI) ತಂಡವನ್ನು ಸೋಲಿಸುವ ಮೂಲಕ ದೊಡ್ಡ ವಿಜಯವನ್ನು ಸಾಧಿಸಿದೆ. ಭಾರತ ತಂಡ ಮೂರನೇ ಏಕದಿನ ಪಂದ್ಯವನ್ನು ಡಕ್‌ವರ್ತ್ ಲೂಯಿಸ್ ನಿಯಮದಡಿ (Duckworth-Lewis rule) 119 ರನ್‌ಗಳಿಂದ ಗೆದ್ದುಕೊಂಡಿತು. ಅಲ್ಲದೇ ಏಕದಿನ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ. ಮೂರನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಧವನ್, ಚಹಲ್ ಮತ್ತು ಗಿಲ್ (Dhawan, Chahal and Gill) ಅವರ ಪಾತ್ರ ನಿರ್ಣಾಯಕವಾಗಿತ್ತು. ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ODI ನಲ್ಲಿ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು ಅವರ ತವರು ನೆಲದಲ್ಲಿ ಸೋಲಿಸಿತು. ವೆಸ್ಟ್ ಇಂಡೀಸ್ ನೆಲದಲ್ಲಿ ಮೊದಲ ಬಾರಿಗೆ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಎಲ್ಲಾ ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಐತಿಹಾಸಿಕ ಸರಣಿ ವಿಜಯದಲ್ಲಿ, ಶುಭಮನ್ ಗಿಲ್ ಪ್ರಮುಖ ಪಾತ್ರ ವಹಿಸಿದರು. ಅವರು 98 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದರು. ಇವರಲ್ಲದೆ 4 ಆಟಗಾರರು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೇ ವೇಳೆ ಭಾರತ ಪಾಕಿಸ್ತಾನದ ವಿಶ್ವ ದಾಖಲೆಯನ್ನು ಸಹ ಮುರಿದಿದೆ.

ಇತಿಹಾಸ ನಿರ್ಮಿಸಿದೆ

ಪೋರ್ಟ್ ಆಫ್ ಸ್ಪೇನ್‌ನಲ್ಲಿ ಭಾರತ ತಂಡ ಅಂತಿಮವಾಗಿ ಇತಿಹಾಸ ನಿರ್ಮಿಸಿದೆ. ಶಿಖರ್ ಧವನ್ ನೇತೃತ್ವದ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಡಕ್ವರ್ತ್ ಲೂಯಿಸ್ ನಿಯಮದಡಿ ವೆಸ್ಟ್ ಇಂಡೀಸ್ ತಂಡವನ್ನು 119 ರನ್ ಗಳಿಂದ ಸೋಲಿಸಿದೆ. 2007 ರಿಂದ 12 ನೇ ಬಾರಿಗೆ ಭಾರತ ತಂಡವು ವೆಸ್ಟ್ ಇಂಡೀಸ್ ತಂಡವನ್ನು ದ್ವಿಪಕ್ಷೀಯ ODI ಸರಣಿಯಲ್ಲಿ ಸೋಲಿಸಿತು. ಇದರೊಂದಿಗೆ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿಶ್ವ ದಾಖಲೆಯನ್ನು ಮುರಿದಿದೆ.

ಇದನ್ನೂ ಓದಿ
SL vs PAK: ಲಂಕಾ ಮುಂದೆ ನಡೆಯದ ಪಾಕ್ ಆಟ; ಬಾಬರ್ ಪಡೆಗೆ 246 ರನ್​ಗಳ ಹೀನಾಯ ಸೋಲು..!
Asia Cup 2022: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು; ಯುಎಇಯಲ್ಲಿ ಏಷ್ಯಾ ಕಪ್ ಆಯೋಜನೆ ಖಚಿತ

137 ರನ್‌ಗಳಿಗೆ ಆಲೌಟ್

ಮಳೆ ಪೀಡಿತ ಮೂರನೇ ಏಕದಿನ ಪಂದ್ಯದಲ್ಲಿ ಭಾರತವು ಡಕ್ವರ್ತ್ ಲೂಯಿಸ್ ನಿಯಮದ ಅಡಿಯಲ್ಲಿ ವೆಸ್ಟ್ ಇಂಡೀಸ್ ಅನ್ನು 119 ರನ್ಗಳಿಂದ ಸೋಲಿಸಿ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಭಾರತದ ಇನಿಂಗ್ಸ್‌ನ 24 ಓವರ್‌ಗಳ ನಂತರ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ಬಳಿಕ ಪಂದ್ಯವನ್ನು 40 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಎರಡನೇ ಬಾರಿಗೆ, ಭಾರತೀಯ ಇನ್ನಿಂಗ್ಸ್‌ನ 36 ಓವರ್‌ಗಳ ನಂತರ, ಮಳೆ ಕಾಣಿಸಿಕೊಂಡಿತು. ಹೀಗಾಗಿ ಭಾರತ ತನ್ನ ಇನಿಂಗ್ಸ್ ಅನ್ನು 225 ರನ್​ಗಳಿಗೆ ಕೊನೆಗೊಳಿಸಬೇಕಾಯಿತು. ಬಳಿಕ ಡಕ್‌ವರ್ತ್‌ ಲೂಯಿಸ್‌ ಪ್ರಕಾರ ವೆಸ್ಟ್‌ ಇಂಡೀಸ್‌ಗೆ 35 ಓವರ್‌ಗಳಲ್ಲಿ 257 ರನ್‌ಗಳ ಗುರಿ ನೀಡಲಾಯಿತು. ಆದರೆ ಕೆರಿಬಿಯನ್ ತಂಡ ಕೇವಲ 137 ರನ್‌ಗಳಿಗೆ ಆಲೌಟ್ ಆಯಿತು.

ಗಿಲ್ ಅಬ್ಬರ

ಆರಂಭಿಕ ಆಟಗಾರ ಶುಭಮನ್ ಗಿಲ್ 98 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ ಅಜೇಯ 98 ರನ್ ಗಳಿಸಿದರು. ಇದು ಗಿಲ್ ಅವರ ಅಂತರಾಷ್ಟ್ರೀಯ ವೃತ್ತಿಜೀವನದ ಅತ್ಯಂತ ದೊಡ್ಡ ಇನ್ನಿಂಗ್ಸ್ ಆಗಿತ್ತು. ಇದಕ್ಕೂ ಮೊದಲು ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ 91 ರನ್ ಗಳಿಸಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಗಿಲ್ 64 ರನ್ ಹಾಗೂ ಎರಡನೇ ಏಕದಿನ ಪಂದ್ಯದಲ್ಲಿ 43 ರನ್ ಗಳಿಸಿದ್ದರು. ಹೀಗಾಗಿ ಅವರಿಗೆ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಗಳನ್ನು ನೀಡಲಾಯಿತು.

ಶುಭಮನ್ ಗಿಲ್ ಮೊದಲ ವಿಕೆಟ್‌ಗೆ ಶಿಖರ್ ಧವನ್ (58) ಅವರೊಂದಿಗೆ 113 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಶಿಖರ್ ಧವನ್ ಏಕದಿನ ವೃತ್ತಿಜೀವನದಲ್ಲಿ 38ನೇ ಅರ್ಧಶತಕ ಗಳಿಸಿದರು. ಜೊತೆಗೆ ತಮ್ಮ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿಗಳನ್ನು ಹೊಡೆದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಧವನ್ 800 ಬೌಂಡರಿಗಳನ್ನು ಪೂರೈಸಿದ್ದಾರೆ. ಇಂತಹ ಸಾಧನೆ ಮಾಡಿದ 9ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗೆಯೇ ಈ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 1000 ರನ್ ಪೂರೈಸಿದ ವಿಶ್ವದ 22ನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಧವನ್ ಪಾತ್ರರಾಗಿದ್ದಾರೆ.