IPL 2022: ಹೊಸ ತಂಡದ ಪರ ಆಡಲಿದ್ದೇನೆ ಎಂದ ಡೇವಿಡ್ ವಾರ್ನರ್
David Warner: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 150 ಪಂದ್ಯಗಳನ್ನಾಡಿರುವ ವಾರ್ನರ್ 42ರ ಸರಾಸರಿಯಲ್ಲಿ 5449 ರನ್ ಕಲೆಹಾಕಿದ್ದಾರೆ. ಇದರಲ್ಲಿ 4 ಶತಕ ಹಾಗೂ 54 ಅರ್ಧಶತಕಗಳಿವೆ. ಅಷ್ಟೇ ಅಲ್ಲದೆ ಐಪಿಎಲ್ನಲ್ಲಿ 200 ಕ್ಕೂ ಅಧಿಕ ಸಿಕ್ಸ್ ಸಿಡಿಸಿದ ಬ್ಯಾಟರುಗಳ ಪಟ್ಟಿಯಲ್ಲೂ ಡೇವಿಡ್ ವಾರ್ನರ್ ಹೆಸರಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 (IPL 2022) ಸಿದ್ದತೆಗಳು ಆರಂಭವಾದ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ (David Warner) ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರಸ್ತುತ ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಭಾಗವಾಗಿರುವ ವಾರ್ನರ್ ಮುಂದಿನ ಸೀಸನ್ನಲ್ಲಿ ಎಸ್ಆರ್ಹೆಚ್ ಪರ ಆಡುವುದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಬದಲಾಗಿ ಐಪಿಎಲ್ 2022 ಹರಾಜಿಗಾಗಿ ನಾನು ಹೆಸರು ನೋಂದಣಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಾರ್ನರ್, ಸನ್ರೈಸರ್ಸ್ ಹೈದರಾಬಾದ್ ತಂಡ ನನ್ನ ಉಳಿಸಿಕೊಳ್ಳುವುದಿಲ್ಲ ಎಂದು ಭಾವಿಸುತ್ತೇನೆ. ಹಾಗಾಗಿ ಐಪಿಎಲ್ನಲ್ಲಿ ಹೊಸ ಆರಂಭವನ್ನು ಎದುರು ನೋಡುತ್ತಿದ್ದೇನೆ. ಇತ್ತ ಮುಂದಿನ ಸೀಸನ್ನಲ್ಲಿ ಒಟ್ಟು 10 ತಂಡಗಳಿರಲಿದ್ದು, ಜೊತೆಗೆ ಮೆಗಾ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ನಾನು ಸಹ ಹೆಸರು ನೀಡುವುದಾಗಿ ವಾರ್ನರ್ ತಿಳಿಸಿದ್ದಾರೆ. ಇದರೊಂದಿಗೆ ಐಪಿಎಲ್ 2022 ರಲ್ಲಿ ವಾರ್ನರ್ ಹೈದರಾಬಾದ್ ಪರ ಆಡುವುದಿಲ್ಲ ಎಂಬುದು ಕೂಡ ಕನ್ಫರ್ಮ್ ಆಗಿದೆ.
2014 ರಿಂದ ಸನ್ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಡೇವಿಡ್ ವಾರ್ನರ್, ತಮ್ಮದೇ ನಾಯಕತ್ವದಲ್ಲಿ ಎಸ್ಆರ್ಹೆಚ್ ತಂಡವನ್ನು 2016 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಅಷ್ಟೇ ಅಲ್ಲದೆ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ಗಳಿಸಿದ ವಿದೇಶಿ ಆಟಗಾರ ಎಂಬ ದಾಖಲೆಯನ್ನೂ ನಿರ್ಮಿಸಿದ್ದರು.
ಆದರೆ ಐಪಿಎಲ್ 2021 ರಲ್ಲಿ ವಾರ್ನರ್ ಅವರನ್ನು ಎಸ್ಆರ್ಹೆಚ್ ಫ್ರಾಂಚೈಸಿ ಏಕಾಏಕಿ ತಂಡದ ನಾಯಕತ್ವದಿಂದ ಕೆಳಗಿಳಿಸಿತ್ತು. ಅಷ್ಟೇ ಅಲ್ಲದೆ ಕೆಲ ಪಂದ್ಯಗಳಿಂದ ಕೈ ಬಿಟ್ಟಿದ್ದರು. ಇದಾಗ್ಯೂ ಯುಎಇನಲ್ಲಿ ನಡೆದ ದ್ವಿತಿಯಾರ್ಧದ ವೇಳೆಯೂ ವಾರ್ನರ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಕೇವಲ 2 ಪಂದ್ಯಗಳಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು.
ಈ ಕುರಿತು ಮಾತನಾಡಿದ್ದ ಡೇವಿಡ್ ವಾರ್ನರ್, ನನ್ನನ್ನು ಏಕೆ ತಂಡದಿಂದ ಹೊರಹಾಕಲಾಯಿತು ಎಂಬುದು ನನಗೆ ಅರ್ಥವಾಗಿಲ್ಲ. ಆ ಬಗ್ಗೆ ತಂಡದ ಮ್ಯಾನೇಜ್ಮೆಂಟ್ ಕೂಡ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ ಎಂದು ತಿಳಿಸಿದ್ದರು. ಇದಾಗ್ಯೂ ಸನ್ರೈಸರ್ಸ್ ಅಭಿಮಾನಿಗಳಿಗಾಗಿ ನಾನು ಎಸ್ಆರ್ಹೆಚ್ ಪರ ಆಡಲು ಬಯಸುತ್ತೇನೆ ಎಂದಿದ್ದರು. ಆದರೀಗ ಎಸ್ಆರ್ಹೆಚ್ ಫ್ರಾಂಚೈಸಿ ನನ್ನನ್ನು ರಿಟೈನ್ ಮಾಡಲ್ಲ ಎಂದಿರುವ ವಾರ್ನರ್ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 150 ಪಂದ್ಯಗಳನ್ನಾಡಿರುವ ವಾರ್ನರ್ 42ರ ಸರಾಸರಿಯಲ್ಲಿ 5449 ರನ್ ಕಲೆಹಾಕಿದ್ದಾರೆ. ಇದರಲ್ಲಿ 4 ಶತಕ ಹಾಗೂ 54 ಅರ್ಧಶತಕಗಳಿವೆ. ಅಷ್ಟೇ ಅಲ್ಲದೆ ಐಪಿಎಲ್ನಲ್ಲಿ 200 ಕ್ಕೂ ಅಧಿಕ ಸಿಕ್ಸ್ ಸಿಡಿಸಿದ ಬ್ಯಾಟರುಗಳ ಪಟ್ಟಿಯಲ್ಲೂ ಡೇವಿಡ್ ವಾರ್ನರ್ ಹೆಸರಿದೆ.
ಇದನ್ನೂ ಓದಿ: T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?
ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ
ಇದನ್ನೂ ಓದಿ: T20 World Cup 2021: ಹಿಂದೂಗಳ ಮುಂದೆ ನಮಾಜ್ ಮಾಡಿದ್ದು ಖುಷಿಯಾಯ್ತು ಎಂದ ಪಾಕ್ ಕ್ರಿಕೆಟಿಗ
(Will put my name in IPL auction, confirms David Warner)