ಯಾವ ಸಿನಿಮಾ ನಟಿಯರಿಗೂ ಕಮ್ಮಿ ಇಲ್ಲ ಪಾಕ್ ಕ್ರಿಕೆಟಿಗರ ಮಡದಿಯರು; ಫೋಟೋ ನೋಡಿ

ಪಾಕಿಸ್ತಾನದ ಬ್ಯಾಟ್ಸ್‌ಮನ್ ಶೋಯೆಬ್ ಮಲಿಕ್ ಅವರು ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ವಿವಾಹವಾದರು.

1/9
ಪಾಕಿಸ್ತಾನದ ಬ್ಯಾಟ್ಸ್‌ಮನ್ ಶೋಯೆಬ್ ಮಲಿಕ್ ಅವರು ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ವಿವಾಹವಾದರು. ಸಾನಿಯಾ ಮಿರ್ಜಾ ತಮ್ಮ ಗ್ಲಾಮರ್‌ಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಅವರು ಭಾರತದಲ್ಲಿ ಕ್ರೀಡಾ ಐಕಾನ್ ಮಾತ್ರವಲ್ಲದೆ ಸ್ಟೈಲ್ ಐಕಾನ್ ಕೂಡ ಆಗಿದ್ದಾರೆ.
2/9
ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ, ಅವರ ಮಾವನ ಮಗಳು ನಾಡಿಯಾ ಅವರನ್ನು ವಿವಾಹವಾದರು. ಇಬ್ಬರೂ ಬಾಲ್ಯದಿಂದಲೂ ಒಬ್ಬರಿಗೊಬ್ಬರು ಅರಿತವರಾಗಿದ್ದಾರೆ. ಅಫ್ರಿದಿ ಅವರ ಪತ್ನಿ ಆಗಾಗ್ಗೆ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುತ್ತಾರೆ. ಇಬ್ಬರೂ ಈ ವರ್ಷ ತಮ್ಮ 20 ನೇ ವಿವಾಹ ವಾರ್ಷಿಕೋತ್ಸವವನ್ನು ಐದು ಹೆಣ್ಣುಮಕ್ಕಳೊಂದಿಗೆ ಆಚರಿಸಿಕೊಂಡರು.
3/9
ಪಾಕಿಸ್ತಾನಕ್ಕೆ ಚಾಂಪಿಯನ್ಸ್ ಟ್ರೋಫಿ ಗೆದ್ದ ಕ್ಯಾಪ್ಟನ್ ಸರ್ಫ್ರಾಜ್ ಅಹ್ಮದ್ ಅವರ ಪತ್ನಿ ಸೈಯದಾ ಖುಷ್ಬಖ್ತ್ ಶಾ ಕೂಡ ತುಂಬಾ ಸುಂದರವಾಗಿದ್ದಾರೆ. ಅವರು 2005 ರಲ್ಲಿ ಸರ್ಫರಾಜ್ ಅವರನ್ನು ವಿವಾಹವಾದರು. ಅವರು ಸರ್ಫರಾಜ್ ಅವರನ್ನು ಹುರಿದುಂಬಿಸಲು ಅನೇಕ ಬಾರಿ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಇಬ್ಬರೂ ದಂಪತಿಗಳಿಗೆ ಒಬ್ಬ ಮಗ ಮತ್ತು ಮಗಳ ಇದ್ದಾರೆ.
4/9
ಪಾಕಿಸ್ತಾನದ ಮಾಜಿ ನಾಯಕ ಅಜರ್ ಅಲಿ, ನಿಲಾ ಅಜರ್ ಅವರನ್ನು 2007 ರಲ್ಲಿ ವಿವಾಹವಾದರು. ಇಬ್ಬರಿಗೂ ಮೂವರು ಮಕ್ಕಳಿದ್ದಾರೆ.
5/9
ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ ಅವರು ಕಳೆದ ವರ್ಷ ಅಂದರೆ 2019 ರಲ್ಲಿ ಭಾರತದ ಶಾಮಿಯಾ ಅರ್ಜು ಅವರನ್ನು ವಿವಾಹವಾದರು. ಶಾಮಿಯಾ ಅರ್ಜು ಕೂಡ ಯಾವ ಸಿನಿಮಾ ನಟಿಯರಿಗೂ ಕಮ್ಮಿ ಇಲ್ಲ.
6/9
ಎಡಗೈ ಸ್ಪಿನ್ನರ್ ಮತ್ತು ಅಬ್ಬರದ ಬ್ಯಾಟ್ಸ್‌ಮನ್ ಇಮಾದ್ ವಾಸಿಮ್ ಅವರು 2019 ರಲ್ಲಿ ಸಾನಿಯಾ ಅಶ್ಫಾಕ್ ಅವರನ್ನು ವಿವಾಹವಾದರು. ಸಾನಿಯಾ ಪಾಕಿಸ್ತಾನಿ ಮೂಲದ ಬ್ರಿಟಿಷ್ ಪ್ರಜೆ. ಇಮಾದ್ ಕೂಡ ಬ್ರಿಟನ್‌ನಲ್ಲಿ ಜನಿಸಿದರು.
7/9
ಪಾಕಿಸ್ತಾನ ವೇಗದ ಬೌಲರ್ ಮೊಹಮ್ಮದ್ ಅಮೀರ್ ಮ್ಯಾಚ್​ ಫಿಕ್ಸಿಂಗ್​ ಆರೋಪದಡಿ ಇಂಗ್ಲೆಂಡ್​ನಲ್ಲಿ ಜೈಲು ವಾಸ ಅನುಭವಿಸಬೇಕಾಯಿತು. ಆದಾಗ್ಯೂ, ಈ ಸಮಯದಲ್ಲಿ ಅವರು ತಮ್ಮ ವಕೀಲ ನರ್ಗಿಸ್ ಅವರನ್ನು ಪ್ರೀತಿಸುತ್ತಿದ್ದರು ಮತ್ತು ಜೈಲಿನಿಂದ ಹೊರಬಂದ ನಂತರ ಅವರು ನರ್ಗಿಸ್ ಅವರನ್ನು ವಿವಾಹವಾದರು. ನರ್ಗಿಸ್ ಪಾಕಿಸ್ತಾನ ಮೂಲದವರಾಗಿದ್ದು ನೋಡಲು ತುಂಬಾ ಸುಂದರವಾಗಿದ್ದಾರೆ.
8/9
ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಮೊಹಮ್ಮದ್ ಹಫೀಜ್ 2007 ರಲ್ಲಿ ಪ್ರೇಮ ವಿವಾಹವಾದರು. ಅವರ ಹೆಂಡತಿಯ ಹೆಸರು ನಾಜಿಯಾ ಹಫೀಜಾದ್.
9/9
ಪಾಕಿಸ್ತಾನದ ಎಡಗೈ ವೇಗದ ಬೌಲರ್ ವಹಾಬ್ ರಿಯಾಜ್ 2013 ರಲ್ಲಿ ಜೈನಾಬ್ ಚೌಧರಿಯನ್ನು ವಿವಾಹವಾದರು. ಜೈನಾಬ್ ಅವರ ತಂದೆ ಪಾಕಿಸ್ತಾನದ ಪ್ರಸಿದ್ಧ ಉದ್ಯಮಿಯಾಗಿದ್ದಾರೆ.