T20 World Cup 2023: ಭಾರತ- ವಿಂಡೀಸ್ ಮುಖಾಮುಖಿ; ಹರ್ಮನ್ ಪಡೆ ಗೆದ್ದರೆ ಗುಂಪಿನಲ್ಲಿ ಅಗ್ರಸ್ಥಾನ
T20 World Cup 2023: ಸದ್ಯ ಟೀಂ ಇಂಡಿಯಾ ಮಹಿಳಾ ಟಿ20 ವಿಶ್ವಕಪ್ 2023 ರ ಗುಂಪು 2 ರಲ್ಲಿ ಸ್ಥಾನ ಪಡೆದಿದ್ದು, ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ತಂಡಗಳು ಸಹ ಈ ಗುಂಪಿನಲ್ಲಿವೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (Women T20 World Cup 2023) ಇಂದು ಟೀಂ ಇಂಡಿಯಾ, ವೆಸ್ಟ್ ಇಂಡೀಸ್ (India VS West Indies) ತಂಡವನ್ನು ಎದುರಿಸಲಿದೆ. ಟಿ20 ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿರುವ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಹೀಗಾಗಿ ಎರಡನೇ ಪಂದ್ಯದಲ್ಲೂ ಗೆಲುವಿನ ನಿರೀಕ್ಷೆಯಲ್ಲಿದೆ. ಇದಕ್ಕೆ ಪೂರಕವೆಂಬಂತೆ ಕೆಲ ದಿನಗಳಿಂದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾ (Team India) ಅದ್ಭುತ ಪ್ರದರ್ಶನ ನೀಡುತ್ತಿದೆ. ಭಾರತ ತಂಡ ಇದುವರೆಗೆ ಕೆರಿಬಿಯನ್ ತಂಡದ ವಿರುದ್ಧ ಸತತ 5 ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಫೆಬ್ರವರಿ 15 ರಂದು ಭಾರತವು ವೆಸ್ಟ್ ಇಂಡೀಸ್ ಅನ್ನು ಆರಾಮದಾಯಕ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾದರೆ, ಹರ್ಮನ್ ಸೇನೆಯು ಗುಂಪಿನಲ್ಲಿ ಅಗ್ರಸ್ಥಾನಕ್ಕೇರಲಿದೆ.
ಎರಡನೇ ಸ್ಥಾನದಲ್ಲಿ ಭಾರತ
ಸದ್ಯ ಟೀಂ ಇಂಡಿಯಾ ಮಹಿಳಾ ಟಿ20 ವಿಶ್ವಕಪ್ 2023 ರ ಗುಂಪು 2 ರಲ್ಲಿ ಸ್ಥಾನ ಪಡೆದಿದ್ದು, ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ತಂಡಗಳು ಸಹ ಈ ಗುಂಪಿನಲ್ಲಿವೆ. ಸದ್ಯ ಆಡಿರುವ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ ಗ್ರೂಪ್ 2 ರಲ್ಲಿ ಎರಡನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ಇಂಗ್ಲೆಂಡ್ ತಂಡವು ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ವಾಸ್ತವವಾಗಿ, ಟೀಂ ಇಂಡಿಯಾದ ನಿವ್ವಳ ರನ್ ರೇಟ್ ಗುಂಪಿನಲ್ಲಿ ಎರಡನೇ ಸ್ಥಾನಕ್ಕೆ ಕಾರಣವಾಗಿದೆ. ಪಂದ್ಯವನ್ನು ಗೆದ್ದ ನಂತರ ಟೀಂ ಇಂಡಿಯಾದ ನೆಟ್ ರನ್ ರೇಟ್ +0.497 ಆಗಿದೆ. ಇಂಗ್ಲೆಂಡ್ನ ನಿವ್ವಳ ರನ್ ರೇಟ್ +2.497 ಆಗಿದೆ. ಇವೆರಡನ್ನು ಹೊರತುಪಡಿಸಿ ಪಾಕಿಸ್ತಾನ -0.497, ಐರ್ಲೆಂಡ್ -2.215, ವೆಸ್ಟ್ ಇಂಡೀಸ್ -2.767 ನೆಟ್ ರನ್ ರೇಟ್ ಹೊಂದಿವೆ.
IND vs PAK: ಟಿ20 ವಿಶ್ವಕಪ್‌ನಲ್ಲಿ ಪಾಕ್ ತಂಡಕ್ಕೆ ಮಣ್ಣು ಮುಕ್ಕಿಸಿ 5 ದಾಖಲೆ ನಿರ್ಮಿಸಿದ ಟೀಂ ಇಂಡಿಯಾ..!
ಗುಂಪು-1ರಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನ
ಆಸ್ಟ್ರೇಲಿಯ ಗುಂಪು-1ರಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಕಾಂಗರೂ ತಂಡ ಇದುವರೆಗೆ ಆಡಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಬಳಿಕ ತನ್ನ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿತು. ಗುಂಪು-1ರಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಎರಡು ಗೆಲುವು ಸಾಧಿಸಿವೆ. ಕಾಂಗರೂ ತಂಡ ಉತ್ತಮ ನೆಟ್ ರನ್ ರೇಟ್‌ನೊಂದಿಗೆ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾದ ನಿವ್ವಳ ರನ್ ರೇಟ್ +2.834 ಆಗಿದ್ದರೆ, ಶ್ರೀಲಂಕಾದ ರನ್ ರೇಟ್ +0.430 ಆಗಿದೆ. ದಕ್ಷಿಣ ಆಫ್ರಿಕಾ +1.550 ನಿವ್ವಳ ರನ್ ದರದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಇನ್ನೂ ಗೆಲುವಿನ ನಿರೀಕ್ಷೆಯಲ್ಲಿವೆ. ಬಾಂಗ್ಲಾದೇಶ ನಿವ್ವಳ ರನ್ ರೇಟ್ -0.720 ಆಗಿದ್ದರೆ ನ್ಯೂಜಿಲೆಂಡ್ -4.050 ನಿವ್ವಳ ರನ್ ರೇಟ್‌ನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
