Women’s Asia Cup 2022 Final: ಟೀಮ್ ಇಂಡಿಯಾ ಭರ್ಜರಿ ಬೌಲಿಂಗ್: ಫೈನಲ್ ಗೆಲ್ಲಲು ಸಾಧಾರಣ ಸವಾಲು
Women's Asia Cup 2022 Final: ಟೀಮ್ ಇಂಡಿಯಾ ಪರ ರೇಣುಕಾ ಸಿಂಗ್ 3 ಓವರ್ಗಳಲ್ಲಿ ಕೇವಲ 5 ರನ್ ನೀಡಿ 3 ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್ ಹಾಗೂ ಸ್ನೇಹ್ ರಾಣಾ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
Women’s Asia Cup 2022 Final: ಬಾಂಗ್ಲಾದೇಶದ ಸಿಲ್ಹೆಟ್ನಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ ಫೈನಲ್ನಲ್ಲಿ ಭಾರತದ ವನಿತೆಯರ ವಿರುದ್ಧ ಶ್ರೀಲಂಕಾ (India W vs Srilanka W) ಮಹಿಳಾ ತಂಡವು ಅತ್ಯಲ್ಪ ಮೊತ್ತ ಕಲೆಹಾಕಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಟ್ಟಾಪಟ್ಟು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಟೀಮ್ ಇಂಡಿಯಾ ವನಿತೆಯರ ಸಾಂಘಿಕ ದಾಳಿಯಿಂದಾಗಿ ಲಂಕಾ ತಂಡವು ಉತ್ತಮ ಆರಂಭ ಪಡೆಯಲು ಸಾಧ್ಯವಾಗಿರಲಿಲ್ಲ. ರನೌಟ್ ಮೂಲಕ ಮೊದಲ ವಿಕೆಟ್ ಪಡೆದ ಟೀಮ್ ಇಂಡಿಯಾ ಆ ಬಳಿಕ ಅತ್ಯುತ್ತಮ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದರು. ಪರಿಣಾಮ ಕೇವಲ 18 ರನ್ಗಳಿಗೆ ಶ್ರೀಲಂಕಾ ತಂಡವು ಅಗ್ರ ಕ್ರಮಾಂಕದ 6 ಬ್ಯಾಟರ್ಗಳನ್ನು ಕಳೆದುಕೊಂಡಿತು.
ಚಮೇರಿ ಅಟ್ಟಾಪಟ್ಟು (8), ಅನುಷ್ಕಾ (2), ಮಾದವಿ (1), ನಿಲಾಕ್ಷಿ (6), ಹಾಸಿನಿ (0) ಹಾಗು ಕವಿಶಾ (1) ಒಂದಂಕಿ ರನ್ಗಳಿಸಿ ಪೆವಿಲಿಯನ್ಗೆ ಮರಳಿದರು. ಇತ್ತ ಭರ್ಜರಿ ದಾಳಿ ಸಂಘಟಿಸಿದ ರೇಣುಕಾ ಸಿಂಗ್ 3 ವಿಕೆಟ್ ಉರುಳಿಸಿ ಮಿಂಚಿದ್ದರು. ಪರಿಣಾಮ ಮೊದಲ 10 ಓವರ್ಗಳಲ್ಲಿ ಶ್ರೀಲಂಕಾ ತಂಡದ ಮೊತ್ತ 30 ರ ಗಡಿದಾಟಿರಲಿಲ್ಲ.
ಅಂತಿಮ ಹಂತದಲ್ಲಿ ರಣಸಿಂಘೆ ಅಜೇಯ 18 ಹಾಗೂ ಅಚಿನಿ ಅಜೇಯ 6 ರನ್ ಬಾರಿಸುವ ಮೂಲಕ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ತಂಡದ ಮೊತ್ತವನ್ನು 69 ಕ್ಕೆ ತಂದು ನಿಲ್ಲಿಸಿದರು.
Innings Break!
Outstanding bowling display from #TeamIndia! ? ?
3⃣ wickets for Renuka Thakur 2⃣ wickets each for @SnehRana15 & Rajeshwari Gayakwad
Our chase coming up shortly. ? ?
Scorecard ▶️ https://t.co/r5q0NTVLQC #AsiaCup2022 | #INDvSL pic.twitter.com/LYj2VQX4wh
— BCCI Women (@BCCIWomen) October 15, 2022
ಟೀಮ್ ಇಂಡಿಯಾ ಪರ ರೇಣುಕಾ ಸಿಂಗ್ 3 ಓವರ್ಗಳಲ್ಲಿ ಕೇವಲ 5 ರನ್ ನೀಡಿ 3 ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್ ಹಾಗೂ ಸ್ನೇಹ್ ರಾಣಾ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
ಭಾರತ ಪ್ಲೇಯಿಂಗ್ 11: ಶಫಾಲಿ ವರ್ಮಾ , ಸ್ಮೃತಿ ಮಂಧಾನ , ಜೆಮಿಮಾ ರಾಡ್ರಿಗಸ್ , ದಯಾಲನ್ ಹೇಮಲತಾ , ಹರ್ಮನ್ಪ್ರೀತ್ ಕೌರ್ (ನಾಯಕಿ) , ದೀಪ್ತಿ ಶರ್ಮಾ , ರಿಚಾ ಘೋಷ್ , ಪೂಜಾ ವಸ್ತ್ರಾಕರ್ , ಸ್ನೇಹ ರಾಣಾ , ರೇಣುಕಾ ಸಿಂಗ್ , ರಾಜೇಶ್ವರಿ ಗಾಯಕ್ವಾಡ್
ಶ್ರೀಲಂಕಾ ಪ್ಲೇಯಿಂಗ್ 11: ಚಾಮರಿ ಅಟ್ಟಾಪಟ್ಟು (ನಾಯಕಿ) , ಅನುಷ್ಕಾ ಸಂಜೀವನಿ, ಹರ್ಷಿತಾ ಮಾದವಿ , ಹಾಸಿನಿ ಪೆರೇರಾ , ನೀಲಾಕ್ಷಿ ಡಿ ಸಿಲ್ವಾ , ಕವಿಶಾ ದಿಲ್ಹಾರಿ , ಮಲ್ಶಾ ಶೆಹಾನಿ , ಓಷದಿ ರಣಸಿಂಗ್ , ಸುಗಂದಿಕಾ ಕುಮಾರಿ , ಇನೋಕಾ ರಣವೀರ , ಅಚಿನಿ ಕುಲಸ್.