Asia Cup 2024: ಏಷ್ಯಾಕಪ್ ಸೆಮಿಫೈನಲ್ ವೇಳಾಪಟ್ಟಿ ಇಲ್ಲಿದೆ
Women’s Asia Cup 2024: ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ ಟೂರ್ನಿಯು ಸೆಮಿಫೈನಲ್ ಹಂತಕ್ಕೆ ಬಂದು ನಿಂತಿದೆ. ಅದರಂತೆ ಭಾರತ, ಪಾಕಿಸ್ತಾನ್, ಬಾಂಗ್ಲಾದೇಶ್ ಮತ್ತು ಶ್ರೀಲಂಕಾ ತಂಡಗಳು ನಾಕೌಟ್ ಹಂತದಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯಗಳಲ್ಲಿ ಜಯ ಸಾಧಿಸುವ ಎರಡು ತಂಡಗಳು ಜುಲೈ 28 ರಂದು ನಡೆಯುವ ಫೈನಲ್ನಲ್ಲಿ ಮುಖಾಮುಖಿಯಾಗಲಿದೆ.
ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯು ನಾಕೌಟ್ ಹಂತಕ್ಕೆ ಬಂದು ನಿಂತಿದೆ. ಎಂಟು ತಂಡಗಳ ನಡುವಣ ಈ ಟೂರ್ನಿಯಿಂದ ಈಗಾಗಲೇ 4 ತಂಡಗಳು ಹೊರಬಿದ್ದಿದ್ದು, ನಾಲ್ಕು ತಂಡಗಳು ಸೆಮಿಫೈನಲ್ ಹಂತಕ್ಕೇರಿದೆ. ಗ್ರೂಪ್-A ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ಭಾರತ ತಂಡವು ಸೆಮಿಫೈನಲ್ಗೇರಿದರೆ, ದ್ವಿತೀಯ ಸ್ಥಾನದೊಂದಿಗೆ ಪಾಕಿಸ್ತಾನ್ ತಂಡ ಮುಂದಿನ ಹಂತಕ್ಕೆ ಪ್ರವೇಶಿಸಿದೆ.
ಹಾಗೆಯೇ ಗ್ರೂಪ್-B ಅಂಕಪಟ್ಟಿಯಲ್ಲಿ ಶ್ರೀಲಂಕಾ ತಂಡವು ಮೊದಲ ಸ್ಥಾನ ಅಲಂಕರಿಸಿದರೆ, ಬಾಂಗ್ಲಾದೇಶ್ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ಉಭಯ ತಂಡಗಳು ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿದೆ.
ಅದರಂತೆ ಜುಲೈ 26 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯಗಳಲ್ಲಿ ಈ ನಾಲ್ಕು ತಂಡಗಳು ಕಣಕ್ಕಿಳಿಯಲಿವೆ. ಇಲ್ಲಿ ಭಾರತ ತಂಡದ ಎದುರಾಳಿಯಾಗಿ ಕಣಕ್ಕಿಳಿಯುತ್ತಿರುವುದು ಬಾಂಗ್ಲಾದೇಶ್ ತಂಡ. ಹಾಗೆಯೇ ದ್ವಿತೀಯ ಸೆಮಿಫೈನಲ್ನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ.
ಸೆಮಿಫೈನಲ್ ವೇಳಾಪಟ್ಟಿ:
- ಜುಲೈ 26: ಭಾರತ vs ಬಾಂಗ್ಲಾದೇಶ್ (ದಂಬುಲ್ಲಾ ರಂಗಿರಿ ಸ್ಟೇಡಿಯಂ )
- ಜುಲೈ 26: ಶ್ರೀಲಂಕಾ vs ಪಾಕಿಸ್ತಾನ್ (ದಂಬುಲ್ಲಾ ರಂಗಿರಿ ಸ್ಟೇಡಿಯಂ)
ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಮೊದಲ ಸೆಮಿಫೈನಲ್ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಯಿಂದ ಶುರುವಾಗಲಿದೆ. ಹಾಗೆಯೇ ಶ್ರೀಲಂಕಾ ಮತ್ತು ಪಾಕಿಸ್ತಾನ್ ನಡುವಣ ಪಂದ್ಯವು ರಾತ್ರಿ 7 ಗಂಟೆಗೆ ಆರಂಭವಾಗಲಿದೆ.
ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದ ತಂಡಗಳು:
- ನೇಪಾಳ
- ಯುಎಇ
- ಥೈಲ್ಯಾಂಡ್
- ಮಲೇಷ್ಯಾ
ಸೆಮಿಫೈನಲ್ನಲ್ಲಿ ಕಣಕ್ಕಿಳಿಯಲಿರುವ ತಂಡಗಳು:
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ರೇಣುಕಾ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ತನುಜಾ ಕನ್ವರ್, ಸಜನಾ ಸಜೀವನ್.
ಪಾಕಿಸ್ತಾನ್ ತಂಡ: ನಿದಾ ದಾರ್ (ನಾಯಕಿ), ಇರಾಮ್ ಜಾವೇದ್, ಸಾದಿಯಾ ಇಕ್ಬಾಲ್, ಅಲಿಯಾ ರಿಯಾಜ್, ಡಯಾನಾ ಬೇಗ್, ಫಾತಿಮಾ ಸನಾ, ಗುಲ್ ಫಿರೋಜಾ, ಮುನೀಬಾ ಅಲಿ, ಸಿದ್ರಾ ಅಮೀನ್, ನಜಿಹಾ ಅಲ್ವಿ, ಸೈಯದಾ ಅರೂಬ್ ಶಾ, ನಶ್ರಾ ಸುಂಧು, ತಸ್ಮಿಯಾ ರುಬಾಬ್, ಒಮೈಮಾ ಸೊಹೈಲ್, ತುಬಾ ಹಸನ್ .
ಶ್ರೀಲಂಕಾ ತಂಡ: ಚಾಮರಿ ಅಥಾಪತ್ತು (ನಾಯಕಿ), ಅನುಷ್ಕಾ ಸಂಜೀವನಿ, ಹರ್ಷಿತಾ ಸಮರವಿಕ್ರಮ, ಹಾಸಿನಿ ಪೆರೇರಾ, ಅಮಾ ಕಾಂಚನಾ, ಉದೇಶಿಕಾ ಪ್ರಬೋದನಿ, ಕಾವ್ಯಾ ಕವಿಂದಿ, ಸುಗಂದಿಕಾ ಕುಮಾರಿ, ಅಚಿನಿ ಕುಲಸೂರಿಯಾ, ಕವೀಶಾ ದಿಲ್ಹಾರಿ, ವಿಶ್ಮಿ ಗುಣರತ್ನೆ, ಶಶಿನಿ, ಶಶಿನಿ ಪ್ರಿಯದರ್ಶನಿ, ಶಶಿನಿ ಪ್ರಿಯದರ್ಶನ್ ಗಿಮ್ಹಾನಿ.
ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಗುಡ್ ಬೈ?
ಬಾಂಗ್ಲಾದೇಶ್ ತಂಡ: ನಿಗರ್ ಸುಲ್ತಾನಾ ಜೋಟಿ (ನಾಯಕಿ), ಶೋರ್ನಾ ಅಕ್ಟರ್, ನಹಿದಾ ಅಕ್ಟರ್, ಮುರ್ಷಿದಾ ಖಾತುನ್, ಶೋರಿಫಾ ಖಾತುನ್, ರಿತು ಮೋನಿ, ರುಬ್ಯಾ ಹೈದರ್ ಜೆಲಿಕ್, ಸುಲ್ತಾನಾ ಖಾತುನ್, ಜಹಾನಾರಾ ಆಲಂ, ದಿಲಾರಾ ಅಕ್ಟರ್, ಇಷ್ಮಾ ತಂಜಿಮ್, ರಬೇಯಾ ಖಾನ್, ರುಮಾನಾ ಅಹ್ಮದ್, ಸಬಿಕುನ್ ಅಕ್ಟರ್ ನಹರ್ ಜೆಸ್ಮಿನ್.