IND vs AUS: ಅರ್ಧಶತಕ ಸಿಡಿಸಿಯೂ ತಂಡದ ಸೋಲಿಗೆ ಕಾರಣರಾದ ಹರ್ಮನ್​ಪ್ರೀತ್ ಕೌರ್..!

Harmanpreet Kaur: ಟೀಂ ಇಂಡಿಯಾದ ಈ ಸೋಲಿಗೆ ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಪ್ರಮುಖ ಕಾರಣ ಎನ್ನಬಹುದು. ತಂಡದ ಟಾಪ್ ಆರ್ಡರ್ ತಮ್ಮ ಕೆಲಸವನ್ನು ಮಾಡಲಿಲ್ಲ. ಮಧ್ಯಮ ಕ್ರಮಾಂಕ ಕೊಂಚ ಕೈಹಿಡಿಯಿತ್ತಾದರೂ ಅವರ ಇನ್ನಿಂಗ್ಸ್​ನಲ್ಲಿ ಪವರ್ ಇರಲಿಲ್ಲ. ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಅರ್ಧಶತಕ ಸಿಡಿಸಿದರಾದರೂ ತಮ್ಮ ಆಮೆಗತಿಯ ಬ್ಯಾಟಿಂಗ್​ನಿಂದಲೇ ತಂಡದ ಸೋಲಿಗೆ ಪ್ರಮುಖ ಕಾರಣರಾದರು.

IND vs AUS: ಅರ್ಧಶತಕ ಸಿಡಿಸಿಯೂ ತಂಡದ ಸೋಲಿಗೆ ಕಾರಣರಾದ ಹರ್ಮನ್​ಪ್ರೀತ್ ಕೌರ್..!
ಹರ್ಮನ್​ಪ್ರೀತ್ ಕೌರ್
Follow us
ಪೃಥ್ವಿಶಂಕರ
|

Updated on:Oct 13, 2024 | 11:58 PM

2024 ರ ಮಹಿಳಾ ಟಿ20 ವಿಶ್ವಕಪ್​ನ ತನ್ನ ಕೊನೆಯ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ರನ್‌ಗಳಿಂದ ಸೋತ ಟೀಂ ಇಂಡಿಯಾ ಸೆಮಿ ಫೈನಲ್ ಟಿಕೆಟ್ ಪಡೆಯುವಲ್ಲಿ ಭಾಗಶಃ ವಿಫಲವಾಗಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಎಂಟು ವಿಕೆಟ್‌ಗೆ 151 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ತಂಡ 9 ವಿಕೆಟ್‌ಗೆ 142 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟರೆ, ಇತ್ತ ಈ ಸೋಲಿನಿಂದ ಭಾರತದ ಸೆಮಿಫೈನಲ್‌ ಆಸೆ ಬಹುತೇಕ ಅಂತ್ಯಗೊಂಡಿದೆ. ಟೀಂ ಇಂಡಿಯಾದ ಈ ಸೋಲಿಗೆ ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಪ್ರಮುಖ ಕಾರಣ ಎನ್ನಬಹುದು. ತಂಡದ ಟಾಪ್ ಆರ್ಡರ್ ತಮ್ಮ ಕೆಲಸವನ್ನು ಮಾಡಲಿಲ್ಲ. ಮಧ್ಯಮ ಕ್ರಮಾಂಕ ಕೊಂಚ ಕೈಹಿಡಿಯಿತ್ತಾದರೂ ಅವರ ಇನ್ನಿಂಗ್ಸ್​ನಲ್ಲಿ ಪವರ್ ಇರಲಿಲ್ಲ. ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಅರ್ಧಶತಕ ಸಿಡಿಸಿದರಾದರೂ ತಮ್ಮ ಆಮೆಗತಿಯ ಬ್ಯಾಟಿಂಗ್​ನಿಂದಲೇ ತಂಡದ ಸೋಲಿಗೆ ಪ್ರಮುಖ ಕಾರಣರಾದರು.

ಕೈಕೊಟ್ಟ ಟಾಪ್ ಆರ್ಡರ್

ಮೇಲೆ ಹೇಳಿದಂತೆ ತಂಡದ ಸೋಲಿಗೆ ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಪ್ರಮುಖ ಕಾರಣ. ಇಡೀ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡದ ಸ್ಮೃತಿ 6 ರನ್​ಗಳಿಗೆ ಸುಸ್ತಾದರೆ, ಶಫಾಲಿ ಆಟ 20 ರನ್​ಗಳಿಗೆ ಅಂತ್ಯವಾಯಿತು. ಜೆಮೀಮಾ ಕೂಡ 16 ರನ್​ಗಳಿಗೆ ಸುಸ್ತಾದರು. ಕೊನೆಯ ಆಸರೆಯಾಗಿದ್ದ ರಿಚಾ ಘೋಷ್, ಇಲ್ಲದ ರನ್ ಕದಿಯಲು ಹೋಗಿ ರನೌಟ್​ಗೆ ಬಲಿಯಾದರು. ಇದೆಲ್ಲದರ ನಡುವೆ ನಾಯಕಿ ಹರ್ಮನ್​ಪ್ರೀತ್ ಆಡಿದ ನಿಧಾನ ಗತಿಯ ಬ್ಯಾಟಿಂಗ್ ಕೂಡ ತಂಡದ ಸೋಲಿಗೆ ಕಾರಣವಾಯ್ತು.

17ನೇ ಓವರ್​ನಲ್ಲಿ 5 ಡಾಟ್ ಬಾಲ್

ಈ ಮಹತ್ವದ ಪಂದ್ಯದಲ್ಲಿ ಏಕಾಂಗಿಯಾಗಿ ನಿಂತು ಗೆಲುವಿಗಾಗಿ ಹರ್ಮನ್ ಹೋರಾಟ ನಡೆಸಿದರಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಇದಕ್ಕೆ ಕಾರಣ ಹರ್ಮನ್​ಪ್ರೀತ್ ರನ್ ಕಲೆಹಾಕದೆ ಬಿಟ್ಟ ಡಾಟ್ ಬಾಲ್​ಗಳು ಪ್ರಮುಖ ಕಾರಣ. ತಮ್ಮ ಇನ್ನಿಂಗ್ಸ್​ನಲ್ಲಿ 47 ಎಸೆತಗಳನ್ನು ಎದುರಿಸಿದ ಹರ್ಮನ್​ಪ್ರೀತ್ 114 ರ ಸ್ಟ್ರೈಕ್​ ರೇಟ್​ನಲ್ಲಿ 6 ಬೌಂಡರಿ ಸಹಿತ 57 ರನ್​ ಕಲೆಹಾಕಲಷ್ಟೇ ಶಕ್ತರಾದರು. ಅಲ್ಲದೆ ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ನೀಡಿದ 17ನೇ ಓವರ್​ನಲ್ಲಿ ಬರೋಬ್ಬರಿ 5 ಎಸೆತಗಳು ಡಾಟ್ ಬಾಲ್ ಆದವು. ಅಂದರೆ ಈ ಐದು ಎಸೆತಗಳಲ್ಲಿ ಒಂದೇ ಒಂದು ರನ್​ ಬರಲಿಲ್ಲ. ಕೊನೆಯ ಎಸೆತ ಸಿಂಗಲ್​ಗೆ ಮಾತ್ರ ಸೀಮಿತವಾಯಿತು.

ಹರ್ಮನ್​ಪ್ರೀತ್ ಅರ್ಧಶತಕ ವ್ಯರ್ಥ

ಇದು ಮತ್ತಷ್ಟು ಒತ್ತಡ ಹೇರಿತು. ಹೀಗಾಗಿ 16 ಓವರ್​ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 111 ರನ್ ಕಲೆಹಾಕಿದ್ದ ಟೀಂ ಇಂಡಿಯಾ, ಉಳಿದಿದ್ದ 4 ಓವರ್​​ಗಳಲ್ಲಿ ಪ್ರಮುಖ 5 ವಿಕೆಟ್​ಗಳನ್ನು ಕಳೆದಕೊಳ್ಳಬೇಕಾಯಿತು. ಒಂದೆಡೆ ವಿಕೆಟ್ ಉರುಳುತ್ತಿರುವಾಗ ನಾಯಕಿಯಾಗಿ ಕ್ರೀಸ್​ನಲ್ಲಿ ನಿಂತು ಇನ್ನಿಂಗ್ಸ್ ಕಟ್ಟುವ ಜವಬ್ದಾರಿಯನ್ನು ಹರ್ಮನ್​ಪ್ರೀತ್ ನಿಭಾಯಿಸಿದರು. ಆದರೆ ಅವಕಾಶ ಸಿಕ್ಕಾಗ ಬಿಗ್​ ಶಾಟ್ ಆಡುವುದನ್ನು ಮರೆತರು. ಹಾಗೆಯೇ ಸಿಂಗಲ್ಸ್, ಡಬಲ್ಸ್ ಕದಿಯುವುದರಲ್ಲಿ ಎಡವಿದರು. ಒಟ್ಟಾರೆಯಾಗಿ ಹರ್ಮನ್​ಪ್ರೀತ್​ ಗೆಲುವಿಗಾಗಿ ಹೋರಾಟ ನಡೆಸಿದರಾದರೂ ಅವರ ಆಮೆಗತಿಯ ಬ್ಯಾಟಿಂಗ್ ತಂಡದ ಸೋಲಿಗೆ ಪ್ರಮುಖ ಕಾರಣವಾಯ್ತು ಎನ್ನಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:40 pm, Sun, 13 October 24

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ