ಅಕ್ಟೋಬರ್ 3 ರಿಂದ ಆರಂಭವಾಗಿರುವ ಮಹಿಳಾ ಟಿ20 ವಿಶ್ವಕಪ್ ಪರಿಷ್ಕೃತ ವೇಳಾಪಟ್ಟಿಯನ್ನು ಐಸಿಸಿ ಇಂದು ಪ್ರಕಟಿಸಿದೆ. ವಾಸ್ತವವಾಗಿ ಮಹಿಳೆಯರ ಟಿ20 ವಿಶ್ವಕಪ್ ಅನ್ನು ಆರಂಭದಲ್ಲಿ ಬಾಂಗ್ಲಾದೇಶದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಅಲ್ಲಿ ಹದಗ್ಗೆಟ್ಟ ಪರಿಸ್ಥಿತಿಗಳಿಂದಾಗಿ ಈ ಚುಟುಕು ಸಮರವನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ವರ್ಗಾಯಿಸಲಾಯಿತು. ಈ ಟೂರ್ನಿಯ ಪಂದ್ಯಗಳು ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಮತ್ತು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಅಕ್ಟೋಬರ್ 3 ರಂದು ಆರಂಭವಾಗಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಇನ್ನು ಟೀಂ ಇಂಡಿಯಾದ ವೇಳಾಪಟ್ಟಿಯನ್ನು ಗಮನಿಸುವುದಾದರೆ..ಹರ್ಮನ್ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 4 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಆ ನಂತರ ಅಕ್ಟೋಬರ್ 6 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಐಸಿಸಿ ಮಹಿಳಾ ಟಿ20 ವಿಶ್ವಕಪ್ 2024ರಲ್ಲಿ ಈ ಬಾರಿ ಒಟ್ಟು 23 ಪಂದ್ಯಗಳು ನಡೆಯಲಿವೆ. ಈ ಪಂದ್ಯಾವಳಿಯು ಅಕ್ಟೋಬರ್ 3 ರಿಂದ ಆರಂಭವಾಗಲಿದ್ದು, ಅಕ್ಟೋಬರ್ 20 ರವರೆಗೆ ನಡೆಯಲಿದೆ. ಇದಲ್ಲದೆ ಈ ಬಾರಿ ಸೆಮಿಫೈನಲ್ ಮತ್ತು ಫೈನಲ್‌ಗೆ ಮೀಸಲು ದಿನವನ್ನು ಸಹ ಇರಿಸಲಾಗಿದೆ.
The stage is set 🔥
The updated fixture list for the ICC Women’s T20 World Cup 2024 is here 🗒
➡ https://t.co/YmkAjfi4Xe pic.twitter.com/UYnvIRtahZ
— ICC (@ICC) September 17, 2024
ಈ ಬಾರಿ 10 ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಈ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ ಇದ್ದರೆ, ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ ತಂಡಗಳನ್ನು ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ. ಎರಡೂ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಸೆಮಿಫೈನಲ್ನಲ್ಲಿ ಗೆದ್ದ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲ್ಲಿವೆ.
ಅಕ್ಟೋಬರ್ 3, ಗುರುವಾರ | ಬಾಂಗ್ಲಾದೇಶ vs ಸ್ಕಾಟ್ಲೆಂಡ್ | ಬಿ | ಮಧ್ಯಾಹ್ನ 3:30 | ಶಾರ್ಜಾ |
ಅಕ್ಟೋಬರ್ 3, ಗುರುವಾರ | ಪಾಕಿಸ್ತಾನ vs ಶ್ರೀಲಂಕಾ | ಎ | ಸಂಜೆ 7:30 | ಶಾರ್ಜಾ |
ಅಕ್ಟೋಬರ್ 4, ಶುಕ್ರವಾರ | ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ | ಬಿ | ಮಧ್ಯಾಹ್ನ 3:30 | ದುಬೈ |
ಅಕ್ಟೋಬರ್ 4, ಶುಕ್ರವಾರ | ಭಾರತ vs ನ್ಯೂಜಿಲ್ಯಾಂಡ್ | ಎ | ಸಂಜೆ 7:30 | ದುಬೈ |
ಅಕ್ಟೋಬರ್ 5, ಶನಿವಾರ | ಬಾಂಗ್ಲಾದೇಶ vs ಇಂಗ್ಲೆಂಡ್ | ಬಿ | ಮಧ್ಯಾಹ್ನ 3:30 | ಶಾರ್ಜಾ |
ಅಕ್ಟೋಬರ್ 5, ಶನಿವಾರ | ಆಸ್ಟ್ರೇಲಿಯಾ vs ಶ್ರೀಲಂಕಾ | ಎ | ಸಂಜೆ 7:30 | ಶಾರ್ಜಾ |
ಅಕ್ಟೋಬರ್ 6, ಭಾನುವಾರ | ಭಾರತ vs ಪಾಕಿಸ್ತಾನ | ಎ | ಮಧ್ಯಾಹ್ನ 3:30 | ದುಬೈ |
ಅಕ್ಟೋಬರ್ 6, ಭಾನುವಾರ | ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್ | ಎ | ಸಂಜೆ 7:30 | ದುಬೈ |
ಅಕ್ಟೋಬರ್ 7, ಸೋಮವಾರ | ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ | ಬಿ | ಸಂಜೆ 7:30 | ಶಾರ್ಜಾ |
ಅಕ್ಟೋಬರ್ 8, ಮಂಗಳವಾರ | ಆಸ್ಟ್ರೇಲಿಯಾ vs ನ್ಯೂಜಿಲೆಂಡ್ | ಎ | ಸಂಜೆ 7:30 | ಶಾರ್ಜಾ |
ಅಕ್ಟೋಬರ್ 9, ಬುಧವಾರ | ದಕ್ಷಿಣ ಆಫ್ರಿಕಾ vs ಸ್ಕಾಟ್ಲೆಂಡ್ | ಬಿ | ಮಧ್ಯಾಹ್ನ 3:30 | ದುಬೈ |
ಅಕ್ಟೋಬರ್ 9, ಬುಧವಾರ | ಭಾರತ vs ಶ್ರೀಲಂಕಾ | ಎ | ಸಂಜೆ 7:30 | ದುಬೈ |
ಅಕ್ಟೋಬರ್ 10, ಗುರುವಾರ | ಬಾಂಗ್ಲಾದೇಶ vs ವೆಸ್ಟ್ ಇಂಡೀಸ್ | ಬಿ | ಸಂಜೆ 7:30 | ಶಾರ್ಜಾ |
ಅಕ್ಟೋಬರ್ 11, ಶುಕ್ರವಾರ | ಆಸ್ಟ್ರೇಲಿಯಾ vs ಪಾಕಿಸ್ತಾನ | ಎ | ಸಂಜೆ 7:30 | ದುಬೈ |
ಅಕ್ಟೋಬರ್ 12, ಶನಿವಾರ | ನ್ಯೂಜಿಲ್ಯಾಂಡ್ vs ಶ್ರೀಲಂಕಾ | ಎ | ಮಧ್ಯಾಹ್ನ 3:30 | ಶಾರ್ಜಾ |
ಅಕ್ಟೋಬರ್ 12, ಶನಿವಾರ | ಬಾಂಗ್ಲಾದೇಶ vs ದಕ್ಷಿಣ ಆಫ್ರಿಕಾ | ಬಿ | ಸಂಜೆ 7:30 | ದುಬೈ |
ಅಕ್ಟೋಬರ್ 13, ಭಾನುವಾರ | ಇಂಗ್ಲೆಂಡ್ vs ಸ್ಕಾಟ್ಲೆಂಡ್ | ಬಿ | ಮಧ್ಯಾಹ್ನ 3:30 | ಶಾರ್ಜಾ |
ಅಕ್ಟೋಬರ್ 13, ಭಾನುವಾರ | ಭಾರತ vs ಆಸ್ಟ್ರೇಲಿಯಾ | ಎ | ಸಂಜೆ 7:30 | ಶಾರ್ಜಾ |
ಅಕ್ಟೋಬರ್ 14, ಸೋಮವಾರ | ಪಾಕಿಸ್ತಾನ vs ನ್ಯೂಜಿಲ್ಯಾಂಡ್ | ಎ | ಸಂಜೆ 7:30 | ದುಬೈ |
ಅಕ್ಟೋಬರ್ 15, ಮಂಗಳವಾರ | ಇಂಗ್ಲೆಂಡ್ vs ವೆಸ್ಟ್ ಇಂಡೀಸ್ | ಬಿ | ಸಂಜೆ 7:30 | ದುಬೈ |
ಅಕ್ಟೋಬರ್ 17, ಗುರುವಾರ | ಸೆಮಿಫೈನಲ್ 1 | ಸಂಜೆ 7:30 | ದುಬೈ | |
ಅಕ್ಟೋಬರ್ 18, ಶುಕ್ರವಾರ | ಸೆಮಿಫೈನಲ್ 2 | ಸಂಜೆ 7:30 | ಶಾರ್ಜಾ | |
ಅಕ್ಟೋಬರ್ 20, ಭಾನುವಾರ | ಫೈನಲ್ | ಸಂಜೆ 7:30 | ದುಬೈ |
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:43 pm, Tue, 17 September 24