AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup: ಬಂದ ಪುಟ್ಟ ಹೋದ ಪುಟ್ಟ; ಭಾರತದ ಬ್ಯಾಟಿಂಗ್ ಬಂಡವಾಳ ಬಯಲು

India Batting Collapse vs USA in T20 World Cup Opener: 2026ರ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತದ ಬಲಿಷ್ಠ ಬ್ಯಾಟಿಂಗ್ ವಿಭಾಗ ಅನಿರೀಕ್ಷಿತ ಕುಸಿತ ಕಂಡಿತು. ಪವರ್‌ಪ್ಲೇನಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತು. ಸೂರ್ಯಕುಮಾರ್ ಯಾದವ್ ಅವರ ಅಜೇಯ 84 ರನ್‌ಗಳ ಹೋರಾಟದಿಂದ ತಂಡವು 161 ರನ್‌ಗಳ ಸ್ಪರ್ಧಾತ್ಮಕ ಮೊತ್ತ ತಲುಪಿತು. ಇದು ಅಮೆರಿಕದ ಬೌಲಿಂಗ್ ಪ್ರದರ್ಶನವನ್ನು ಎತ್ತಿ ತೋರಿಸುವ ಮೂಲಕ, ಭಾರತಕ್ಕೆ ಅಚ್ಚರಿಯ ಸವಾಲೊಡ್ಡಿತು.

T20 World Cup: ಬಂದ ಪುಟ್ಟ ಹೋದ ಪುಟ್ಟ; ಭಾರತದ ಬ್ಯಾಟಿಂಗ್ ಬಂಡವಾಳ ಬಯಲು
Team India
ಪೃಥ್ವಿಶಂಕರ
|

Updated on:Feb 07, 2026 | 9:20 PM

Share

2026 ರ ಟಿ20 ವಿಶ್ವಕಪ್​​ನ (T20 World Cup 2026) ಮೊದಲ ದಿನವೇ ಪಂದ್ಯವನ್ನಾಡಿದ ಆತಿಥೇಯ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕ ತಂಡವನ್ನು (India vs USA) ಎದುರಿಸಿತು. ಈ ಪಂದ್ಯಕ್ಕೂ ಮುನ್ನ ಅನುಭವಿಗಳು ಹಾಗೂ ಪರಿಣಿತರ ಹೇಳಿಕೆಯ ಪ್ರಕಾರ, ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಟೀಂ ಇಂಡಿಯಾ, ಯುಎಸ್​ಎ ಬೌಲಿಂಗ್ ವಿಭಾಗವನ್ನು ಪುಡಿಪುಡಿ ಮಾಡಲಿದೆ ಎನ್ನಲಾಗುತ್ತಿತ್ತು. ಆದರೆ ಪಂದ್ಯ ಆರಂಭವಾದ ಮೊದಲ 6 ಓವರ್​ಗಳಲ್ಲೇ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗದ ನ್ಯೂನತೆ ಜಗಜ್ಜಾಹೀರಾಯಿತು.

ಬ್ಯಾಟಿಂಗ್ ವಿಭಾಗದ ಕಳಪೆ ಪ್ರದರ್ಶನ

ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಆವೃತ್ತಿಯನ್ನು ಆಡುತ್ತಿರುವ ಅಮೆರಿಕ ತಂಡ ತನ್ನ ಮೊದಲ ಆವೃತ್ತಿಯಲ್ಲಿ ಅಂದರೆ 2024 ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಇದೀಗ ಈ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾದ ಅಹಂ ಮುರಿಯಿತು. ಅನಾನುಭವಿ ಯುಎಸ್​ಎ ತಂಡದ ಎದುರು ಭಾರತದ ಬ್ಯಾಟರ್​ಗಳ ಗರ್ವಭಂಗವಾಯಿತು. ಅಮೆರಿಕ ತಂಡದ ಕಾರ್ಯತಂತ್ರದ ಮುಂದೆ ಮಂಡಿಯೂರಿದ ಟೀಂ ಇಂಡಿಯಾ ಬ್ಯಾಟರ್​ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇದರ ಫಲವಾಗಿ ತಂಡದ ಪ್ರಮುಖ 4 ವಿಕೆಟ್​ಗಳು ಪವರ್ ಪ್ಲೇ ಒಳಗೆ ಪತನಗೊಂಡವು.

ಅಭಿಷೇಕ್ ಗೋಲ್ಡನ್ ಡಕ್

ಭಾರತದ ಪರ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದರು. ಮೊದಲ ಓವರ್​ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಕಿಶನ್ ತಂಡದ ಇನ್ನಿಂಗ್ಸ್ ಆರಂಭಿಸಿದರು. ಆದರೆ ಮುಂದಿನ ಓವರ್​ನಲ್ಲಿ ಸ್ಟ್ರೈಕ್​ಗೆ ಬಂದ ಅಭಿಷೇಕ್ ಶರ್ಮಾ ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಇದರಿಂದ ಅಭಿಷೇಕ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

ಪವರ್ ಪ್ಲೇನಲ್ಲೇ 4 ವಿಕೆಟ್

ಆ ನಂತರ ಕಿಶನ್ ಹಾಗೂ ತಿಲಕ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಶುರು ಮಾಡಿದರು. ಇದೇ ಹಂತದಲ್ಲಿ ಕಿಶನ್​ಗೆ ಜೀವದಾನವೂ ಸಿಕ್ಕಿತು. ಆದರೆ ಇದನ್ನು ಸದುಪಯೋಗಪಡಿಸಿಕೊಳ್ಳದ ಕಿಶನ್ 6ನೇ ಓವರ್​ನ 2ನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಅದೇ ಓವರ್​ನಲ್ಲಿ ತಿಲಕ್ ವರ್ಮಾ ಕೂಡ ಪೆವಿಲಿಯನ್ ಸೇರಿಕೊಂಡರು. ಆ ನಂತರ ಬಂದ ಶಿವಂ ದುಬೆ ಕೂಡ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದರು. ಹೀಗಾಗಿ ಟೀಂ ಇಂಡಿಯಾದ ಪ್ರಮುಖ 3 ವಿಕೆಟ್​ಗಳು ಒಂದೇ ಓವರ್​ನಲ್ಲಿ ಅಂದರೆ 6ನೇ ಓವರ್​ನಲ್ಲೇ ಪತನಗೊಂಡವು. ಆರಂಭಿಕ ವಿಕೆಟ್ ಪತನದ ಒತ್ತಡಕ್ಕೊಳಗಾದ ರಿಂಕು ಸಿಂಗ್ ಕೂಡ ರನ್ ಗಳಿಸಲು ತಿಣುಕಾಡಿ 6 ರನ್​ಗಳಿಗೆ ಸುಸ್ತಾದರು. ಹಾರ್ದಿಕ್ ಪಾಂಡ್ಯ ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡುವುದನ್ನು ಬಿಟ್ಟು ಎಂದಿನಂತೆ ಹೊಡಿಬಡಿ ಆಟಕ್ಕೆ ಮುಂದಾಗಿ 5 ರನ್​ಗಳಿಗೆ ಸುಸ್ತಾದರು. ಅಕ್ಷರ್ ಇನ್ನಿಂಗ್ಸ್ ಕೂಡ 14 ರನ್​ಗಳಿಗೆ ಅಂತ್ಯವಾಯಿತು.

ಸೂರ್ಯ ಏಕಾಂಗಿ ಹೋರಾಟ

ಒಂದೆಡೆ ತಂಡದ ವಿಕೆಟ್​ಗಳು ತರಗೆಲೆಗಳಂತೆ ಉದುರುತ್ತಿದ್ದರೆ, ಇನ್ನೊಂದು ತುದಿಯಲ್ಲಿ ನಾಯಕನ ಜವಾಬ್ದಾರಿ ಇನ್ನಿಂಗ್ಸ್ ಆಡಿದ ಸೂರ್ಯಕುಮಾರ್ ಯಾದವ್ ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ಸೂರ್ಯ 49 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 84 ರನ್ ಬಾರಿಸಿದರು. ಸೂರ್ಯ ಅವರ ಈ ಅರ್ಧಶತಕದಿಂದಾಗಿ ಭಾರತ 161 ರನ್ ಕಲೆಹಾಕಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:11 pm, Sat, 7 February 26

ನಿಂದಿಸಿದ ಶ್ರೀನಿವಾಸ್​​ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್
ನಿಂದಿಸಿದ ಶ್ರೀನಿವಾಸ್​​ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್
ಎಲೆಕ್ಟ್ರಾನಿಕ್ಸ್ ಘಟಕ ನಿರ್ಮಾಣಕ್ಕೆ ಕರ್ನಾಟಕಕ್ಕೆ 10,000 ಕೋಟಿ ಅನುದಾನ
ಎಲೆಕ್ಟ್ರಾನಿಕ್ಸ್ ಘಟಕ ನಿರ್ಮಾಣಕ್ಕೆ ಕರ್ನಾಟಕಕ್ಕೆ 10,000 ಕೋಟಿ ಅನುದಾನ
ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್
ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್
ಮಲೇಷ್ಯಾಗೆ ತೆರಳಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ
ಮಲೇಷ್ಯಾಗೆ ತೆರಳಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ
ತೇಜಸ್ವಿ ಸೂರ್ಯಗೆ ಇನ್ನೂ ಅನುಭವವಿಲ್ಲ: ಬರೀ ಖಾಲಿ ಮಾತು ಬೇಡ ಎಂದ ಡಿಕೆಶಿ
ತೇಜಸ್ವಿ ಸೂರ್ಯಗೆ ಇನ್ನೂ ಅನುಭವವಿಲ್ಲ: ಬರೀ ಖಾಲಿ ಮಾತು ಬೇಡ ಎಂದ ಡಿಕೆಶಿ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಸುದ್ದಿಗೋಷ್ಠಿ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಸುದ್ದಿಗೋಷ್ಠಿ
ಪ್ರತಿ ವರ್ಷ ಮೆಟ್ರೋ ದರ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದು ರಾಜ್ಯ ಸರ್ಕಾರ
ಪ್ರತಿ ವರ್ಷ ಮೆಟ್ರೋ ದರ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದು ರಾಜ್ಯ ಸರ್ಕಾರ
ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ
ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ
ಡೆಲಿವರಿ ಬಾಯ್ಸ್ಗೆ ಹೆಲ್ಮೆಟ್​ನಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ ಕಿಡಿಗೇಡಿಗಳು
ಡೆಲಿವರಿ ಬಾಯ್ಸ್ಗೆ ಹೆಲ್ಮೆಟ್​ನಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ ಕಿಡಿಗೇಡಿಗಳು
ಸ್ಕೂಟರ್​​ಗೆ ಡಿಕ್ಕಿ ತಪ್ಪಿಸಲು ಹೋಗಿ ರಿಕ್ಷಾ ಪಲ್ಟಿ; ವಿಡಿಯೋ ವೈರಲ್
ಸ್ಕೂಟರ್​​ಗೆ ಡಿಕ್ಕಿ ತಪ್ಪಿಸಲು ಹೋಗಿ ರಿಕ್ಷಾ ಪಲ್ಟಿ; ವಿಡಿಯೋ ವೈರಲ್