WPL 2023: 15 ವರ್ಷಗಳ ಹಿಂದಿನ ಆರ್​ಸಿಬಿ ಸೋಲನ್ನು ನೆನಪಿಸಿದ ಡಬ್ಲ್ಯುಪಿಲ್; ಎರಡೂ ಪಂದ್ಯಗಳಿಗೂ ಸಾಕಷ್ಟು ಸಾಮ್ಯತೆ

WPL 2023: ಡಬ್ಲ್ಯುಪಿಎಲ್‌ನ ಮೊದಲ ಪಂದ್ಯವಾಗಲಿ ಅಥವಾ 15 ವರ್ಷಗಳ ಹಿಂದೆ ಆಡಿದ ಐಪಿಎಲ್‌ನ ಮೊದಲ ಪಂದ್ಯವಾಗಲಿ, ಎರಡೂ ಸಂದರ್ಭಗಳಲ್ಲಿ 200 ಪ್ಲಸ್ ಗುರಿಯನ್ನು ಬೆನ್ನಟ್ಟಿದ ತಂಡ 15.1 ಓವರ್‌ಗಳ ಒಳಗೆ ಆಲೌಟ್ ಆಗಿದೆ.

WPL 2023: 15 ವರ್ಷಗಳ ಹಿಂದಿನ ಆರ್​ಸಿಬಿ ಸೋಲನ್ನು ನೆನಪಿಸಿದ ಡಬ್ಲ್ಯುಪಿಲ್; ಎರಡೂ ಪಂದ್ಯಗಳಿಗೂ ಸಾಕಷ್ಟು ಸಾಮ್ಯತೆ
ಆರ್​ಸಿಬಿ
Follow us
ಪೃಥ್ವಿಶಂಕರ
|

Updated on:Mar 05, 2023 | 1:32 PM

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್​ಗೆ (WPL 2023) ಅದ್ಧೂರಿ ಆರಂಭ ಸಿಕ್ಕಿದೆ. ಅಭಿಮಾನಿಗಳಿಗೆ ಮೊದಲ ಪಂದ್ಯವೇ ಅನಿರೀಕ್ಷಿತ ರೊಚಕತೆ ನೀಡಿದೆ. ಕಳೆದ 15 ವರ್ಷಗಳ ಹಿಂದೆ ಐಪಿಎಲ್​ಗೆ (IPL) ಯಾವ ರೀತಿಯ ಆರಂಭ ಸಿಕ್ಕಿತ್ತೋ, ಅದೇ ರೀತಿಯ ಆರಂಭ ಮಹಿಳಾ ಪ್ರೀಮಿಯರ್​ ಲೀಗ್​ಗೂ ಸಿಕ್ಕಿದೆ. ಅದರಲ್ಲೂ ಈ ಎರಡೂ ಲೀಗ್​ಗಳು ಬೇರೆ ಬೇರೆಯಾಗಿದ್ದರೂ, ಎರಡೂ ಲೀಗ್​ಗಳ ಆರಂಭಿಕ ಪಂದ್ಯದಲ್ಲಿ ಒಂದೇ ರೀತಿಯ ಫಲಿತಾಂಶ ಹೊರಬಿದ್ದಿದೆ. ವಾಸ್ತವವಾಗಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ನಡೆದ ಡಬ್ಲ್ಯುಪಿಲ್​ನ ಮೊದಲ ಪಂದ್ಯವು ಐಪಿಎಲ್ ಇತಿಹಾಸದ ಮೊದಲ ಪಂದ್ಯವನ್ನು ನೆನಪಿಸಿತು. ಅಂದರೆ 2008 ರಲ್ಲಿ ಕೆಕೆಆರ್​ ಮತ್ತು ಆರ್​ಸಿಬಿ (KKR vs RCB) ನಡುವೆ ನಡೆದ ಪಂದ್ಯದಂತೆಯೇ ಈ ಪಂದ್ಯವೂ ಮುಗಿದು ಹೋಗಿದೆ. ಸರಳವಾಗಿ ಹೇಳುವುದಾದರೆ, ಐಪಿಎಲ್​ ಶೈಲಿಯಲ್ಲಿ ಡಬ್ಲ್ಯುಪಿಲ್ ಪ್ರಾರಂಭವಾಗಿದೆ.

ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಸೀಸನ್‌ನ ಮೊದಲ ಪಂದ್ಯ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿತು. ಮುಂಬೈನ ಈ ಗೆಲುವು ಮತ್ತು ಗುಜರಾತ್ ಜೈಂಟ್ಸ್ ತಂಡದ ಸೋಲು 2008 ರಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಮೊದಲ ಪಂದ್ಯದದ ಕ್ಷಣಗಳು ಜನರ ಮನಸ್ಸಲ್ಲಿ ಹಾದುಹೋಗುವಂತೆ ಮಾಡಿದೆ.

ಐಪಿಎಲ್ ಶೈಲಿಯಂತೆ ಡಬ್ಲ್ಯುಪಿಲ್ ಆರಂಭ

ವಾಸ್ತವವಾಗಿ ಐಪಿಎಲ್‌ನ ಮೊದಲ ಪಂದ್ಯಕ್ಕೂ ಡಬ್ಲ್ಯುಪಿಎಲ್‌ನ ಮೊದಲ ಪಂದ್ಯಕ್ಕೂ 15 ವರ್ಷಗಳ ಅಂತರವಿದೆ. ಆದರೂ, ಈ ಎರಡು ಪಂದ್ಯಗಳ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಹಾಗಾದರೆ ಆ ಎರಡು ಪಂದ್ಯಗಳ ನಡುವಿನ 5 ಸಾಮ್ಯತೆಗಳು ಯಾವು ಎಂಬುದನ್ನು ನೋಡೋಣ.

 5 ಸಾಮ್ಯತೆಗಳ ವಿವರ ಇಲ್ಲಿದೆ

  1. ಡಬ್ಲ್ಯುಪಿಎಲ್‌ನ ಮೊದಲ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್‌ ತಂಡ ಮೊದಲು ಬ್ಯಾಟಿಂಗ್ ಮಾಡಿ 200ಕ್ಕೂ ಅಧಿಕ ರನ್ ಬಾರಿಸಿತು. 2008ರ ಐಪಿಎಲ್​ನಲ್ಲೂ ಕೆಕೆಆರ್ ತನ್ನ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 200 ಪ್ಲಸ್ ರನ್ ಗಳಿಸಿತು.
  2. ಡಬ್ಲ್ಯುಪಿಎಲ್‌ನ ಮೊದಲ ಪಂದ್ಯವಾಗಲಿ ಅಥವಾ 15 ವರ್ಷಗಳ ಹಿಂದೆ ಆಡಿದ ಐಪಿಎಲ್‌ನ ಮೊದಲ ಪಂದ್ಯವಾಗಲಿ, ಎರಡೂ ಸಂದರ್ಭಗಳಲ್ಲಿ 200 ಪ್ಲಸ್ ಗುರಿಯನ್ನು ಬೆನ್ನಟ್ಟಿದ ತಂಡ 15.1 ಓವರ್‌ಗಳ ಒಳಗೆ ಆಲೌಟ್ ಆಗಿದೆ.
  3. ಅಲ್ಲದೆ ಈ ಉಭಯ ಪಂದ್ಯಗಳಲ್ಲಿ ಎಡಗೈ ಬೌಲರ್ ಮೊದಲ ವಿಕೆಟ್ ಪಡೆದರು. 2008 ರಲ್ಲಿ ಜಹೀರ್ ಖಾನ್ ಮೊದಲ ವಿಕೆಟ್ ಪಡೆದರೆ, 2023 ರಲ್ಲಿ ತನುಜಾ ಕನ್ವರ್ ಮೊದಲ ವಿಕೆಟ್ ತೆಗೆದುಕೊಂಡರು.
  4. ಡಬ್ಲ್ಯುಪಿಎಲ್‌ ಮತ್ತು ಐಪಿಎಲ್‌ ಎರಡರ ಮೊದಲ ಪಂದ್ಯದಲ್ಲಿ ಅತಿ ಹೆಚ್ಚು ಸ್ಕೋರರ್ 216 ಪ್ಲಸ್ ಸ್ಟ್ರೈಕ್ ರೇಟ್ ಹೊಂದಿದ್ದರು. ಡಬ್ಲ್ಯುಪಿಎಲ್​ನಲ್ಲಿ ಹರ್ಮನ್‌ಪ್ರೀತ್ ಕೌರ್ 216.66 ಸ್ಟ್ರೈಕ್ ರೇಟ್‌ನಲ್ಲಿ ಸ್ಕೋರ್ ಮಾಡಿದರೆ, ಐಪಿಎಲ್‌ನ ಮೊದಲ ಪಂದ್ಯದಲ್ಲಿ ಬ್ರೆಂಡನ್ ಮೆಕಲಮ್ 216.43 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರು.
  5. ಐಪಿಎಲ್‌ ಮತ್ತು ಡಬ್ಲ್ಯುಪಿಎಲ್‌ನ ಮೊದಲ ಪಂದ್ಯದಲ್ಲಿ ಗೆಲುವಿನ ಅಂತರ 140 ಅಥವಾ ಅದಕ್ಕಿಂತ ಹೆಚ್ಚು. ಡಬ್ಲ್ಯುಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಗುಜರಾತ್ ಜೈಂಟ್ಸ್ ಅನ್ನು 143 ರನ್‌ಗಳಿಂದ ಸೋಲಿಸಿದರೆ, ಐಪಿಎಲ್‌ನ ಮೊದಲ ಪಂದ್ಯದಲ್ಲಿ ಕೆಕೆಆರ್ ಆರ್‌ಸಿಬಿಯನ್ನು 140 ರನ್‌ಗಳಿಂದ ಸೋಲಿಸಿತು.

Published On - 1:30 pm, Sun, 5 March 23

ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್