WPL 2024: RCB ತಂಡಕ್ಕೆ ಮೂವರು ಆಟಗಾರ್ತಿಯರ ಎಂಟ್ರಿ

WPL 2024 Auction: ವುಮೆನ್ಸ್​ ಪ್ರೀಮಿಯರ್ ಲೀಗ್ ನಿಯಮದ ಪ್ರಕಾರ ಒಟ್ಟು ತಂಡದಲ್ಲಿ ಕನಿಷ್ಠ 15 ಆಟಗಾರ್ತಿಯರು ಇರಬೇಕು. ಅಲ್ಲದೆ ಒಂದು ತಂಡದ ಗರಿಷ್ಠ ಸಂಖ್ಯೆ 18. ಹೀಗಾಗಿ ಆರ್​ಸಿಬಿ ತಂಡಕ್ಕೆ ಇನ್ನೂ ಮೂವರು ಆಟಗಾರ್ತಿಯರನ್ನು ಖರೀದಿಸುವ ಅವಕಾಶವಿದೆ.

WPL 2024: RCB ತಂಡಕ್ಕೆ ಮೂವರು ಆಟಗಾರ್ತಿಯರ ಎಂಟ್ರಿ
WPL 2024- RCB
Follow us
TV9 Web
| Updated By: ಝಾಹಿರ್ ಯೂಸುಫ್

Updated on:Dec 09, 2023 | 4:40 PM

ವುಮೆನ್ಸ್ ಪ್ರೀಮಿಯರ್ ಲೀಗ್ (WPL 2024) ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೆ ಮೂವರು ಆಟಗಾರ್ತಿಯರನ್ನು ಖರೀದಿಸಿದೆ. ಆಸ್ಟ್ರೇಲಿಯಾದ ಜಾರ್ಜಿಯಾ ವೇರ್ಹ್ಯಾಮ್ ಅವರನ್ನು 40 ಲಕ್ಷ ರೂ.ಗೆ ಖರೀದಿಸುವ ಮೂಲಕ ಬಿಡ್ಡಿಂಗ್ ಆರಂಭಿಸಿದ ಆರ್​ಸಿಬಿ, ಆ ಬಳಿಕ ಇಂಗ್ಲೆಂಡ್ ತಂಡದ ಅನುಭವಿ ಆಟಗಾರ್ತಿ ಕೇಟ್ ಕ್ರಾಸ್ ಅವರನ್ನು 30 ಲಕ್ಷ ರೂ.ಗೆ ಖರೀದಿಸಿತು.

ಇದಾದ ಬಳಿಕ ಭಾರತೀಯ ಆಟಗಾರ್ತಿ ಏಕ್ತಾ ಬಿಷ್ತ್ ಅವರನ್ನು 60 ಲಕ್ಷ ರೂ.ಗೆ ಖರೀದಿಸುವಲ್ಲಿ ಆರ್​ಸಿಬಿ ಯಶಸ್ವಿಯಾಗಿದೆ. ಇನ್ನು ಅನ್​ಕ್ಯಾಪ್ಡ್​ ಆಟಗಾರ್ತಿಯರ ಪಟ್ಟಿಯಿಂದ ಆರ್​ಸಿಬಿ ಇದುವರೆಗೆ ಯಾವುದೇ ಪ್ಲೇಯರ್​ ಅನ್ನು ಖರೀದಿಸಿಲ್ಲ.

ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಟ್ಟು 11 ಆಟಗಾರ್ತಿಯರನ್ನು ಉಳಿಸಿಕೊಂಡಿತ್ತು. ಇದೀಗ ಹರಾಜಿನ ಮೊದಲೆರಡು ಸುತ್ತಿನಲ್ಲೇ ಮೂವರು ಆಟಗಾರ್ತಿಯರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.

RCB ಉಳಿಸಿಕೊಂಡಿರುವ ಆಟಗಾರ್ತಿಯರು: ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಸೋಫಿ ಡಿವೈನ್.

ಇದನ್ನೂ ಓದಿ: WPL 2024: ಬರೋಬ್ಬರಿ 2 ಕೋಟಿಗೆ ಹರಾಜಾದ ಅನ್ನಾಬೆಲ್

ವುಮೆನ್ಸ್​ ಪ್ರೀಮಿಯರ್ ಲೀಗ್ ನಿಯಮದ ಪ್ರಕಾರ ಒಟ್ಟು ತಂಡದಲ್ಲಿ ಕನಿಷ್ಠ 15 ಆಟಗಾರ್ತಿಯರು ಇರಬೇಕು. ಅಲ್ಲದೆ ಒಂದು ತಂಡದ ಗರಿಷ್ಠ ಸಂಖ್ಯೆ 18. ಹೀಗಾಗಿ ಆರ್​ಸಿಬಿ ತಂಡಕ್ಕೆ ಇನ್ನೂ ನಾಲ್ವರು ಆಟಗಾರ್ತಿಯರನ್ನು ಖರೀದಿಸುವ ಅವಕಾಶವಿದೆ.

Published On - 4:13 pm, Sat, 9 December 23