WPL 2026: 4ನೇ ಆವೃತ್ತಿಯ ಡಬ್ಲ್ಯುಪಿಎಲ್ನಲ್ಲಿ ಆರ್ಸಿಬಿ ಯಾವ ದಿನ ಯಾವ ತಂಡವನ್ನು ಎದುರಿಸಲಿದೆ?
WPL 2026 RCB Full Schedule: ಮಹಿಳಾ ಪ್ರೀಮಿಯರ್ ಲೀಗ್‌ನ ನಾಲ್ಕನೇ ಆವೃತ್ತಿ ಜನವರಿ 9 ರಿಂದ ಫೆಬ್ರವರಿ 5 ರವರೆಗೆ ನಡೆಯಲಿದೆ. ನವಿ ಮುಂಬೈ ಹಾಗೂ ವಡೋದರಾದಲ್ಲಿ ಪಂದ್ಯಾವಳಿ ಆತಿಥ್ಯ ವಹಿಸಲಿದೆ. ಆರ್ಸಿಬಿ ಆಡಲಿರುವ 8 ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ. ಜನವರಿ 9 ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ಮೊದಲ ಪಂದ್ಯ ಆಡಲಿದೆ. ಸ್ಮೃತಿ ಮಂಧಾನ ನಾಯಕತ್ವದ ತಂಡದ ಎಲ್ಲಾ ಪಂದ್ಯಗಳ ವಿವರಗಳನ್ನು ಇಲ್ಲಿ ಓದಿ.

ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) ನಾಲ್ಕನೇ ಆವೃತ್ತಿಗೆ ಕೇವಲ ಎರಡು ದಿನಗಳು ಬಾಕಿ ಉಳಿದಿವೆ. ಜನವರಿ 9 ರಿಂದ ಈ ಟೂರ್ನಿ ಪ್ರಾರಂಭವಾಗಲಿದ್ದು, ಫೆಬ್ರವರಿ 05 ರಂದು ಕೊನೆಗೊಳ್ಳಲಿದೆ. ಈ ಆವೃತ್ತಿಯ ಪಂದ್ಯಗಳಿಗೆ ಕೇವಲ ಎರಡು ನಗರಗಳು ಆತಿಥ್ಯವಹಿಸುತ್ತಿದ್ದು, ನವಿ ಮುಂಬೈ ಹಾಗೂ ವಡೋದರಾದಲ್ಲಿ ಪಂದ್ಯಾವಳಿ ನಡೆಯಲಿದೆ. ಎಲ್ಲರಿಗೂ ತಿಳಿದಿರುವಂತೆ ಈ ಪಂದ್ಯಾವಳಿಯಲ್ಲಿ ಒಟ್ಟು ಐದು ತಂಡಗಳು ಭಾಗವಹಿಸುತ್ತಿವೆ. ಎಲ್ಲಾ ತಂಡಗಳು ಲೀಗ್ ಹಂತದಲ್ಲಿ ಪರಸ್ಪರ ತಲಾ 2 ಪಂದ್ಯಗಳನ್ನು ಆಡಲಿವೆ. ಈ ರೀತಿಯಾಗಿ ಒಂದು ತಂಡ ಒಟ್ಟು ಎಂಟು ಪಂದ್ಯಗಳನ್ನು ಆಡುತ್ತದೆ. ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಈ 22 ಪಂದ್ಯಗಳಲ್ಲಿ ಆರ್ಸಿಬಿ (RCB) ಆಡಲಿರುವ 8 ಪಂದ್ಯಗಳನ್ನು ಯಾವ ದಿನದಂದು ಯಾವ ತಂಡದ ಎದುರು ಎಲ್ಲಿ ಆಡುತ್ತದೆ ಎಂಬುದರ ಪೂರ್ಣ ವಿವರ ಇಲ್ಲಿದೆ.
ಮೊದಲ ಎದುರಾಳಿ ಮುಂಬೈ
ಆರ್ಸಿಬಿ ಟೂರ್ನಿಯ ಮೊದಲ ಪಂದ್ಯದಲ್ಲೇ ಕಣಕ್ಕಿಳಿಯುತ್ತಿದ್ದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯ ಜನವರಿ 09 ರಂದು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣ ನಡೆಯಲಿದೆ. ನಂತರ ಎರಡನೇ ಪಂದ್ಯ ಜನವರಿ 12 ರಂದು ಯುಪಿ ವಾರಿಯರ್ಸ್ ವಿರುದ್ಧ ನಡೆಯಲಿದ್ದು, ಈ ಪಂದ್ಯಕ್ಕೂ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣ ಆತಿಥ್ಯ ನೀಡಲಿದೆ.
ಮೂರನೇ ಪಂದ್ಯವನ್ನು ಜನವರಿ 16 ರಂದು ಆಡಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮುಂಬೈನಲ್ಲಿ ಎದುರಿಸಲಿದೆ. ಜನವರಿ 17 ರಂದು ನಡೆಯಲ್ಲಿರುವ ನಾಲ್ಕನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್, ಆರ್ಸಿಬಿಗೆ ಎದುರಾಳಿಯಾಗಲಿದೆ. ಈ ಪಂದ್ಯವೂ ಕೂಡ ಮುಂಬೈನಲ್ಲಿ ನಡೆಯಲ್ಲಿದೆ.
WPL 2026: ಇನ್ನೇರಡು ದಿನಗಳಲ್ಲಿ ಡಬ್ಲ್ಯುಪಿಎಲ್ ಆರಂಭ; ಇಲ್ಲಿದೆ ಪೂರ್ಣ ವೇಳಾಪಟ್ಟಿ
ಎರಡು ದಿನಗಳ ಬಳಿಕ ಅಂದರೆ ಜನವರಿ 19 ರಂದು ತನ್ನ 5ನೇ ಪಂದ್ಯವನ್ನಾಡಲಿರುವ ಆರ್ಸಿಬಿ ಈ ಪಂದ್ಯದಲ್ಲಿ ಎರಡನೇ ಬಾರಿಗೆ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ನಂತರ ಜನವರಿ 24 ರಂದು ಡೆಲ್ಲಿ ಕ್ಯಾಪಿಟಲ್ಸ್ಗೆ ಆರ್ಸಿಬಿ ಎರಡನೇ ಬಾರಿಗೆ ಮುಖಾಮುಖಿಯಾಗಲಿದೆ. ಈ ಎರಡು ಪಂದ್ಯಗಳು ವಡೋದರಲ್ಲಿ ನಡೆಯಲಿವೆ. ಉಳಿದೆರಡು ಪಂದ್ಯಗಳು ಸಹ ಇದೇ ವಡೋದರದಲ್ಲಿ ನಡೆಯಲಿದ್ದು, ಇದರಲ್ಲಿ ಆರ್ಸಿಬಿ ಕ್ರಮವಾಗಿ ಜನವರಿ 26 ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಜನವರಿ 29 ರಂದು ಯುಪಿ ವಾರಿಯರ್ಸ್ ತಂಡವನ್ನು ಎದುರಿಸಲಿದೆ.
ಆರ್ಸಿಬಿ ತಂಡ: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್, ಡಿ. ಹೇಮಲತಾ, ಸಯಾಲಿ ಸತ್ಘರೆ (ಎಲ್ಲಿಸ್ ಪೆರ್ರಿ ಬದಲಿಗೆ)
ಆರ್ಸಿಬಿ ಪೂರ್ಣ ವೇಳಾಪಟ್ಟಿ
|
ದಿನಾಂಕ |
ಮುಖಾಮುಖಿ |
ಸ್ಥಳ |
|
09-01-2026 |
ಮುಂಬೈ ಇಂಡಿಯನ್ಸ್ vs ಆರ್ಸಿಬಿ |
ನವಿ ಮುಂಬೈ |
|
12-01-2026 |
ಆರ್ಸಿಬಿ vs ಯುಪಿ ವಾರಿಯರ್ಸ್ |
ನವಿ ಮುಂಬೈ |
|
16-01-2026 |
ಆರ್ಸಿಬಿ vs ಗುಜರಾತ್ ಜೈಂಟ್ಸ್ |
ನವಿ ಮುಂಬೈ |
|
17-01-2026 |
ದೆಹಲಿ ಕ್ಯಾಪಿಟಲ್ಸ್ vs ಆರ್ಸಿಬಿ |
ನವಿ ಮುಂಬೈ |
|
19-01-2026 |
ಗುಜರಾತ್ ಜೈಂಟ್ಸ್ vs ಆರ್ಸಿಬಿ |
ವಡೋದರಾ |
|
24-01-2026 |
ಆರ್ಸಿಬಿ vs ದೆಹಲಿ ಕ್ಯಾಪಿಟಲ್ಸ್ |
ವಡೋದರಾ |
|
26-01-2026 |
ಆರ್ಸಿಬಿ vs ಮುಂಬೈ ಇಂಡಿಯನ್ಸ್ |
ವಡೋದರಾ |
|
29-01-2026 |
ಯುಪಿ ವಾರಿಯರ್ಸ್ vs ಆರ್ಸಿಬಿ |
ವಡೋದರಾ |
|
03-02-2026 |
ಎಲಿಮಿನೇಟರ್ |
ವಡೋದರಾ |
|
05-02-2026 |
ಫೈನಲ್ |
ವಡೋದರಾ |
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
