
ವುಮೆನ್ಸ್ ಪ್ರೀಮಿಯರ್ ಲೀಗ್ನ ಐದನೇ ಸೀಸನ್ನ ಸಿದ್ಧತೆಗಳು ಅಧಿಕೃತವಾಗಿ ಆರಂಭಗೊಂಡಿವೆ. ಇದರ ಮೊದಲ ಭಾಗವಾಗಿ ಬಿಸಿಸಿಐ ಇದೀಗ ಹರಾಜಿನಲ್ಲಿರುವ ಆಟಗಾರ್ತಿಯರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಒಟ್ಟು 146 ಆಟಗಾರ್ತಿಯರು ಹರಾಜು ಕಣದಲ್ಲಿದ್ದಾರೆ. ಆದರೆ, ಟೂರ್ನಿಯ ಐದು ಫ್ರಾಂಚೈಸಿಗಳಲ್ಲಿ ಖಾಲಿ ಇರುವುದು ಕೇವಲ 27 ಸ್ಥಾನಗಳು ಮಾತ್ರ ಎಂಬುದು ವಿಶೇಷ.
ಒಟ್ಟು 146 ಆಟಗಾರ್ತಿಯರು ಹರಾಜಿನಲ್ಲಿದ್ದರೂ, 5 ಫ್ರಾಂಚೈಸಿಗಳಲ್ಲಿ ಖಾಲಿ ಇರುವುದು ಕೇವಲ 27 ಸ್ಥಾನಗಳು ಮಾತ್ರ. ಇದರಲ್ಲಿ 20 ಭಾರತೀಯ ಮತ್ತು 7 ವಿದೇಶಿ ಆಟಗಾರ್ತಿಯರ ಸ್ಲಾಟ್ಗಳು ಸೇರಿವೆ. ಅಂದರೆ, ಶಾರ್ಟ್ಲಿಸ್ಟ್ ಆದ ಆಟಗಾರ್ತಿಯರಲ್ಲಿ ಕೇವಲ 27 ಅದೃಷ್ಟವಂತರಿಗೆ ಮಾತ್ರ ಈ ಬಾರಿ ಅವಕಾಶ ಸಿಗಲಿದೆ.
ಇದನ್ನೂ ಓದಿ: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಇತಿಹಾಸ ನಿರ್ಮಿಸಿದ RCB
Published On - 7:38 am, Tue, 20 October 26