
ಫುಟ್ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿಶ್ವಕಪ್ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. 2026ರ ಫಿಫಾ ವಿಶ್ವಕಪ್‌ನ ರೌಂಡ್ ಆಫ್ 16 ನಾಕೌಟ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಸ್ಪೇನ್ ವಿರುದ್ಧ ಪೋರ್ಚುಗಲ್ 1-0 ಗೋಲುಗಳ ಅಂತರದಿಂದ ಆಘಾತಕಾರಿ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಪೋರ್ಚುಗಲ್ ಟೂರ್ನಿಯಿಂದ ಹೊರಬಿದ್ದಿದೆ. ಇದರೊಂದಿಗೆ 41 ವರ್ಷದ ರೊನಾಲ್ಡೊ ಅವರ ವಿಶ್ವಕಪ್ ಕನಸು ಕೂಡ ಕೊನೆಗೊಂಡಿದೆ.
ಅಮೆರಿಕದ ಟೆಕ್ಸಾಸ್ ರಾಜ್ಯದ ಆರ್ಲಿಂಗ್ಟನ್‌ನಲ್ಲಿರುವ ಪ್ರಸಿದ್ಧ ಡಲ್ಲಾಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳು ಗೋಲು ಗಳಿಸಲು ತೀವ್ರ ಹೋರಾಟ ನಡೆಸಿದವು. ಇತ್ತ ಪೋರ್ಚುಗಲ್ ತಂಡ ರಕ್ಷಣಾತ್ಮಕ ಆಟಕ್ಕೆ ಹೆಚ್ಚಿನ ಒತ್ತು ನೀಡಿದ್ದರಿಂದ ಪಂದ್ಯವು ಡ್ರಾದತ್ತ ಸಾಗುವ ಮುನ್ಸೂಚನೆ ಇತ್ತು.
ಆದರೆ, ದ್ವಿತೀಯಾರ್ಧದ ಹೆಚ್ಚುವರಿ ಸಮಯದಲ್ಲಿ (91ನೇ ನಿಮಿಷ) ಸ್ಪೇನ್‌ನ ಮೈಕೆಲ್ ಮೆರಿನೊ ಭರ್ಜರಿ ಗೋಲು ಬಾರಿಸುವ ಮೂಲಕ ಪೋರ್ಚುಗಲ್ ತಂಡಕ್ಕೆ ಆಘಾತ ನೀಡಿದರು. ಈ ಏಕೈಕ ಗೋಲು ಇಡೀ ಪಂದ್ಯದ ಹಣೆಬರಹವನ್ನೇ ಬದಲಾಯಿಸಿತು.
ಪಂದ್ಯ ಮುಕ್ತಾಯದ ಸೀಟಿ ಮೊಳಗುತ್ತಿದ್ದಂತೆ ಇಡೀ ಕ್ರೀಡಾಂಗಣವೇ ಸ್ತಬ್ಧವಾಯಿತು. ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಆಡುತ್ತಿದ್ದ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಈ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೈದಾನದಲ್ಲೇ ಮೊಣಕಾಲೂರಿ ಕಣ್ಣೀರು ಹಾಕಿದ ರೊನಾಲ್ಡೊ, ಅತ್ಯಂತ ನಿರಾಶೆಯಿಂದ ಡ್ರೆಸ್ಸಿಂಗ್ ರೂಮ್‌ನತ್ತ ಹೆಜ್ಜೆ ಹಾಕಿದ ದೃಶ್ಯ ಜಗತ್ತಿನಾದ್ಯಂತ ಇದ್ದ ಅವರ ಕೋಟ್ಯಂತರ ಅಭಿಮಾನಿಗಳ ಕಣ್ಣು ಒದ್ದೆಯಾಗಿಸಿತು.
ಪೋರ್ಚುಗಲ್ ವಿಶ್ವಕಪ್‌ನಿಂದ ಹೊರಬಿದ್ದಿರಬಹುದು, ಆದರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸಾಧನೆಯ ಶಿಖರ ಮಾತ್ರ ಯಾರಿಗೂ ಎಟುಕದ ಎತ್ತರದಲ್ಲಿದೆ. ಈ ವಿಶ್ವಕಪ್‌ನಲ್ಲೂ ಅವರು ಕೆಲವು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ:
ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
ಒಟ್ಟಾರೆಯಾಗಿ ಹೇಳುವುದಾದರೆ, ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯದ ಜಗತ್ತಿನ ಹಲವು ಶ್ರೇಷ್ಠ ಆಟಗಾರರ ಪಟ್ಟಿಗೆ ಈ ಕ್ರಿಸ್ಟಿಯಾನೊ ರೊನಾಲ್ಡೊ ಕೂಡ ಸೇರಿದ್ದಾರೆ. ಒಂದು ಕಪ್ ಗೆಲ್ಲದಿದ್ದರೂ, ಫುಟ್ಬಾಲ್ ಕ್ರೀಡೆಗೆ ರೊನಾಲ್ಡೊ ನೀಡಿದ ಕೊಡುಗೆ ಮತ್ತು ಅವರ ಹೋರಾಟದ ಗುಣ ಎಂದಿಗೂ ಅಮರ. ವಿಶ್ವಕಪ್ ಇಲ್ಲದಿದ್ದರೂ ಅವರು ಕೋಟ್ಯಂತರ ಹೃದಯಗಳನ್ನು ಗೆದ್ದ ನಿಜವಾದ ‘GOAT’.
Published On - 8:39 am, Tue, 7 July 26