Euro Cup 2024: ಯುರೋ ಕಪ್ ಸೆಮಿಫೈನಲ್ಗೆ 4 ತಂಡಗಳು ಎಂಟ್ರಿ
Euro Cup 2024 Semi final: ಜರ್ಮನಿಯಲ್ಲಿ ನಡೆಯುತ್ತಿರುವ ಯುರೋ ಕಪ್ ಟೂರ್ನಿಯು ಮುಕ್ತಾಯದ ಹಂತಕ್ಕೆ ತಲುಪಿದೆ. ಈಗಾಗಲೇ ಕ್ವಾರ್ಟರ್ ಫೈನಲ್ವರೆಗಿನ ಪಂದ್ಯಗಳು ಮುಗಿದಿದ್ದು, ಈ ಪಂದ್ಯಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಫ್ರಾನ್ಸ್, ನೆದರ್ಲೆಂಡ್ಸ್, ಇಂಗ್ಲೆಂಡ್ ಮತ್ತು ಸ್ಪೇನ್ ತಂಡಗಳು ನಾಕೌಟ್ ಹಂತಕ್ಕೇರಿದೆ. ಅದರಂತೆ ಮುಂದಿನ ಪಂದ್ಯಗಳಲ್ಲಿ ಗೆಲ್ಲುವ ತಂಡ ಫೈನಲ್ಗೆ ಪ್ರವೇಶಿಸಲಿದೆ.
ಪ್ರತಿಷ್ಠಿತ ಯುರೋ ಕಪ್ (Euro Cup 2024) ಫುಟ್ಬಾಲ್ ಟೂರ್ನಿಯು ಸೆಮಿಫೈನಲ್ ಹಂತಕ್ಕೆ ಬಂದು ನಿಂತಿದೆ. 24 ತಂಡಗಳೊಂದಿಗೆ ಶುರುವಾದ ಟೂರ್ನಿಯಲ್ಲಿ ಇದೀಗ ಉಳಿದಿರುವುದು ಕೇವಲ 4 ತಂಡಗಳು ಮಾತ್ರ. ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ ಗೆದ್ದು ಫ್ರಾನ್ಸ್, ಇಂಗ್ಲೆಂಡ್, ನೆದರ್ಲೆಂಡ್ಸ್ ಮತ್ತು ಸ್ಪೇನ್ ತಂಡಗಳು ನಾಕೌಟ್ ಹಂತಕ್ಕೇರಿದೆ.
- ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ 2-1 ಅಂತರದಿಂದ ಗೆದ್ದು ಸ್ಪೇನ್ ತಂಡವು ಸೆಮಿಫೈನಲ್ಗೆ ಪ್ರವೇಶಿಸಿತ್ತು.
- ಎರಡನೇ ಕ್ವಾರ್ಟರ್ ಫೈನಲ್ನಲ್ಲಿ ಪೋರ್ಚುಗಲ್ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ 5-3 ಅಂತರದಿಂದ ಗೆಲ್ಲುವ ಮೂಲಕ ಫ್ರಾನ್ಸ್ ಸೆಮೀಸ್ಗೆ ಎಂಟ್ರಿ ಕೊಟ್ಟಿದೆ.
- ಮೂರನೇ ಕ್ವಾರ್ಟರ್ ಫೈನಲ್ನಲ್ಲಿ ಇಂಗ್ಲೆಂಡ್ ಮತ್ತು ಸ್ವಿಟ್ಜರ್ಲೆಂಡ್ 1-1 ಅಂತರದಿಂದ ಸಮಬಲ ಸಾಧಿಸಿದ್ದರಿಂದ ಪಂದ್ಯ ಪೆನಾಲ್ಟಿ ಶೂಟೌಟ್ನತ್ತ ಸಾಗಿತು. ಪೆನಾಲ್ಟಿ ಶೂಟೌಟ್ನಲ್ಲಿ ಸ್ವಿಟ್ಜರ್ಲೆಂಡ್ ತಂಡವನ್ನು 5-3 ಅಂತರದಿಂದ ಮಣಿಸಿ ಇಂಗ್ಲೆಂಡ್ ಸೆಮಿಫೈನಲ್ಗೆ ಪ್ರವೇಶಿಸಿದೆ.
- ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟರ್ಕಿ ತಂಡವನ್ನು 2-1 ಅಂತರದಿಂದ ಮಣಿಸುವ ಮೂಲಕ ನೆದರ್ಲೆಂಡ್ಸ್ ತಂಡವು ಸೆಮಿಫೈನಲ್ಗೆ ಪ್ರವೇಶಿಸಿದೆ.
ಅದರಂತೆ ಈ ಬಾರಿಯ ಯುರೋ ಕಪ್ ಸೆಮಿಫೈನಲ್ ಪಂದ್ಯಗಳಲ್ಲಿ ಫ್ರಾನ್ಸ್. ಸ್ಪೇನ್, ನೆದರ್ಲೆಂಡ್ಸ್ ಮತ್ತು ಇಂಗ್ಲೆಂಡ್ ತಂಡಗಳು ಕಣಕ್ಕಿಳಿಯಲಿವೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ.
- ಜುಲೈ 10 (ಮೊದಲ ಸೆಮಿಫೈನಲ್): ಫ್ರಾನ್ಸ್ vs ಸ್ಪೇನ್
- ಜುಲೈ 11 (ಎರಡನೇ ಸೆಮಿಫೈನಲ್): ನೆದರ್ಲೆಂಡ್ಸ್ vs ಇಂಗ್ಲೆಂಡ್
ಈ ಎರಡು ಪಂದ್ಯಗಳು ಭಾರತೀಯ ಕಾಲಮಾನ ಮಧ್ಯರಾತ್ರಿ 12.30 AM ಗೆ ಶುರುವಾಗಲಿದೆ. ಅಲ್ಲದೆ ಈ ಪಂದ್ಯಗಳನ್ನು ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ಚಾನೆಲ್ನಲ್ಲಿ ವೀಕ್ಷಿಸಬಹುದು. ಹಾಗೆಯೇ ಸೋನಿ ಲೈವ್ ಆ್ಯಪ್ನಲ್ಲೂ ಪಂದ್ಯದ ನೇರ ಪ್ರಸಾರ ಇರಲಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಐವರು ಆಟಗಾರರು..!
ಫೈನಲ್ ಪಂದ್ಯ ಯಾವಾಗ?
ಯುರೋ ಕಪ್ ಫೈನಲ್ ಪಂದ್ಯವು ಜುಲೈ 15 ರಂದು ನಡೆಯಲಿದೆ. ಸೆಮಿಫೈನಲ್ನಲ್ಲಿ ಗೆಲ್ಲುವ 2 ತಂಡಗಳು ಸೋಮವಾರ (ಭಾರತದಲ್ಲಿ) ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗಲಿದೆ.
ಹಾಲಿ ಚಾಂಪಿಯನ್ ಯಾರು?
1960 ರಲ್ಲಿ ಶುರುವಾದ ಯುರೋ ಕಪ್ನ ಹಾಲಿ ಚಾಂಪಿಯನ್ ಇಟಲಿ. 2020ರ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ 3-2 ಅಂತರ ಮಣಿಸಿ ಇಟಲಿ ತಂಡ ಚಾಂಪಿಯನ್ ಪಟ್ಟಕ್ಕೇರಿತು. ಆದರೆ ಈ ಬಾರಿ ಇಟಲಿ ತಂಡವು ರೌಂಡ್-16 ರಲ್ಲೇ ಸೋತು ಹೊರ ಬಿದ್ದಿದೆ. ಇತ್ತ ಕಳೆದ ಬಾರಿಯ ರನ್ನರ್ ಅಪ್ ತಂಡ ಇಂಗ್ಲೆಂಡ್ ಸೆಮಿಫೈನಲ್ಗೆ ಪ್ರವೇಶಿಸಿದ್ದು, ಈ ಸಲ ಕೂಡ ಫೈನಲ್ಗೆ ಎಂಟ್ರಿ ಕೊಡುವ ವಿಶ್ವಾಸದಲ್ಲಿದ್ದಾರೆ.
Published On - 8:26 am, Sun, 7 July 24