ಮಧ್ಯರಾತ್ರಿ ಮಲ್ಲಿಕಾ ರೂಂ ಬಾಗಿಲು ತಟ್ಟಿದ್ದ ಸ್ಟಾರ್ ನಟ: ಮತ್ತೆ ಒಟ್ಟಾಗಿ ಕೆಲಸ ಮಾಡಲೇ ಇಲ್ಲ

ಮಲ್ಲಿಕಾ ಶೆರಾವತ್ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದರು. ಬಾಲಿವುಡ್​ನಲ್ಲಿ ಗ್ಲಾಮರ್ ಅನ್ನು ಅತಿಯಾಗಿ ಬಳಸಿ ಜನಪ್ರಿಯತೆ ಗಳಿಸಿಕೊಂಡ ನಟಿ ಮಲ್ಲಿಕಾ. ಇದೀಗ ತಾವು ಬಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾಗ ಅನುಭವಿಸಿದ ಸಮಸ್ಯೆಯನ್ನು ಮಲ್ಲಿಕಾ ಹೇಳಿಕೊಂಡಿದ್ದಾರೆ.

ಮಧ್ಯರಾತ್ರಿ ಮಲ್ಲಿಕಾ ರೂಂ ಬಾಗಿಲು ತಟ್ಟಿದ್ದ ಸ್ಟಾರ್ ನಟ: ಮತ್ತೆ ಒಟ್ಟಾಗಿ ಕೆಲಸ ಮಾಡಲೇ ಇಲ್ಲ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Oct 05, 2024 | 8:11 PM

ಬಾಲಿವುಡ್​ನಲ್ಲಿ ಬೋಲ್ಡ್ ಪಾತ್ರಗಳನ್ನು ಮಾಡಿ ಫೇಮಸ್ ಆಗಿದ್ದ ನಟಿ ಮಲ್ಲಿಕಾ ಶೆರಾವತ್ ಅವರು ಇತ್ತೀಚೆಗೆ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಅವರು ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದೇ ಹೇಳಬಹುದು. ಅವರು ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಅವರಿಗೆ ಆದ ಕಹಿ ಅನುಭವಗಳು ಒಂದೆರಡಲ್ಲ. ಅವರು ಈ ಮೊದಲು ತಮಗಾದ ಕಿರುಕುಳದ ಬಗ್ಗೆ ಓಪನ್ ಆಗಿ ಮಾತನಾಡಿದ್ದರು.

ಮಲ್ಲಿಕಾ ಅವರು ಸಿನಿಮಾ ಶೂಟ್ಗಾಗಿ ದೇಶ-ವಿದೇಶದಲ್ಲಿ ಸುತ್ತಾಡುತ್ತಿದ್ದರು. ಅವರು ಒಮ್ಮೆ ದುಬೈಗೆ ತೆರಳಿದ್ದರು. ಈ ವೇಳೆ ಅವರು ದೊಡ್ಡ ಸಿನಿಮಾದ ಚಿತ್ರೀಕರಣದ ಕಾರಣಕ್ಕೆ ಅವರು ದುಬೈಗೆ ತೆರಳಿದ್ದರು. ಅಲ್ಲಿ ಅವರಿಗೆ ಓರ್ವ ಸ್ಟಾರ್ ಹೀರೋನಿಂದಲೇ ಕಿರುಕುಳ ಆಗಿತ್ತು ಎನ್ನುವ ವಿಚಾರ ರಿವೀಲ್ ಆಗಿದೆ.

‘ನಾನು ದುಬೈನಲ್ಲಿ ಒಂದು ದೊಡ್ಡ ಸಿನಿಮಾ ಶೂಟ್ ಮಾಡುತ್ತಿದ್ದೆ. ಇದರಲ್ಲಿ ಹಲವು ಸ್ಟಾರ್ಗಳು ಇದ್ದರು. ಅದು ಸೂಪರ್ ಹಿಟ್ ಚಿತ್ರ. ಜನರು ಈ ಚಿತ್ರವನ್ನು ಇಷ್ಟಪಟ್ಟರು. ನಾನು ಇದರಲ್ಲಿ ಕಾಮಿಡಿ ರೋಲ್ ಮಾಡಿದ್ದೇನೆ. ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು. ಆ ಚಿತ್ರದ ಹೀರೋ ನನ್ನ ರೂಂನ ಬಾಗಿಲನ್ನು ಮಧ್ಯಾರಾತ್ರಿ ಬಂದು ತಟ್ಟಿದ’ ಎಂದು ಹೇಳಿಕೊಂಡಿದ್ದಾರೆ.

‘ಆತ ಬಾಗಿಲನ್ನು ಒಡೆದು ಹಾಕುತ್ತಾನೆ ಎಂದು ಭಯ ಆಯಿತು. ಆ ರೀತಿ ಆತ ಬಾಗಿಲನ್ನು ತಟ್ಟುತ್ತಿದ್ದ. ಆತನಿಗೆ ನನ್ನ ರೂಂಗೆ ಬರಬೇಕಿತ್ತು. ಹಾಗಾಗಬಾರದು ಎಂದುಕೊಂಡೆ. ಆ ಬಳಿಕ ನಾನು ಆ ಹೀರೋ ಜೊತೆ ಕೆಲಸ ಮಾಡಿಲ್ಲ’ ಎಂದಿದ್ದಾರೆ ಅವರು. ಇದು ಅವರಿಗೆ ನಡೆದ ಕಿರುಕುಳದ ಅನುಭವಗಳಲ್ಲಿ ಒಂದು. ಈ ರೀತಿಯ ಹಲವು ಘಟನೆಗಳು ನಡೆದಿವೆ. ಮಲ್ಲಿಕಾ ಎಲ್ಲಿಯೂ ಹೀರೋ ಹೆಸರನ್ನು ರಿವೀಲ್ ಮಾಡಿಲ್ಲ.

ಇದನ್ನೂ ಓದಿ:ಬೀಚ್​ನಲ್ಲಿ ಜಾಲಿ ಮೂಡ್​​ಗೆ ಜಾರಿದ ಮಲ್ಲಿಕಾ ಶೆರಾವತ್‌

‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಸಿನಿಮಾ ಅಕ್ಟೋಬರ್ 11ರಂದು ರಿಲೀಸ್ ಆಗಲಿದೆ. ಅವರು ಹಿಂದಿ ಚಿತ್ರರಂಗಕ್ಕೆ ಕೆಲವು ವರ್ಷಗಳ ಬಳಿಕ ಕಂಬ್ಯಾಕ್ ಮಾಡುತ್ತಿದ್ದಾರೆ. ತೃಪ್ತಿ ದಿಮ್ರಿ ಹಾಗೂ ರಾಜ್ಕುಮಾರ್ ರಾವ್ ನಟಿಸಿದ್ದಾರೆ.

ಮಲ್ಲಿಕಾ ಶೆರಾವತ್ ಬಗ್ಗೆ ಹೇಳಬೇಕು ಎಂದರೆ ಅವರು 2003ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಕ್ವಾಹಿಶ್’ ಸಿನಿಮಾ ಮೂಲಕ ನಾಯಕಿ ಆಗಿ ಮಿಂಚಿದರು. ಅವರು ಬೋಲ್ಡ್ ಪಾತ್ರಗಳನ್ನು ಮಾಡಿದ್ದೇ ಹೆಚ್ಚು. ಈ ಕಾರಣಕ್ಕೆ ಅವರನ್ನು ನೋಡುವ ರೀತಿ ಬೇರೆ ಆಯಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.