ಮಗಳ ವಯಸ್ಸಿನ ಈ ನಟಿಯ ಜೊತೆ ತೆರೆ ಹಂಚಿಕೊಳ್ಳಲ್ಲ ಎಂದಿದ್ದ ಸಲ್ಮಾನ್

Salman Khan: ಈ ಹಿಂದೆ ಸಲ್ಮಾನ್ ಖಾನ್ ನಟಿಯೊಬ್ಬರೊಟ್ಟಿಗೆ ನಟಿಸುವುದಿಲ್ಲ ಎಂದು ಹಠ ಹಿಡಿದಿದ್ದರಂತೆ. ಇಬ್ಬರ ನಡುವಿನ ವಯಸ್ಸಿನ ಅಂತರದ ಕಾರಣಕ್ಕೆ ಸಲ್ಮಾನ್ ಖಾನ್ ಈ ನಿರ್ಣಯ ತೆಗೆದುಕೊಂಡಿದ್ದರು.

ಮಗಳ ವಯಸ್ಸಿನ ಈ ನಟಿಯ ಜೊತೆ ತೆರೆ ಹಂಚಿಕೊಳ್ಳಲ್ಲ ಎಂದಿದ್ದ ಸಲ್ಮಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Oct 06, 2024 | 7:29 AM

2012ರಲ್ಲಿ ‘ಪ್ರೇಮ್ ರತನ್ ಧನ್ ಪಾಯೋ’ ಚಿತ್ರ ರಿಲೀಸ್ ಆಯಿತು. ಸಲ್ಮಾನ್ ಖಾನ್ ನಟನೆಯ ಈ ಚಿತ್ರವನ್ನು ಸೂರಜ್ ಭಾರ್ಜತ್ಯ ನಿರ್ದೇಶನ ಮಾಡಿದ್ದರು. ‘ಮೇನೆ ಪ್ಯಾರ್ ಕಿಯಾ’, ‘ಹಮ್ ಆಪ್ಕೆ ಹೇ ಕೌನ್’, ‘ಹಮ್ ಸಾತ್ ಸಾತ್ ಹೇ’ ಬಳಿಕ ಇಬ್ಬರೂ ಮತ್ತೊಮ್ಮೆ ಒಂದಾಗಿದ್ದರು. ಸೋನಂ ಕಪೂರ್ ಅವರು ಸಲ್ಲುಗೆ ಜೊತೆಯಾಗಿದ್ದರು. ಆದರೆ, ಸಲ್ಲು ಇದರಲ್ಲಿ ನಟಿಸಲು ಆರಂಭದಲ್ಲಿ ನೋ ಎಂದಿದ್ದರು.

ಸಲ್ಮಾನ್ ಖಾನ್ ಹಾಗೂ ಸೋನಂ ಕಪೂರ್ ಮಧ್ಯೆ ಸುಮಾರು 20 ವರ್ಷಗಳ ಅಂತರ ಇದೆ. ಸಲ್ಲುಗೆ 20 ವರ್ಷ ತುಂಬುವಾಗ ಸೋನಂ ಆಗತಾನೇ ಜನಿಸಿದ್ದರು. ಈ ಕಾರಣಕ್ಕೆ ಅವರು ಸೋನಂ ಕಪೂರ್ ಜೊತೆ ನಟಿಸೋದೆ ಇಲ್ಲ ಎಂದು ಹೇಳಿದ್ದರು ಎನ್ನಲಾಗಿದೆ. ಈ ಬಗ್ಗೆ ಸೂರಜ್ ಮಾತನಾಡಿದ್ದರು. ‘ನಾನು ಸ್ಕ್ರಿಪ್ಟ್ ಬರೆದೆ. ಸಲ್ಲುಗೆ ಯಾವ ಹೀರೋಯಿನ್ ಹೊಂದಿಕೆ ಆಗುತ್ತಾರೆ ಎನ್ನುವ ಬಗ್ಗೆ ಚರ್ಚೆ ಮಾಡಿದೆ. ಹಲವು ಹೀರೋಯಿನ್​ಗಳ ಹೆಸರು ಇತ್ತು. ರಾಂಜನಾ ನೋಡಿದ ಬಳಿಕ ಸೋನಂ ಕಪೂರ್ ಸರಿಯಾದ ನಟಿ ಎಂದು ಭಾವಿಸಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಅರ್ಧಕ್ಕೆ ನಿಂತೋಯ್ತು ಸಲ್ಮಾನ್ ಖಾನ್-ರಶ್ಮಿಕಾ ನಟನೆಯ ‘ಸಿಖಂದರ್’ ಶೂಟಿಂಗ್?

‘ನಾನು ಸಲ್ಮಾನ್ ಖಾನ್​ಗೆ ಈ ವಿಚಾರ ಹೇಳಿದೆ. ಅವರು ನನ್ನ ಕಡೆ ನೋಡಿದರು. ಯೋಚಿಸೋಣ ಎಂದರು. ತಿಂಗಳು ಕಳೆದರೂ ಅವರು ಯೋಚಿಸುತ್ತಲೇ ಇದ್ದರು. ಸಲ್ಮಾನ್ ಖಾನ್ ಅವರಿಗೆ ಆತಂಕ ಇತ್ತು. ಸೋನಂ ಕಪೂರ್ ಎತ್ತರ ಹಾಗೂ ವಯಸ್ಸಿನ ಬಗ್ಗೆ ಯೋಚನೆ ಇತ್ತು. ಅವಳು ಎತ್ತರ ಆಗಿಲ್ಲವೇ? ಅವಳು ನನಗಿಂತ ಸಾಕಷ್ಟು ಚಿಕ್ಕವಳು. ನಾನು ಅವಳು ಬೆಳೆದು ದೊಡ್ಡವಳಾಗುವುದನ್ನು ನೋಡಿದ್ದೇನೆ. ನಾನು ಅವಳ ಜೊತೆ ಹೇಗೆ ರೊಮ್ಯಾನ್ಸ್ ಮಾಡಲಿ’ ಎಂಬುದು ಸಲ್ಲು ಪ್ರಶ್ನೆ ಆಗಿತ್ತು.

ಕೊನೆಗೂ ಸಲ್ಮಾನ್ ಖಾನ್ ಅವರು ಸಿನಿಮಾ ಮಾಡೋಕೆ ಒಪ್ಪಿದರು. ‘ನಾನು ಇನ್ನು ಮುಂದೆ ಅನಿಲ್ ಕಪೂರ್, ಅನಿಲ್ ಸರ್ ಎಂದು ಕರೆಯುತ್ತೇನೆ. ಅವಳನ್ನು ಸಿನಿಮಾಗೆ ತೆಗೆದುಕೊಳ್ಳಿ’ ಎಂದು ಸೂರಜ್​ಗೆ ಮೆಸೇಜ್ ಕಳುಹಿಸಿದ್ದರು ಸಲ್ಮಾನ್. ಆ ಪಾತ್ರಕ್ಕೆ ಸೋನಂ ಸರಿಯಾಗಿ ಹೊಂದಿಕೆ ಆಗಿದ್ದಾರೆ ಎಂದು ನಂತರ ಅವರಿಗೆ ಅನಿಸಿತ್ತು. ಸಲ್ಮಾನ್ ಖಾನ್ ಸದ್ಯ ‘ಸಿಖಂದರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಅವರು ನಾಯಕಿ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ