ಪಾಕ್ ಕ್ರಿಕೆಟ್ ತಂಡದ ಮಾನ ಈ ರೀತಿ ಹರಾಜಾಗಬಾರದಿತ್ತು.. ವೈರಲ್ ಆದ ಈ ಫೋಟೋದಲ್ಲಿ ಅಂಥದ್ದೇನಿದೆ?
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ತಪ್ಪುಗಳನ್ನು ಎಣಿಕೆ ಮಾಡಲು ಈ ವ್ಯಕ್ತಿ ಕೆಲವು ಕಾಲಂಗಳನ್ನು ರಚಿಸಿಕೊಂಡಿದ್ದಾನೆ. ಅದರಲ್ಲಿ ಕೈಬಿಟ್ಟ ಕ್ಯಾಚ್‌ಗಳು, ಮಿಸ್ ಫೀಲ್ಡ್, ಕಳಪೆ ಥ್ರೋ ಮತ್ತು ಡಿಆರ್‌ಎಸ್‌ನ ಕಳಪೆ ಬಳಕೆ ಎಂಬ ವಿಭಾಗಗಳನ್ನು ಮಾಡಿಕೊಂಡಿದ್ದಾನೆ.
ವೆಲ್ಲಿಂಗ್ಟನ್: ಬೇ ಓವೆಲ್ನಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಮೊದಲನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ಕೇನ್ ವಿಲಿಯಮ್ಸನ್ ಅವರ ಅಮೋಘ ಶತಕದ ನೆರವಿನಿಂದ 431 ರನ್ಗಳ ಬೃಹತ್ ಮೊತ್ತ ಕಲೆ ಹಾಕಿದೆ.
ನ್ಯೂಜಿಲೆಂಡ್ ನೀಡಿರುವ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿರುವ ಪಾಕಿಸ್ತಾನ 239 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಮೊದಲ ಇನ್ನಿಂಗ್ಸ್ನಲ್ಲಿ 192 ರನ್ಗಳ ಹಿನ್ನಡೆ ಅನುಭವಿಸಿದೆ. ಆದರೆ ಈ ಪಂದ್ಯ ಸುದ್ದಿಯಲ್ಲಿರುವುದು ಕೇವಲ ಈ ಕಾರಣಕ್ಕಾಗಿ ಅಲ್ಲ. ಬದಲಾಗಿ ಆಟದ ವೇಳೆ ಪಾಕಿಸ್ತಾನ ತಂಡದ ಆಟಗಾರರು ಮಾಡಿದ ತಪ್ಪುಗಳನ್ನು ನ್ಯೂಜಿಲೆಂಡ್ ತಂಡದ ಅಭಿಮಾನಿಯೊಬ್ಬ ಎಣಿಕೆ ಮಾಡಿದ್ದಾನೆ. ಈ ಮೂಲಕ ಪಾಕ್ ತಂಡದ ಮಾನವನ್ನು ಬಹಿರಂಗವಾಗಿ ಹರಾಜಾಕ್ಕಿದ್ದಾನೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ತಪ್ಪುಗಳನ್ನು ಎಣಿಕೆ ಮಾಡಲು ಈ ವ್ಯಕ್ತಿ ಕೆಲವು ಕಾಲಂಗಳನ್ನು ರಚಿಸಿಕೊಂಡಿದ್ದಾನೆ. ಅದರಲ್ಲಿ ಆತ, ಪಾಕಿಸ್ತಾನ ಬಿಟ್ಟ ಕ್ಯಾಚ್‌ಗಳು, ಮಿಸ್ ಫೀಲ್ಡ್ಸ್, ಕಳಪೆ ಥ್ರೋಗಳು ಮತ್ತು ಡಿಆರ್‌ಎಸ್‌ನ ಕಳಪೆ ಬಳಕೆ ಎಂಬ ವಿಭಾಗಗಳನ್ನು ಮಾಡಿಕೊಂಡಿದ್ದಾನೆ.
ಗುರುತಿಸಿರುವ ತಪ್ಪುಗಳು ಕೈಬಿಟ್ಟ ಕ್ಯಾಚ್‌ಗಳು- 2 ಮಿಸ್‌ಫೀಲ್ಡ್- 7 ಕಳಪೆ ಥ್ರೋ- 18 ಡಿಆರ್‌ಎಸ್‌ನ ಕಳಪೆ ಬಳಕೆ- 2
ನ್ಯೂಜಿಲೆಂಡ್ ಅಭಿಮಾನಿಯ ಈ ಕೆಲಸ ಈಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ. ಅಂತರರಾಷ್ಟ್ರಿಯ ಮಟ್ಟದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾನ ಹರಾಜಾಗಿದೆ.