Hockey World Cup 2026: ಒಂದೇ ಗುಂಪಿನಲ್ಲಿ ಭಾರತ- ಪಾಕಿಸ್ತಾನ

Hockey World Cup 2026: 2026ರ FIH ಹಾಕಿ ವಿಶ್ವಕಪ್‌ಗೆ ತಂಡಗಳನ್ನು ಘೋಷಿಸಲಾಗಿದೆ. ಪುರುಷರ ವಿಭಾಗದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗ್ರೂಪ್ ಡಿ ನಲ್ಲಿ ಸ್ಥಾನ ಪಡೆದಿವೆ. ನೆದರ್‌ಲ್ಯಾಂಡ್ಸ್‌ನಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಇಂಗ್ಲೆಂಡ್, ವೇಲ್ಸ್ ಸಹ ಅದೇ ಗುಂಪಿನಲ್ಲಿವೆ. ಭಾರತದ ಮಹಿಳಾ ತಂಡವೂ ಗ್ರೂಪ್ ಡಿ ನಲ್ಲಿ ಚೀನಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಕ್ರಿಕೆಟ್ ನಂತರ, ಈಗ ಹಾಕಿ ಅಖಾಡದಲ್ಲಿ ಈ ಸಾಂಪ್ರದಾಯಿಕ ವೈರಿಗಳ ಮುಖಾಮುಖಿ ಕುತೂಹಲ ಮೂಡಿಸಿದೆ.

Hockey World Cup 2026: ಒಂದೇ ಗುಂಪಿನಲ್ಲಿ ಭಾರತ- ಪಾಕಿಸ್ತಾನ
Hockey World Cup 2026

Updated on: Mar 18, 2026 | 8:58 PM

ಫೆಬ್ರವರಿ 15 ರಂದು ನಡೆದ ಟಿ20 ವಿಶ್ವಕಪ್ ಲೀಗ್ ಹಂತದ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿತ್ತು. ಇದೀಗ ಮತ್ತೊಮ್ಮೆ ಎರಡು ದೇಶಗಳ ತಂಡಗಳು ಪರಸ್ಪರ ಎದುರುಬದುರಾಗುತ್ತಿವೆ. ಆದರೆ ಈ ಬಾರಿ ಎರಡು ತಂಡಗಳು ಮುಖಾಮುಖಿಯಾಗುತ್ತಿರುವುದು ಕ್ರಿಕೆಟ್ ಮೈದಾನದಲ್ಲಿ ಅಲ್ಲ. ಬದಲಿಗೆ ಹಾಕಿ ಮೈದಾನದಲ್ಲಿ. 2026 ರ ಎಫ್‌ಐಎಚ್ ಹಾಕಿ ವಿಶ್ವಕಪ್ (Hockey World Cup 2026) ಪಂದ್ಯಾವಳಿ ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ನಡೆಯಲಿದೆ. ಪಂದ್ಯಾವಳಿ ಆಗಸ್ಟ್ 15 ರಂದು ಪ್ರಾರಂಭವಾಗಿ ಆಗಸ್ಟ್ 30 ರಂದು ಮುಕ್ತಾಯಗೊಳ್ಳಲಿದೆ. ಈ ಪಂದ್ಯಾವಳಿಗಾಗಿ ತಂಡಗಳನ್ನು ಗುಂಪುಗಳಾಗಿ ವಿಂಗಡಿಸಲಾಗಿದೆ. ಪುರುಷ ಮತ್ತು ಮಹಿಳಾ ತಂಡಗಳನ್ನು ತಲಾ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರ ಪ್ರಕಾರ, ಪ್ರತಿ ಗುಂಪಿನಲ್ಲಿ 4 ತಂಡಗಳಿವೆ.

ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ

2026 ರ ಹಾಕಿ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳನ್ನು ಕ್ರಿಕೆಟ್‌ನಲ್ಲಿರುವಂತೆಯೇ ಒಂದೇ ಗುಂಪಿನಲ್ಲಿ ಇರಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಜೊತೆಗೆ, ಈ ಡಿ ಗುಂಪಿನಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಸೇರಿವೆ. ಗುಂಪು ಡಿ ಯಲ್ಲಿರುವ ಎಲ್ಲಾ ತಂಡಗಳ ಪಂದ್ಯಗಳನ್ನು ನೆದರ್‌ಲ್ಯಾಂಡ್ಸ್‌ನಲ್ಲಿ ಆಯೋಜಿಸಲಾಗುತ್ತದೆ.

ಮಹಿಳಾ ತಂಡ ಯಾವ ಗುಂಪಿನಲ್ಲಿ?

ಮಹಿಳಾ ಹಾಕಿ ತಂಡವು ಗ್ರೂಪ್ ಡಿ ನಲ್ಲಿ ಸ್ಥಾನ ಪಡೆದಿದೆ. ಈ ಗ್ರೂಪ್ ಡಿ ನಲ್ಲಿ ಚೀನಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಸೇರಿವೆ. ಭಾರತದ ಮಹಿಳಾ ಹಾಕಿ ತಂಡದ ಪಂದ್ಯಗಳು ಕೂಡ ನೆದರ್ಲ್ಯಾಂಡ್ಸ್​ನಲ್ಲಿಯೇ ನಡೆಯಲಿವೆ.

ಯಾವ ತಂಡಗಳು ಯಾವ ಗುಂಪಿನಲ್ಲಿವೆ?

  • ಗುಂಪು ಎ: ನೆದರ್ಲ್ಯಾಂಡ್ಸ್, ಅರ್ಜೆಂಟೀನಾ, ನ್ಯೂಜಿಲೆಂಡ್ ಮತ್ತು ಜಪಾನ್
  • ಗುಂಪು ಬಿ: ಬೆಲ್ಜಿಯಂ, ಜರ್ಮನಿ, ಫ್ರಾನ್ಸ್ ಮತ್ತು ಮಲೇಷ್ಯಾ.
  • ಗುಂಪು ಸಿ: ಆಸ್ಟ್ರೇಲಿಯಾ, ಸ್ಪೇನ್, ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ
  • ಗುಂಪು ಡಿ: ಇಂಗ್ಲೆಂಡ್, ಭಾರತ, ಪಾಕಿಸ್ತಾನ ಮತ್ತು ವೇಲ್ಸ್

ಮಹಿಳಾ ವಿಭಾಗ

  • ಗುಂಪು ಎ: ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ಚಿಲಿ ಮತ್ತು ಜಪಾನ್.
  • ಗುಂಪು ಬಿ: ಅರ್ಜೆಂಟೀನಾ, ಜರ್ಮನಿ, ಅಮೆರಿಕ ಮತ್ತು ಸ್ಕಾಟ್ಲೆಂಡ್.
  • ಗುಂಪು ಸಿ: ಬೆಲ್ಜಿಯಂ, ಸ್ಪೇನ್, ನ್ಯೂಜಿಲೆಂಡ್ ಮತ್ತು ಐರ್ಲೆಂಡ್.
  • ಗುಂಪು ಡಿ: ಚೀನಾ, ಇಂಗ್ಲೆಂಡ್, ಭಾರತ ಮತ್ತು ದಕ್ಷಿಣ ಆಫ್ರಿಕಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us