
GT vs CSK Live Score, IPL 2023: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2023 ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಫೈನಲ್ಗೆ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿತು. 173 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 157 ರನ್ಗಳಿಗೆ ಆಲೌಟ್ ಆಗುವ ಮೂಲಕ 15 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಸಿಎಸ್ಕೆ ಫೈನಲ್ ಪ್ರವೇಶಿಸಿದೆ.
ಹಾಗೆಯೇ ಈ ಸೋಲಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು 2ನೇ ಕ್ವಾಲಿಫೈಯರ್ ಆಡಬೇಕಿದೆ. ಅಂದರೆ ಬುಧವಾರ ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಗೆಲ್ಲುವ ತಂಡದೊಡನೆ ಗುಜರಾತ್ ಟೈಟಾನ್ಸ್ ತಂಡ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಸಿಎಸ್ಕೆ ವಿರುದ್ಧ ಫೈನಲ್ ಆಡಲಿದೆ.
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಶುಭಮನ್ ಗಿಲ್, ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ದಸುನ್ ಶಾನಕ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ದರ್ಶನ್ ನಲ್ಕಂಡೆ, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.
ಗುಜರಾತ್ ಟೈಟಾನ್ಸ್ ತಂಡ ಹೀಗಿದೆ: ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್) , ಹಾರ್ದಿಕ್ ಪಾಂಡ್ಯ (ನಾಯಕ) , ಶುಭ್ಮನ್ ಗಿಲ್ , ದಸುನ್ ಶಾನಕ , ಡೇವಿಡ್ ಮಿಲ್ಲರ್ , ರಾಹುಲ್ ತೆವಾಟಿಯಾ , ರಶೀದ್ ಖಾನ್ , ಮೋಹಿತ್ ಶರ್ಮಾ , ನೂರ್ ಅಹ್ಮದ್ , ಮೊಹಮ್ಮದ್ ಶಮಿ , ಯಶ್ ದಯಾಳ್ , ವಿಜಯ್ ಶಂಕರ್ , ಶಿವಂ ಭರತ್ , ಶಿವಂ ಭರತ್ ಕಿಶೋರ್ , ಅಭಿನವ್ ಮನೋಹರ್ , ಓಡಿಯನ್ ಸ್ಮಿತ್ , ಅಲ್ಜಾರಿ ಜೋಸೆಫ್ , ಮ್ಯಾಥ್ಯೂ ವೇಡ್ , ಜೋಶುವಾ ಲಿಟಲ್ ,ದರ್ಶನ್ ನಲ್ಕಂಡೆ , ಉರ್ವಿಲ್ ಪಟೇಲ್ , ಸಾಯಿ ಸುದರ್ಶನ್ , ಜಯಂತ್ ಯಾದವ್ , ಪ್ರದೀಪ್ ಸಾಂಗ್ವಾನ್.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ: ಎಂಎಸ್ ಧೋನಿ (ನಾಯಕ), ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಮತೀಶ ಪತಿರಾನ, ಮಿಚೆಲ್ ಸ್ಯಾಂಟರ್, ಶೇಕ್ ರಶೀದ್, ಆಕಾಶ್ ಸಿಂಗ್, ಸಿಸಂದಾ ಮಗಲಾ, ಡ್ವೈನ್ ಪ್ರಿಟೋರಿಯಸ್, ಬೆನ್ ಸ್ಟೋಕ್ಸ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಆರ್ ಎಸ್ ಹಂಗರ್ಗೇಕರ್, ಭಗತ್ ವರ್ಮಾ, ನಿಶಾಂತ್ ಸಿಂಧು.
15 ರನ್ಗಳಿಂದ ಸೋಲನುಭವಿಸಿದ ಗುಜರಾತ್ ಟೈಟಾನ್ಸ್
ತುಷಾರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ಆದ ರಶೀದ್ ಖಾನ್ (3))
ತುಷಾರ್ ಎಸೆತದಲ್ಲಿ ಆಫ್ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ರಶೀದ್ ಖಾನ್
ಕೊನೆಯ 12 ಎಸೆತಗಳಲ್ಲಿ 35 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ರಶೀದ್ ಖಾನ್-ನೂರ್ ಅಹ್ಮದ್ ಬ್ಯಾಟಿಂಗ್
ಪತಿರಾನ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ವಿಜಯ್ ಶಂಕರ್…ಬೌಂಡರಿ ಲೈನ್ನಿಂದ ಓಡಿ ಬಂದು ಡೈವಿಂಗ್ ಕ್ಯಾಚ್ ಹಿಡಿದ ರುತುರಾಜ್…ವಿಜಯ್ ಶಂಕರ್ (14) ಔಟ್
ತುಷಾರ್ ದೇಶಪಾಂಡೆ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ರಶೀದ್ ಖಾನ್
ಕ್ರೀಸ್ನಲ್ಲಿ ರಶೀದ್ ಖಾನ್ – ವಿಜಯ್ ಶಂಕರ್ ಬ್ಯಾಟಿಂಗ್
ಕ್ರೀಸ್ನಲ್ಲಿ ವಿಜಯ್ ಶಂಕರ್-ರಶೀದ್ ಖಾನ್ ಬ್ಯಾಟಿಂಗ್
ಮಹೀಶ್ ತೀಕ್ಷಣ ಎಸೆತದಲ್ಲಿ ರಾಹುಲ್ ತೆವಾಟಿಯಾ (3) ಕ್ಲೀನ್ ಬೌಲ್ಡ್
ದೀಪಕ್ ಚಹರ್ ಎಸೆತದಲ್ಲಿ ಬಿಗ್ ಹಿಟ್ಗೆ ಯತ್ನ…ಬೌಂಡರಿ ಲೈನ್ನಲ್ಲಿ ಕ್ಯಾಚ್…ಶುಭ್ಮನ್ ಗಿಲ್ (42) ಔಟ್
ಜಡೇಜಾ ಎಸೆತದಲ್ಲಿ ಡೇವಿಡ್ ಮಿಲ್ಲರ್ (4) ಬೌಲ್ಡ್
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್
ಮೊದಲ 6 ಓವರ್ಗಳಲ್ಲಿ ಕೇವಲ 41 ರನ್ ನೀಡಿದ ಸಿಎಸ್ಕೆ
ಕ್ರೀಸ್ನಲ್ಲಿ ಶುಭ್ಮನ್ ಗಿಲ್ – ದಸುನ್ ಶಾನಕ ಬ್ಯಾಟಿಂಗ್
ಮಹೀಶ್ ತೀಕ್ಷಣ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಹಾರ್ದಿಕ್ ಪಾಂಡ್ಯ (8)
ದೀಪಕ್ ಚಹರ್ ಎಸೆತದಲ್ಲಿ ಸ್ಕ್ವೇರ್ ಲೆಗ್ನತ್ತ ಬಾರಿಸಿದ ವೃದ್ದಿಮಾನ್ ಸಾಹ…ನೇರವಾಗಿ ಫೀಲ್ಡರ್ ಕೈಗೆ ಚೆಂಡು…ಸಾಹ (12) ಔಟ್
ದೀಪಕ್ ಚಹರ್ ಎಸೆತದಲ್ಲಿ ಅತ್ಯಾಕರ್ಷಕ ಪಿಕ್ ಶಾಟ್ ಮೂಲಕ ಸಿಕ್ಸ್ ಸಿಡಿಸಿದ ಗಿಲ್
ಮೊದಲ ಓವರ್ನಲ್ಲಿ ಕೇವಲ 3 ರನ್ ನೀಡಿದ ದೀಪಕ್ ಚಹರ್
ಕ್ರೀಸ್ನಲ್ಲಿ ವೃದ್ಧಿಮಾನ್ ಸಾಹ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್
ಗುಜರಾತ್ ಟೈಟಾನ್ಸ್ ತಂಡಕ್ಕೆ 173 ರನ್ಗಳ ಸ್ಪರ್ಧಾತ್ಮಕ ಗುರಿ
ಶಮಿ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಮೊಯೀನ್ ಅಲಿ
ಶಮಿ ಎಸೆತದಲ್ಲಿ ಡೀಪ್ ಕವರ್ನತ್ತ ಭರ್ಜರಿ ಬೌಂಡರಿ ಬಾರಿಸಿದ ರವೀಂದ್ರ ಜಡೇಜಾ
ಕ್ರೀಸ್ನಲ್ಲಿ ರವೀಂದ್ರ ಜಡೇಜಾ ಹಾಗೂ ಮೊಯೀನ್ ಅಲಿ ಬ್ಯಾಟಿಂಗ್
ಮೋಹಿತ್ ಶರ್ಮಾ ಎಸೆತದಲ್ಲಿ ಫ್ರಂಟ್ ಫೀಲ್ಡರ್ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿ ಹೊರನಡೆದ ಧೋನಿ (1)
ರಶೀದ್ ಖಾನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಅಂಬಾಟಿ ರಾಯುಡು (17)
ರಶೀದ್ ಖಾನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಂಬಾಟಿ ರಾಯುಡು
ಮೊಹಮ್ಮದ್ ಶಮಿ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್ನಲ್ಲಿ ಕ್ಯಾಚ್…ಡೆವೊನ್ ಕಾನ್ವೆ (40) ಔಟ್
ದರ್ಶನ್ ನಲ್ಕಂಡೆ ಎಸೆತದಲ್ಲಿ ಬೌಂಡರಿ ಬಾರಿಸಿ ರನ್ ಖಾತೆ ತೆರೆದ ಅಂಬಾಟಿ ರಾಯುಡು
ದರ್ಶನ್ ನಲ್ಕಂಡೆ ಎಸೆತದಲ್ಲಿ ಸ್ಕ್ವೇರ್ನಲ್ಲಿ ಗಿಲ್ಗೆ ಸುಲಭ ಕ್ಯಾಚ್ ನೀಡಿ ಹೊರನಡೆದ ಅಜಿಂಕ್ಯ ರಹಾನೆ (17)
ದರ್ಶನ್ ನಲ್ಕಂಡೆ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಹಾನೆ
ದರ್ಶನ್ ನಲ್ಕಂಡೆ ಎಸೆತದಲ್ಲಿ ಕಾನ್ವೆ ಬ್ಯಾಟ್ ಎಡ್ಜ್..ವಿಕೆಟ್ ಕೀಪರ್ನ ವಂಚಿಸಿ ಚೆಂಡು ಬೌಂಡರಿಗೆ…ಫೋರ್
ಕ್ರೀಸ್ನಲ್ಲಿ ಕಾನ್ವೆ ಹಾಗೂ ರಹಾನೆ ಬ್ಯಾಟಿಂಗ್
ನೂರ್ ಅಹ್ಮದ್ ಎಸೆತದಲ್ಲಿ ಶಿವಂ ದುಬೆ (1) ಕ್ಲೀನ್ ಬೌಲ್ಡ್
ಮೋಹಿತ್ ಶರ್ಮಾ ಎಸೆತದಲ್ಲಿ ಕ್ಯಾಚ್ ನೀಡಿದ ರುತುರಾಜ್ ಗಾಯಕ್ವಾಡ್
44 ಎಸೆತಗಳಲ್ಲಿ 60 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರುತುರಾಜ್
ಕ್ರೀಸ್ನಲ್ಲಿ ಕಾನ್ವೆ (24) ಹಾಗೂ ರುತುರಾಜ್ (60) ಬ್ಯಾಟಿಂಗ್
ನೂರ್ ಅಹ್ಮದ್ ಎಸೆತದಲ್ಲಿ ಸ್ಕ್ವೇರ್ ಕಟ್ ಮೂಲಕ ಫೋರ್ ಬಾರಿಸಿದ ಡೆವೊನ್ ಕಾನ್ವೆ
36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರುತುರಾಜ್ ಗಾಯಕ್ವಾಡ್
ಮೊದಲ 6 ಓವರ್ಗಳಲ್ಲಿ 49 ರನ್ ಕಲೆಹಾಕಿದ ಸಿಎಸ್ಕೆ
ಕ್ರೀಸ್ನಲ್ಲಿ ಡೆವೊನ್ ಕಾನ್ವೆ (14) ಹಾಗೂ ರುತುರಾಜ್ ಗಾಯಕ್ವಾಡ್ (33) ಬ್ಯಾಟಿಂಗ್
ನೂರ್ ಅಹ್ಮದ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕವಾಗಿ ಫೋರ್ ಬಾರಿಸಿದ ನೂರ್ ಅಹ್ಮದ್
ರುತುರಾಜ್ (28) ಹಾಗೂ ಕಾನ್ವೆ (10) ಬ್ಯಾಟಿಂಗ್
ದರ್ಶನ್ ನಲ್ಕಂಡೆಯ ಕೊನೆಯ ಎಸೆತದಲ್ಲಿ ಆಫ್ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಎಡಗೈ ದಾಂಡಿಗ ಡೆವೊನ್ ಕಾನ್ವೆ
ಶಮಿ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಫೋರ್ ಬಾರಿಸಿದ ರುತುರಾಜ್ ಗಾಯಕ್ವಾಡ್
ಕ್ರೀಸ್ನಲ್ಲಿ ಕಾನ್ವೆ-ಗಾಯಕ್ವಾಡ್ ಬ್ಯಾಟಿಂಗ್
ದರ್ಶನ್ ನಲ್ಕಂಡೆ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರುತುರಾಜ್
ಮೊದಲ ಓವರ್ನಲ್ಲಿ ಕೇವಲ 4 ರನ್ ನೀಡಿದ ಶಮಿ
ಕ್ರೀಸ್ನಲ್ಲಿ ಕಾನ್ವೆ-ಗಾಯಕ್ವಾಡ್ ಬ್ಯಾಟಿಂಗ್
ಮೊದಲ ಓವರ್: ಮೊಹಮ್ಮದ್ ಶಮಿ
ಆರಂಭಿಕರು: ರುತುರಾಜ್ ಗಾಯಕ್ವಾಡ್-ಡೆವೊನ್ ಕಾನ್ವೆ
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಶುಭಮನ್ ಗಿಲ್, ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ದಸುನ್ ಶಾನಕ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ದರ್ಶನ್ ನಲ್ಕಂಡೆ, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದಾರೆ.
Hello from Chennai ?
It’s time for #Qualifier1 ? #TATAIPL | #GTvCSK
Gujarat Titans or Chennai Super Kings?
Let’s hear who you’re rooting for ? pic.twitter.com/gR8AjwPXm4
— IndianPremierLeague (@IPL) May 23, 2023
ಟಾಸ್ ಪ್ರಕ್ರಿಯೆ: 7 ಗಂಟೆಗೆ
ಪಂದ್ಯ ಶುರು: 7.30 ಕ್ಕೆ
ಸ್ಥಳ: ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
Published On - 6:29 pm, Tue, 23 May 23