Khelo India University Games: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಸಮಾರೋಪ ಸಮಾರಂಭದಲ್ಲಿ ಅಮಿತ್​ ಶಾ ಭಾಗಿ

Khelo India University Games: 10 ದಿನಗಳ ಕಾಲ ಆಯೋಜನೆ ಮಾಡಿದ್ದ ಈ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ದೇಶದ ಗೃಹಮಂತ್ರಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಮೇ 3ರಂದು ಈ ಕ್ರೀಡಾಕೂಟಕ್ಕೆ ತೆರೆ ಬೀಳಲಿದ್ದು ಆ ಕಾರ್ಯಕ್ರಮಕ್ಕಾಗಿ ಕೇಂದ್ರ ಸಚಿವ ಅಮಿತ್ ಶಾ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.

Khelo India University Games: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಸಮಾರೋಪ ಸಮಾರಂಭದಲ್ಲಿ ಅಮಿತ್​ ಶಾ ಭಾಗಿ
ಅಮಿತ್ ಶಾ
Follow us
TV9 Web
| Updated By: ಪೃಥ್ವಿಶಂಕರ

Updated on:Apr 27, 2022 | 6:07 PM

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ (Khelo India University Games) ಎರಡನೇ ಆವೃತ್ತಿಯು ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಬಾರಿ 200 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ 4,000 ಕ್ಕೂ ಹೆಚ್ಚು ಆಟಗಾರರು 20 ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಇನ್ನೂ ಈ ಕ್ರೀಡಾಕೂಟವನ್ನು ಕಳೆದ ಬಾನುವಾರದಂದು(ಏ.23) ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ ನೀಡಿದ್ದರು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ , ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಕಳೆದ ವರ್ಷ ಈ ವಿಶೇಷ ಕ್ರೀಡಾಕೂಟವನ್ನು ಕೊರೊನಾತಂಕದ ಕಾರಣದಿಂದಾಗಿ ಆಯೋಜಿಸಲಾಗಿರಲಿಲ್ಲ. 10 ದಿನಗಳ ಕಾಲ ಆಯೋಜನೆ ಮಾಡಿದ್ದ ಈ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ದೇಶದ ಗೃಹಮಂತ್ರಿ ಅಮಿತ್ ಶಾ (Amit Shah) ಭಾಗವಹಿಸಲಿದ್ದಾರೆ. ಮೇ 3ರಂದು ಈ ಕ್ರೀಡಾಕೂಟಕ್ಕೆ ತೆರೆ ಬೀಳಲಿದ್ದು ಆ ಕಾರ್ಯಕ್ರಮಕ್ಕಾಗಿ ಕೇಂದ್ರ ಸಚಿವ ಅಮಿತ್ ಶಾ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.

ಇನ್ನೂ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 ರ ಮೂರನೇ ದಿನವು ಅನೇಕ ಆಟಗಾರರು ಪದಕಗಳನ್ನು ಗೆದ್ದಿದ್ದಾರೆ. ಎರಡನೇ ದಿನದಂತೆ, ಏಪ್ರಿಲ್ 26 ರ ಮಂಗಳವಾರದ ಮೂರನೇ ದಿನ, ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಪ್ರಾಬಲ್ಯ ಸಾಧಿಸಿದೆ. ಅದು ತನ್ನ ಬುಟ್ಟಿಗೆ ಇನ್ನೂ 4 ಚಿನ್ನದ ಪದಕಗಳನ್ನು ಹಾಕಿಕೊಳ್ಳುವುದರೊಂದಿಗೆ ಕ್ರೀಡಾಕೂಟದಲ್ಲಿ ತನ್ನ ಮುನ್ನಡೆಯನ್ನು ಬಲಪಡಿಸುತ್ತಿದೆ. ಜೈನ್ ವಿಶ್ವವಿದ್ಯಾಲಯ ಇದುವರೆಗೆ 7 ಚಿನ್ನ ಸೇರಿದಂತೆ ಒಟ್ಟು 10 ಪದಕಗಳನ್ನು ಗೆದ್ದುಕೊಂಡಿದೆ. ಮತ್ತೊಂದೆಡೆ, ಮುಂಬೈ ವಿಶ್ವವಿದ್ಯಾಲಯ 5 ಚಿನ್ನದೊಂದಿಗೆ ಎರಡನೇ ಸ್ಥಾನದಲ್ಲಿದೆ. ಮೂರನೇ ದಿನ ಮಹಿಳಾ ಬಾಕ್ಸಿಂಗ್​ನಲ್ಲಿ ಆಘಾತಕಾರಿ ಫಲಿತಾಂಶ ಕಂಡು ಬಂದಿದ್ದು, ಕುರುಕ್ಷೇತ್ರ ವಿವಿಯ ವಿಂಕಾ ಮುಖಾಮುಖಿ ಸೋಲು ಕಂಡಿದ್ದಾರೆ. ವಿಂಕಾ ಕಳೆದ ವರ್ಷ ಯೂತ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಕ್ರೀಡಾಕೂಟದ ಮೂರನೇ ದಿನವಾದ ಮಂಗಳವಾರ ಈಜಿನಲ್ಲಿ 10 ಚಿನ್ನದ ಪದಕಗಳು ಪಣಕ್ಕಿಟ್ಟಿದ್ದು, ಈ ಪೈಕಿ 4 ಪದಕಗಳನ್ನು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯವೇ ವಶಪಡಿಸಿಕೊಂಡಿದೆ. ಜೈನ್ ವಿಶ್ವವಿದ್ಯಾನಿಲಯದ ಈ ನಾಲ್ಕು ಸ್ವರ್ಣಗಳು ಈಜಿನಲ್ಲಿ ಬಂದಿದ್ದು, ಹೀಗಾಗಿ ಈ ವಿಶ್ವವಿದ್ಯಾಲಯವು 7 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನೊಂದಿಗೆ ಮೊದಲ ಸ್ಥಾನದಲ್ಲಿದೆ. ವಿಶೇಷವೆಂದರೆ ಜೈನ್ ವಿಶ್ವವಿದ್ಯಾನಿಲಯದ ಎಲ್ಲ 10 ಪದಕಗಳು ಈಜಿನಲ್ಲಿ ಬಂದಿವೆ. ವಿಶ್ವವಿದ್ಯಾನಿಲಯದ ಈಜುಪಟುಗಳು ಪುರುಷರ 4×100 ಮೀ ರಿಲೇಯಲ್ಲಿ ಶಿವ ಶ್ರೀಧರ್, ಸಂಜಯ್ ಜಯಕೃಷ್ಣನ್, ರಾಜ್ ರೆಲೇಕರ್ ಮತ್ತು ಒಲಿಂಪಿಯನ್ ಶ್ರೀಹರಿ ನಟರಾಜ ಅವರ ವೇಗದ ಲ್ಯಾಪ್ ಸಮಯ 3.34.86 ಸೆಕೆಂಡುಗಳು ಸೇರಿದಂತೆ ಕೆಲವು ದಾಖಲೆಗಳನ್ನು ಸ್ಥಾಪಿಸಿದರು.

ವೇಟ್ ಲಿಫ್ಟಿಂಗ್​ನಲ್ಲಿ ಸಾವಿತ್ರಿಬಾಯಿ ವಿಶ್ವವಿದ್ಯಾಲಯ ಮೇಲುಗೈ ಇದಲ್ಲದೇ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯ ವೇಟ್ ಲಿಫ್ಟಿಂಗ್​ನಲ್ಲಿ ತನ್ನ ಅಧಿಪತ್ಯವನ್ನು ಕಾಯ್ದುಕೊಂಡು ಮತ್ತೆ 2 ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ. ವೈಷ್ಣವ್ ಠಾಕೂರ್ (96 ಕೆಜಿ) ಮತ್ತು ಚಿರಾಗ್ ವಾಘ್ವಾಲೆ (102 ಕೆಜಿ) ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಈ ಮೂಲಕ ಸಾವಿತ್ರಿಬಾಯಿ ವಿಶ್ವವಿದ್ಯಾಲಯ 4 ಚಿನ್ನ ಸೇರಿದಂತೆ 15 ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ವಿಂಕಾಗೆ ಆಘಾತಕಾರಿ ಸೋಲು ಬಾಲಕಿಯರ 60 ಕೆಜಿ ಬಾಕ್ಸಿಂಗ್‌ನಲ್ಲಿ ದಿನದ ಪ್ರಮುಖ ಫಲಿತಾಂಶ ಬಂದಿದೆ. ಈ ವೇಳೆ ಫೇವರಿಟ್ ಎನಿಸಿಕೊಂಡಿರುವ ಕುರುಕ್ಷೇತ್ರ ವಿವಿಯ ವಿಂಕಾ ಆಘಾತಕಾರಿ ಸೋಲು ಎದುರಿಸಬೇಕಾಯಿತು. ವಿಶ್ವವಿದ್ಯಾನಿಲಯದಲ್ಲಿ ಬಿಎ ಓದುತ್ತಿರುವ ಈ ಬಾಕ್ಸರ್ ಪಂಡಿತ್ ದೀನದಯಾಳ್ ಉಪಾಧ್ಯಾಯ ಶೇಖಾವತಿ ವಿಶ್ವವಿದ್ಯಾನಿಲಯದ ಮುಸ್ಕಾನ್ ವಿರುದ್ಧ ಪರಾಭವಗೊಂಡರು. ವಿಂಕಾ ಕಳೆದ ವರ್ಷ ಐಬಿಎ ಯೂತ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು. ಹೀಗಾಗಿ ಈ ಸೋಲು ಎಲ್ಲರನ್ನು ಆಶ್ಚರ್ಯಗೊಳಿಸಿತು.

ಇದನ್ನೂ ಓದಿ:Virat Kohli: ಕಳಪೆ ಫಾರ್ಮ್​ನಲ್ಲಿರುವ ಕೊಹ್ಲಿಗೆ ಬಿಸಿಸಿಐನಿಂದಲೂ ಬರೆ! ಟಿ20 ತಂಡಕ್ಕೆ ವಿರಾಟ್ ಆಯ್ಕೆ ಅನುಮಾನ?

Published On - 6:06 pm, Wed, 27 April 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ