India vs Australia Test Series | ಅಶ್ವಿನ್ ಜಾಗದಲ್ಲಿ ನಾನಿದ್ದಿದ್ದರೆ ಪೈನ್​ಗೆ ಜೀವಮಾನವಿಡೀ ಮರ್ಯಾದೆ ಕೊಡುತ್ತಿರಲಿಲ್ಲ: ಡೇವಿಡ್ ಲಾಯ್ಡ್

ಎದುರಾಳಿ ತಂಡದ ಆಟಗಾರರನ್ನು ಮೂದಲಿಸದಂತೆ, ಸ್ಲೆಡ್ಜ್ ಮಾಡದಂತೆ ತಡೆಯುವುದು ನಾಯಕನ ಕರ್ತವ್ಯವಾಗಿರುತ್ತದೆ, ವೈಯಕ್ತಿಕವಾದ ಉದಾಹರಣೆಯೊಂದಿಗೆ ಅವನು ಟೀಮನ್ನು ಮುನ್ನಡೆಸಬೇಕು ಎಂದು ಇಂಗ್ಲೆಂಡ್​ ಮಾಜಿ ಆಟಗಾರ ಡೇವಿಡ್ ಲಾಯ್ಡ್ ಹೇಳಿದ್ದಾರೆ.

India vs Australia Test Series | ಅಶ್ವಿನ್ ಜಾಗದಲ್ಲಿ ನಾನಿದ್ದಿದ್ದರೆ ಪೈನ್​ಗೆ ಜೀವಮಾನವಿಡೀ ಮರ್ಯಾದೆ ಕೊಡುತ್ತಿರಲಿಲ್ಲ: ಡೇವಿಡ್ ಲಾಯ್ಡ್
ಅಶ್ವಿನ್​ರನ್ನು ಮೂದಲಿಸುತ್ತಿರುವ ಟಿಮ್ ಪೈನ್
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:Feb 22, 2021 | 6:40 PM

ಇಂಗ್ಲೆಂಡ್ ಮಾಜಿ ಆಟಗಾರ, ಖ್ಯಾತ ಕಾಮೆಂಟೇಟರ್ ಮತ್ತು ಕ್ರಿಕೆಟ್ ಅಂಕಣಕಾರರೂ ಆಗಿರುವ ಡೇವಿಡ್ ಲಾಯ್ಡ್, ಸಿಡ್ನಿ ಟೆಸ್ಟ್​ ಕೊನೆಯ ದಿನದಂದು ನಿರಂತರವಾಗಿ ಭಾರತದ ರವಿಚಂದ್ರನ್ ಅಶ್ವಿನ್ ಅವರನ್ನು ಮೂದಲಿಸುತ್ತಾ ಅವರ ಏಕಾಗ್ರತೆಗೆ ಭಂಗ ತರುವ ಪ್ರಯತ್ನ ಮಾಡಿದ ಆಸ್ಟ್ರೇಲಿಯಾ ಟೀಮಿನ ನಾಯಕ ಟಿಮ್ ಪೈನ್​ರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ದಿ ಡೈಲಿ ಮೇಲ್​ ಪತ್ರಿಕೆಗೆ ಬರೆದಿರುವ ಅಂಕಣದಲ್ಲಿ ಲಾಯ್ಡ್​, ಪೈನ್ ವಿಕೆಟ್​ ಹಿಂದೆ ನಿಂತುಕೊಂಡು ಮಾಡುತ್ತಿದ್ದ ಮೂದಲಿಕೆ ಕೇಳಿ ತಾವು ದಿಗ್ಭಾಂತರಾಗಿದ್ದಾಗಿ ಬರೆದುಕೊಂಡಿದ್ದಾರೆ. ಯಾರಾದರೂ ತಮ್ಮನ್ನು ಹಾಗೆ ಟಾರ್ಗೆಟ್ ಮಾಡಿದ್ದರೆ ಜೀವನ ಪರ್ಯಂತ ಅವರಿಗೆ ಮರ್ಯಾದೆ ಕೊಡುತ್ತಿರಲಿಲ್ಲ ಎಂದು ಲಾಯ್ಡ್ ಬರೆದಿದ್ದಾರೆ.

‘ಎದುರಾಳಿ ತಂಡದ ಆಟಗಾರರನ್ನು ಮೂದಲಿಸದಂತೆ, ಸ್ಲೆಡ್ಜ್ ಮಾಡದಂತೆ ತಡೆಯುವುದು ನಾಯಕನ ಕರ್ತವ್ಯವಾಗಿರುತ್ತದೆ, ವೈಯಕ್ತಿಕವಾದ ಉದಾಹರಣೆಯೊಂದಿಗೆ ಅವನು ಟೀಮನ್ನು ಮುನ್ನಡೆಸಬೇಕು. ಇದೇ ವಿಷಯವನ್ನು ಬೇರೆ ರೀತಿಯಲ್ಲಿ ನಾನು ಹೇಳಬಯಸುತ್ತೇನೆ. ರವಿಚಂದ್ರನ್ ಅಶ್ವಿನ್ ಎದುರಿಸಿದ್ದು ನನ್ನೊಂದಿಗೆ ನಡೆದಿದ್ದರೆ, ಹಾಗೆ ಮಾಡಿದವನಿಗೆ ನಾನು ಯಾವತ್ತೂ ಮರ್ಯಾದೆ ನೀಡುತ್ತಿರಲಿಲ್ಲ’ ಎಂದು ಲಾಯ್ಡ್ ಅಂಕಣದಲ್ಲಿ ಹೇಳಿದ್ದಾರೆ.

ಡೇವಿಡ್ ಲಾಯ್ಡ್

‘ವಿಕೆಟ್​ ಹಿಂದೆ ಪೈನ್ ಕಿರುಚುತ್ತಿರುವುದು ಕಂಡು ನಾನು ದಿಗ್ಮೂಢನಾದೆ. ಎರಡು ದಶಕಗಳ ಕಾಲ ನಾನು ಕ್ರಿಕೆಟ್ ಆಡಿದ್ದೇನೆ, ಆಗ ಸ್ಲೆಡ್ಜಿಂಗ್ ಅನ್ನೋದು ಅಸ್ತಿತ್ವದಲೇ ಇರಲಿಲ್ಲ. ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಇಯಾನ್ ಚಾಪೆಲ್ ಅದನ್ನು ಮಾಡಿಸುತ್ತಿದ್ದರು ಅಂತ ಜನ ಹೇಳುತ್ತಾರೆ. ಆದರೆ, ಜೆಫ್ ಥಾಮ್ಸನ್ ಮತ್ತು ಡೆನಿಸ್ ಲಿಲ್ಲೀ ಮೊದಲಾದವರು ಮಾಡುತ್ತಿದ್ದಿದ್ದು ಒಂದು ಬಗೆಯ ಮೋಜಿನಂತಿರುತಿತ್ತು. ದಿನದಾಟ ಮುಗಿದ ನಂತರ ಅವರೊಂದಿಗೆ ಕೂತು ಬಿಯರ್ ಹೀರಲು ಮನಸ್ಸಾಗದ ರೀತಿಯಲ್ಲಿ ಅವರು ಯಾವತ್ತೂ ಮಾತಾಡಿರಲಿಲ್ಲ’ ಎಂದು ಲಾಯ್ಡ್ ಹೇಳಿದ್ದಾರೆ.

‘ಪೈನ್ ಅವರ ಹೇಸಿಗೆ ಹುಟ್ಟಿಸುವ ಮಾತುಗಳನ್ನು ಕೇಳಿಸಿಕೊಂಡ ನಂತರ ಆಸ್ಟ್ರೇಲಿಯಾದ ಆಟಗಾರರೊಂದಿಗೆ ಕೂತು ಡ್ರಿಂಕ್ಸ್ ತೆಗೆದುಕೊಳ್ಳಲು ಅಶ್ವಿನ್​ಗೆ ಮನಸ್ಸಾದರೂ ಹೇಗೆ ಬಂದೀತು? ತಮ್ಮ ಕೆಟ್ಟ ಮ್ಯಾನಿರಿಸಂಗಳನ್ನು ಸ್ಯಾಂಡ್ ಪೇಪರ್​ನಿಂದ ಒರೆಸಿಕೊಂಡರಾಯಿತು ಎಂದು ಅವರು ಭಾವಿಸಿದಂತಿದೆ. ಇವರು ಸುಧಾರಿಸುವುದು ಯಾವಾಗ? ಅವರೆಲ್ಲ ಯಾಕೆ ಹಾಗೆ ಆಡುತ್ತಾರೆನ್ನುವುದು ನನಗರ್ಥವಾಗುತ್ತಿಲ್ಲ.’ ಎಂದು ಲಾಯ್ಡ್ ಬರೆದುಕೊಂಡಿದ್ದಾರೆ.

Published On - 9:35 pm, Tue, 12 January 21

ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ