ICC Test Rankings: ಬಾಬರ್ ಹೊಸ ಹೆಜ್ಜೆ: ಟಾಪ್-10 ನಲ್ಲಿ ನಾಲ್ವರು ಭಾರತೀಯರು

| Updated By: ಝಾಹಿರ್ ಯೂಸುಫ್

Updated on: Jul 27, 2022 | 4:24 PM

ICC Test Rankings: ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾದ ನಾಲ್ವರು ಕಾಣಿಸಿಕೊಂಡಿದ್ದಾರೆ. ಇಬ್ಬರು ಬ್ಯಾಟ್ಸ್​ಮನ್​ಗಳು ಹಾಗೂ ಇಬ್ಬರು ಬೌಲರ್​ಗಳು ಅಗ್ರ ಹತ್ತರಲ್ಲಿ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ICC Test Rankings: ಬಾಬರ್ ಹೊಸ ಹೆಜ್ಜೆ: ಟಾಪ್-10 ನಲ್ಲಿ ನಾಲ್ವರು ಭಾರತೀಯರು
Babar Azam-Virat Kohli
Follow us on

ಐಸಿಸಿ ನೂತನ ಟೆಸ್ಟ್ ಬ್ಯಾಟ್ಸ್​ಮನ್ ರ‍್ಯಾಂಕಿಂಗ್ ಪಟ್ಟಿಯನ್ನು (ICC Test Rankings) ಪ್ರಕಟಿಸಿದೆ. ವಿಶೇಷ ಎಂದರೆ ಈ ಬಾರಿ ಪಾಕಿಸ್ತಾನ್ ನಾಯಕ ಬಾಬತ್ ಆಜಂ (Babar Azam) ಶ್ರೇಯಾಂಕ ಪಟ್ಟಿಯಲ್ಲಿ ಮೇಲೇರಿದ್ದಾರೆ. ಅಂದರೆ ಪ್ರಸ್ತುತ ಟೆಸ್ಟ್ ರ‍್ಯಾಂಕಿಂಗ್​ನಲ್ಲಿ ಬಾಬರ್ 3ನೇ ಸ್ಥಾನ ಅಲಂಕರಿಸುವ ಮೂಲಕ ಅಗ್ರಸ್ಥಾನದತ್ತ ಹೆಜ್ಜೆಯಿಟ್ಟಿದ್ದಾರೆ. ಈಗಾಗಲೇ ಟಿ20 ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್​ನಲ್ಲಿ ಅಗ್ರಸ್ಥಾನದಲ್ಲಿರುವ ಬಾಬರ್ ಇದೀಗ ಟೆಸ್ಟ್​ನಲ್ಲೂ ನಂಬರ್ ಸ್ಥಾನಕ್ಕೇರುವತ್ತ ದಾಪುಗಾಲಿಟ್ಟಿರುವುದು ವಿಶೇಷ. ಅಂದರೆ ಇನ್ನೆರಡು ಶ್ರೇಯಾಂಕ ಮೇಲೇರಿದರೆ ಮೂರು ಮಾದರಿ ಕ್ರಿಕೆಟ್ ಶ್ರೇಯಾಂಕದಲ್ಲೂ ನಂಬರ್ 1 ಆಟಗಾರನಾಗಿ ಬಾಬರ್ ಆಜಂ ಹೊರಹೊಮ್ಮಲಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಬಾಬರ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಈ ಮೂಲಕ ಶ್ರೇಯಾಂಕದಲ್ಲೂ ಮೇಲೇರಿದ್ದಾರೆ. ಲಂಕಾ ವಿರುದ್ದದ ಮೊದಲ ಟೆಸ್ಟ್​ನಲ್ಲಿ 119 ಹಾಗೂ 55 ರನ್ ಬಾರಿಸುವ ಮೂಲಕ ಮಿಂಚಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್​ನ ವೃತ್ತಿಜೀವನದಲ್ಲೇ ಅತ್ಯುತ್ತಮ ಶ್ರೇಯಾಂಕಕ್ಕೆ ಏರಿದ್ದಾರೆ. ಸದ್ಯ ಇಂಗ್ಲೆಂಡ್‌ನ ಜೋ ರೂಟ್ ಟೆಸ್ಟ್‌ನಲ್ಲಿ ನಂಬರ್ 1 ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.

ಮತ್ತೊಂದೆಡೆ ಟೆಸ್ಟ್ ರ‍್ಯಾಂಕಿಂಗ್​ನ ಟಾಪ್-10 ನಲ್ಲಿ ಇಬ್ಬರು ಭಾರತೀಯ ಬ್ಯಾಟ್ಸ್​ಮನ್​ಗಳು ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ರಿಷಬ್ ಪಂತ್ ಐದನೇ ಸ್ಥಾನದಲ್ಲಿದ್ದು, ಭಾರತ ತಂಡದ ನಾಯಕ ರೋಹಿತ್ ಶರ್ಮಾ 9ನೇ ಸ್ಥಾನದಲ್ಲಿದ್ದಾರೆ. ಇನ್ನು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಟಾಪ್​ 10 ನಿಂದ ಹೊರಬಿದ್ದಿದ್ದಾರೆ. ಅಂದರೆ ಕಳೆದ ಕೆಲ ವರ್ಷಗಳಿಂದ ಅಗ್ರ ಹತ್ತರಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೊಹ್ಲಿ ಈಗ 12ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಐಸಿಸಿ ಟೆಸ್ಟ್ ಬ್ಯಾಟ್ಸ್​ಮನ್​ಗಳ ರ‍್ಯಾಂಕಿಂಗ್ ಪಟ್ಟಿ ಹೀಗಿದೆ:

  1. ಜೋ ರೂಟ್ (ಇಂಗ್ಲೆಂಡ್)
  2. ಮಾರ್ನಸ್ ಲಾಬುಶೇನ್ (ಆಸ್ಟ್ರೇಲಿಯಾ)
  3. ಬಾಬರ್ ಆಜಂ (ಪಾಕಿಸ್ತಾನ್)
  4. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)
  5.  ರಿಷಭ್ ಪಂತ್ (ಭಾರತ)
  6. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)
  7. ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯಾ)
  8. ದಿಮುತ್ ಕರುಣರತ್ನೆ (ಶ್ರೀಲಂಕಾ)
  9. ರೋಹಿತ್ ಶರ್ಮಾ (ಭಾರತ)
  10. ಜಾನಿ ಬೈರ್​ಸ್ಟೋವ್ (ಇಂಗ್ಲೆಂಡ್)

 

ಇನ್ನು ಟಾಪ್ 10 ಬೌಲರ್​ಗಳ ಪಟ್ಟಿಯಲ್ಲೂ ಇಬ್ಬರು ಭಾರತೀಯರು ಕಾಣಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಅಗ್ರಸ್ಥಾನವನ್ನು ಅಲಂಕರಿಸಿದ್ದು, ದ್ವಿತೀಯ ಸ್ಥಾನದಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದ್ದಾರೆ.

ಐಸಿಸಿ ಟೆಸ್ಟ್ ಬೌಲರ್​ಗಳ ರ‍್ಯಾಂಕಿಂಗ್ ಪಟ್ಟಿ ಹೀಗಿದೆ:

  1. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ)
  2. ರವಿಚಂದ್ರನ್ ಅಶ್ವಿನ್ (ಭಾರತ)
  3. ಶಾಹಿನ್ ಅಫ್ರಿದಿ (ಪಾಕಿಸ್ತಾನ್)
  4. ಜಸ್​ಪ್ರೀತ್ ಬುಮ್ರಾ (ಭಾರತ)
  5. ಕಗಿಸೊ ರಬಾಡ (ಸೌತ್ ಆಫ್ರಿಕಾ)
  6. ಜೇಮ್ಸ್ ಅಂಡರ್ಸನ್ (ಇಂಗ್ಲೆಂಡ್)
  7. ಕೈಲ್ ಜೇಮಿಸನ್ (ನ್ಯೂಜಿಲೆಂಡ್)
  8. ಕೇಮರ್ ರೋಚ್ (ವೆಸ್ಟ್ ಇಂಡೀಸ್)
  9. ನೀಲ್ ವ್ಯಾಗ್ನರ್ (ನ್ಯೂಜಿಲೆಂಡ್
  10. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)