
ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಸೋತರೂ, ಭಾರತದ ಯುವಕನೊಬ್ಬ ಆಸ್ಟ್ರೇಲಿಯಾದ ಹುಡುಗಿಯನ್ನು ಗೆದ್ದನು.
ಹೌದು, ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ, ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಭಾರತೀಯ ಯುವಕ ಆಸ್ಟ್ರೇಲಿಯಾದ ತನ್ನ ಪ್ರೇಯಸಿಗೆ ಮದುವೆಯ ಪ್ರಸ್ತಾವನೆ ಮಾಡಿದ.
ರೋಮಾಂಚನಗೊಂಡ ಆತನ ಪ್ರೇಯಸಿ, ಕೋರಿಕೆಯನ್ನು ಒಪ್ಪಿಕೊಂಡಳು. ಮೈದಾನದಿಂದ ಇದನ್ನು ಗಮನಿಸಿದ ಆಸ್ಟ್ರೇಲಿಯಾ ಆಟಗಾರ ಮ್ಯಾಕ್ಸ್ವೆಲ್ ನಗುತ್ತಾ ಚಪ್ಪಾಳೆ ತಟ್ಟಿದರು.
ಭಾರತವಂತೂ ಸತತ ಎರಡು ಪಂದ್ಯಗಳಲ್ಲಿ ಸೋತಿದೆ. ಆದರೆ ಈ ಹುಡುಗ ಮಾತ್ರ ಆಸ್ಟ್ರೇಲಿಯಾ ಯುವತಿಯ ಮನಗೆದ್ದಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗುತ್ತಿದೆ.
ಈ ತರುಣ ಮದುವೆ ಪ್ರಸ್ತಾಪ ಮುಂದಿಟ್ಟ ಸಮಯದಲ್ಲಿ ಪಂದ್ಯ ಗೆಲ್ಲಲು ಭಾರತ 180 ಎಸೆತಗಳಿಗೆ 264 ರನ್ ಗಳಿಸಬೇಕಿತ್ತು.
ಇನ್ನಷ್ಟು..
India vs Australia, 2nd ODI: ಭಾರತಕ್ಕೆ ಎರಡು ಸೋಲು.. ಏಕದಿನ ಸರಣಿ ಆಸಿಸ್ ಪಾಲು!
ಆಸಿಸ್-ಭಾರತ ನಡುವಿನ ಎರಡನೇ ಏಕದಿನ ಪಂದ್ಯದ ಸುಂದರ ಕ್ಷಣಗಳು ಇಲ್ಲಿವೆ..
ಭಾರತ ತಂಡದ ಬ್ಯಾಟಿಂಗ್ ಹೇಗಿತ್ತು? ಮ್ಯಾಚ್ ನೋಡೋದು ಮಿಸ್ ಆಗಿದ್ರೆ ಡೋಂಟ್ವರಿ.. ಇಲ್ಲಿದೆ ಕ್ವಿಕ್ ಡಿಟೇಲ್ಸ್
Published On - 7:28 pm, Sun, 29 November 20