India Odi Squad: ಏಕದಿನ ವಿಶ್ವಕಪ್ಗೆ ಭಾರತ ಸಂಭಾವ್ಯ ತಂಡ ಹೀಗಿದೆ
World Cup 2023: ಭಾರತ ತಂಡವು ಐಸಿಸಿ ಟೂರ್ನಿ ಗೆದ್ದು ಬರೋಬ್ಬರಿ 9 ವರ್ಷಗಳೇ ಕಳೆದಿವೆ. ಕೊನೆಯ ಬಾರಿ ಟೀಮ್ ಇಂಡಿಯಾ 2013 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಇದಾದ ಬಳಿಕ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ.
ಭಾರತದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗಾಗಿ (World Cup 2023) ಬಿಸಿಸಿಐ (BCCI) ಸಿದ್ಧತೆಗಳನ್ನು ಆರಂಭಿಸಿದೆ. ಅದರ ಮೊದಲ ಭಾಗವಾಗಿ ಇದೀಗ 20 ಆಟಗಾರರ ಪಟ್ಟಿಯನ್ನು ಶಾರ್ಟ್ ಲೀಸ್ಟ್ ಮಾಡಿದೆ. ಅಂದರೆ ಮುಂಬರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಬಿಸಿಸಿಐ ಇಪ್ಪತ್ತು ಆಟಗಾರರನ್ನು ಫೈನಲ್ ಮಾಡಿದ್ದು, ಈ ಆಟಗಾರರಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ 16 ಪ್ಲೇಯರ್ಸ್ ಅನ್ನು ಏಕದಿನ ವಿಶ್ವಕಪ್ಗಾಗಿ ಆಯ್ಕೆ ಮಾಡಲಿದೆ. ಹೀಗಾಗಿ ಮುಂಬರುವ ಸರಣಿಗಳು ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಮಹತ್ವದೆನಿಸಿಕೊಂಡಿದೆ.
ಈ ವರ್ಷ ಭಾರತ ತಂಡವು ಒಟ್ಟು 35 ಏಕದಿನ ಪಂದ್ಯಗಳನ್ನು ಆಡಲಿದೆ. ಈ ವೇಳೆ 20 ಆಟಗಾರರನ್ನು ಕಣಕ್ಕಿಳಿಸಿ ಪ್ರಯೋಗ ನಡೆಸಲಾಗುತ್ತದೆ. ಅಷ್ಟೇ ಅಲ್ಲದೆ ಈ ಆಟಗಾರರ ಗಾಯದ ಬಗ್ಗೆ ಕೂಡ ಹೆಚ್ಚಿನ ಕಾಳಜಿವಹಿಸಲಾಗುತ್ತದೆ. ಈ ಪಟ್ಟಿಯಲ್ಲಿರುವ ಹಿರಿಯ ಆಟಗಾರರು ಇನ್ಮುಂದೆ ಟಿ20 ತಂಡದಲ್ಲಿ ಕಾಣಿಸಿಕೊಳ್ಳುವುದು ಕೂಡ ಅನುಮಾನ ಎನ್ನಲಾಗಿದೆ. ಅದರಂತೆ ಇದೀಗ ಬಿಸಿಸಿಐ ಒಟ್ಟು 20 ಆಟಗಾರರನ್ನು ಆಯ್ಕೆ ಮಾಡಿ, ಮುಂಬರುವ ಏಕದಿನ ವಿಶ್ವಕಪ್ಗಾಗಿ ಬಲಿಷ್ಠ ಬಳಗವನ್ನು ಸೃಷ್ಟಿಸಲು ಪ್ಲ್ಯಾನ್ ರೂಪಿಸಿದೆ.
ಇದನ್ನೂ ಓದಿ: WTC final: ಆಸ್ಟ್ರೇಲಿಯಾ-ಸೌತ್ ಆಫ್ರಿಕಾ ಪಂದ್ಯ ಡ್ರಾ: ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್
ಏಕೆಂದರೆ ಭಾರತ ತಂಡವು ಐಸಿಸಿ ಟೂರ್ನಿ ಗೆದ್ದು ಬರೋಬ್ಬರಿ 9 ವರ್ಷಗಳೇ ಕಳೆದಿವೆ. ಕೊನೆಯ ಬಾರಿ ಟೀಮ್ ಇಂಡಿಯಾ 2013 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಇದಾದ ಬಳಿಕ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಇದೀಗ ಭಾರತದಲ್ಲೇ ಏಕದಿನ ವಿಶ್ವಕಪ್ ನಡೆಯುತ್ತಿದ್ದು, ಹೀಗಾಗಿ ಈ ಸಲ ಕಪ್ ಗೆಲ್ಲಲು ಬಿಸಿಸಿಐ ವಿಶೇಷ ಯೋಜನೆಗಳನ್ನು ರೂಪಿಸುತ್ತಿದೆ. ಅದರ ಮೊದಲ ಭಾಗವೇ 20 ಸದಸ್ಯರ ಬಳಗ. ಈ ಬಳಗದಲ್ಲಿ ಆಯ್ಕೆಯಾಗಿರುವ ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ…
- ರೋಹಿತ್ ಶರ್ಮಾ
- ಶುಭ್ಮನ್ ಗಿಲ್
- ವಿರಾಟ್ ಕೊಹ್ಲಿ
- ಶ್ರೇಯಸ್ ಅಯ್ಯರ್
- ಸೂರ್ಯಕುಮಾರ್ ಯಾದವ್
- ಹಾರ್ದಿಕ್ ಪಾಂಡ್ಯ
- ರವೀಂದ್ರ ಜಡೇಜಾ
- ಅಕ್ಷರ್ ಪಟೇಲ್
- ವಾಷಿಂಗ್ಟನ್ ಸುಂದರ್
- ಇಶಾನ್ ಕಿಶನ್
- ರಿಷಭ್ ಪಂತ್
- ಕೆಎಲ್ ರಾಹುಲ್
- ಸಂಜು ಸ್ಯಾಮ್ಸನ್
- ಮೊಹಮ್ಮದ್ ಸಿರಾಜ್
- ಯುಜ್ವೇಂದ್ರ ಚಹಾಲ್
- ಕುಲ್ದೀಪ್ ಯಾದವ್
- ಜಸ್ಪ್ರೀತ್ ಬುಮ್ರಾ
- ಮೊಹಮ್ಮದ್ ಶಮಿ
- ಅರ್ಷದೀಪ್ ಸಿಂಗ್
- ಉಮ್ರಾನ್ ಮಲಿಕ್.
Published On - 8:30 pm, Mon, 9 January 23