100 ಗ್ರ್ಯಾಂಡ್‌ಮಾಸ್ಟರ್ಸ್​: ಚೆಸ್ ಲೋಕದಲ್ಲಿ ಭಾರತದ ‘ಸೆಂಚುರಿ’

1988ರಲ್ಲಿ ವಿಶ್ವನಾಥನ್ ಆನಂದ್ ಬಿತ್ತಿದ ಆ ಒಂದು ಸಣ್ಣ ಬೀಜ, ಇಂದು 100 ಮಹಾವೃಕ್ಷಗಳ ಬೃಹತ್ ಸಾಮ್ರಾಜ್ಯವಾಗಿ ಜಾಗತಿಕ ಚೆಸ್ ಲೋಕವನ್ನೇ ಆಳುತ್ತಿರುವುದು ಭಾರತೀಯ ಕ್ರೀಡಾ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಹಾಗೂ ಸುವರ್ಣ ಸಾಧನೆಯಾಗಿದೆ! ಹೌದು, ಚೆಸ್ ಬೋರ್ಡ್ ಮೇಲಿನ 64 ಸ್ಕ್ವೇರ್ಸ್ ಜಾಗತಿಕ ಮಟ್ಟದಲ್ಲಿ ಮುಷ್ಟಿಯಲ್ಲಿಟ್ಟುಕೊಂಡಿರುವ ಭಾರತದ ಚೆಸ್ ಚತುರರು ಇದೀಗ ಶತಕದ ಶಿಖರ ಏರಿದ್ದಾರೆ. 

100 ಗ್ರ್ಯಾಂಡ್‌ಮಾಸ್ಟರ್ಸ್​: ಚೆಸ್ ಲೋಕದಲ್ಲಿ ಭಾರತದ ಸೆಂಚುರಿ
Viswanathan Anand
Image Credit source: x.com

Updated on: Nov 10, 2026 | 12:35 PM

ಫಿಲಿಪೈನ್ಸ್‌ನಲ್ಲಿ ನಡೆದ 7ನೇ ಏಸಿಯಾನ್ ಪ್ಲಸ್ ಓಪನ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಮಧ್ಯಪ್ರದೇಶದ 22 ವರ್ಷದ ಯುವ ಆಟಗಾರ ಅನುಜ್ ಶ್ರೀವಾತ್ರಿ ಜಯಭೇರಿ ಬಾರಿಸಿದ್ದಾರೆ. ಈ ಗೆಲುವಿನೊಂದಿಗೆ ಅನುಜ್ ಭಾರತದ 100ನೇ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದರು. ಇದರೊಂದಿಗೆ ರಷ್ಯಾ, ಅಮೆರಿಕ ಮತ್ತು ಜರ್ಮನಿಯ ನಂತರ ವಿಶ್ವದಲ್ಲೇ 100 ಗ್ರ್ಯಾಂಡ್‌ಮಾಸ್ಟರ್‌ಗಳನ್ನು ಹೊಂದಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಏನಿದು ಗ್ರ್ಯಾಂಡ್​ಮಾಸ್ಟರ್?

ಗ್ರ್ಯಾಂಡ್‌ಮಾಸ್ಟರ್ (GM) ಎಂಬುದು ಒಬ್ಬ ಚೆಸ್ ಆಟಗಾರ ಜಾಗತಿಕ ಮಟ್ಟದಲ್ಲಿ ಪಡೆಯಬಹುದಾದ ಅತ್ಯುನ್ನತ ಮತ್ತು ಜೀವಮಾನದ ಗೌರವಾನ್ವಿತ ಪ್ರಶಸ್ತಿಯಾಗಿದೆ. ವಿಶ್ವ ಚೆಸ್ ಸಂಸ್ಥೆಯಾದ ‘ಫಿಡೆ’ (FIDE) ಈ ಬಿರುದನ್ನು ನೀಡುತ್ತದೆ. ಕ್ರಿಕೆಟ್‌ನಲ್ಲಿ ಹೇಗೆ ಅತ್ಯುತ್ತಮ ಸಾಧನೆ ಮಾಡಿದವರನ್ನು ಶ್ರೇಷ್ಠ ಆಟಗಾರರೆಂದು ಪರಿಗಣಿಸುತ್ತಾರೋ, ಹಾಗೆಯೇ ಚೆಸ್ ಲೋಕದ ಅತ್ಯುನ್ನತ ಪದವಿ ಅಥವಾ ಹೆಮ್ಮೆಯ ಶಿಖರವೇ ಈ ಗ್ರ್ಯಾಂಡ್‌ಮಾಸ್ಟರ್ ಪಟ್ಟ. ಒಮ್ಮೆ ಈ ಪ್ರಶಸ್ತಿ ಒಲಿದರೆ, ಅದು ಆಟಗಾರನ ಹೆಸರಿನೊಂದಿಗೆ ಜೀವಿತಾವಧಿಯ ಕೊನೆಯವರೆಗೂ ಉಳಿಯುತ್ತದೆ.

Loading...

ಈ ಅತ್ಯುನ್ನತ ಸ್ಥಾನವನ್ನು ತಲುಪಲು ಆಟಗಾರರು ಕಠಿಣವಾದ ಎರಡು ನಿಯಮಗಳನ್ನು ಪೂರೈಸಬೇಕು. ಮೊದಲನೆಯದಾಗಿ, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ತಮ್ಮ ಜಾಗತಿಕ ರೇಟಿಂಗ್ ಅಂಕಗಳನ್ನು (Elo Rating) ಕನಿಷ್ಠ 2500ಕ್ಕೆ ಹೆಚ್ಚಿಸಿಕೊಳ್ಳಬೇಕು.

ಎರಡನೆಯದಾಗಿ, ಪ್ರಮುಖ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ವಿದೇಶಿ ಗ್ರ್ಯಾಂಡ್‌ಮಾಸ್ಟರ್‌ಗಳ ವಿರುದ್ಧವೇ ಅದ್ಭುತವಾಗಿ ಆಡಿ, ಮೂರು ಬಾರಿ ‘ಜಿಎಂ ನಾರ್ಮ್ಸ್’ (ಸಾಧನೆಯ ಪ್ರಮಾಣಪತ್ರ) ಗಳಿಸಬೇಕು. ಈ ಕಠಿಣ ಹಂತಗಳನ್ನು ದಾಟಿದಾಗ ಮಾತ್ರ ಒಬ್ಬ ಆಟಗಾರ ಅಧಿಕೃತವಾಗಿ ಜಗತ್ತಿನ ಶ್ರೇಷ್ಠ ಗ್ರ್ಯಾಂಡ್‌ಮಾಸ್ಟರ್ ಎನಿಸಿಕೊಳ್ಳುತ್ತಾನೆ.

ಇದೀಗ ಭಾರತವು ಚೆಸ್ ಲೋಕದಲ್ಲಿ 100 ಗ್ರ್ಯಾಂಡ್‌ಮಾಸ್ಟರ್‌ಗಳ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ. ಈ ಮೂಲಕ ಈ ಅಪೂರ್ವ ಮೈಲಿಗಲ್ಲು ತಲುಪಿದ ವಿಶ್ವದ 4ನೇ ದೇಶ ಎಂಬ ಹೆಗ್ಗಳಿಕೆಯನ್ನು ನಮ್ಮ ಚೆಸ್ ಚತುರರು ಭಾರತಕ್ಕೆ ತಂದುಕೊಟ್ಟಿದ್ದಾರೆ.

ಭಾರತದ ಪ್ರಪ್ರಥಮ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಅಂದು ತಾವು ಒಬ್ಬಂಟಿಯಾಗಿ ಆರಂಭಿಸಿದ ಪಯಣ ಇಂದು ಜಾಗತಿಕ ಸೂಪರ್ ಪವರ್ ಆಗಿ ಬೆಳೆದು ನಿಂತಿದೆ. ಇದರ ಹಿನ್ನೋಟ ನೋಡುವುದಾದರೆ…

ಒಂಟಿ ಸೈನಿಕನ ಕಠಿಣ ದಿನಗಳು:

1988ರಲ್ಲಿ ವಿಶ್ವನಾಥನ್ ಆನಂದ್ ಭಾರತದ ಮೊದಲ ಗ್ರ್ಯಾಂಡ್‌ಮಾಸ್ಟರ್ ಆದಾಗ ದೇಶದಲ್ಲಿ ಚೆಸ್ ಆಟಕ್ಕೆ ಇವತ್ತಿನ ಸೌಲಭ್ಯಗಳಾಗಲಿ ಅಥವಾ ಮಾರ್ಗದರ್ಶನವಾಗಲಿ ಇರಲಿಲ್ಲ.

ಇಂಟರ್ನ್ಯಾಷನಲ್ ಮಾಸ್ಟರ್ ಆದ ನಂತರ ಆನಂದ್ ಜಿಎಂ ನಾರ್ಮ್ಸ್ ಪಡೆಯಲು ಸುಮಾರು ಎರಡು ವರ್ಷಗಳ ಕಾಲ ಕಠಿಣ ಪರಿಶ್ರಮ ಪಡಬೇಕಾಯಿತು.

ವಿಶ್ವನಾಥನ್ ಆನಂದ್ ಅವರು ಜಿಎಂ ಆದ ನಂತರ ಮುಂದಿನ ಮೂರು ವರ್ಷಗಳ ಕಾಲ ಭಾರತದಲ್ಲಿ ಬೇರೆ ಯಾರೂ ಈ ಸಾಧನೆ ಮಾಡಿರಲಿಲ್ಲ. ಇದಾದ ಬಳಿಕ 1991ರಲ್ಲಿ ದೀಬ್ಯೇಂದು ಬರುವಾ ಭಾರತದ 2ನೇ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದರು.

1990 ರಲ್ಲಿ ಗ್ರ್ಯಾಂಡ್‌ಮಾಸ್ಟರ್ ಪಟ್ಟದ ಓಪನಿಂಗ್ ನಡೆದರೂ, 2000 ರವರೆಗೆ ಭಾರತದಲ್ಲಿದ್ದ ಒಟ್ಟು ಗ್ರ್ಯಾಂಡ್‌ಮಾಸ್ಟರ್‌ಗಳ ಸಂಖ್ಯೆ ಕೇವಲ 6 ಮಾತ್ರ ಎಂದರೆ ನಂಬಲೇಬೇಕು.

ನಿಧಾನಗತಿಯ ಸ್ಥಿರ ಬೆಳವಣಿಗೆ:

2000ನೇ ಇಸವಿಯಲ್ಲಿ ವಿಶ್ವನಾಥನ್ ಆನಂದ್ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆ ಭಾರತದಲ್ಲಿ ಚೆಸ್ ಕ್ರಾಂತಿ ಆರಂಭವಾಯಿತು. ಇದು ಯುವ ಪೀಳಿಗೆಗೆ ದೊಡ್ಡ ಪ್ರೇರಣೆ ನೀಡಿತು.

ದೇಶಾದ್ಯಂತ ಬೇಸಿಗೆ ಶಿಬಿರಗಳು ಮತ್ತು ಚೆಸ್ ಅಕಾಡೆಮಿಗಳು ತಲೆಎತ್ತಿದವು. ಪರಿಣಾಮವಾಗಿ 2010ರ ವೇಳೆಗೆ ಭಾರತದ ಜಿಎಂ ಸಂಖ್ಯೆ 25 ದಾಟಿತು.

2013ರಲ್ಲಿ ಭಾರತ 32 ಜಿಎಂಗಳನ್ನು ಹೊಂದಿತ್ತು. ಇನ್ನು 2017ರಲ್ಲಿ ದೇಶವು 50ನೇ ಗ್ರ್ಯಾಂಡ್‌ಮಾಸ್ಟರ್ ಮೈಲಿಗಲ್ಲನ್ನು ತಲುಪಿತ್ತು ಎಂಬುದು ವಿಶೇಷ.

ದಾಖಲೆ ಬರೆದ ಯುವ ಚತುರರು:

ಭಾರತೀಯ ಚೆಸ್‌ನ ನಿಜವಾದ ಸುನಾಮಿ ಆರಂಭವಾಗಿದ್ದೇ ಇಲ್ಲಿಂದ. ತಂತ್ರಜ್ಞಾನ, ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ವ್ಯವಸ್ಥಿತ ತರಬೇತಿಯಿಂದಾಗಿ ಯುವ ಆಟಗಾರರು ಅತಿ ವೇಗವಾಗಿ ಜಿಎಂ ಪಟ್ಟ ಅಲಂಕರಿಸಲಾರಂಭಿಸಿದರು.

ಭಾರತಕ್ಕೆ ಮೊದಲ 50 ಗ್ರ್ಯಾಂಡ್‌ಮಾಸ್ಟರ್‌ಗಳನ್ನು ಪಡೆಯಲು ಬರೋಬ್ಬರಿ 29 ವರ್ಷಗಳು ಬೇಕಾಗಿದ್ದವು. ಆದರೆ, ನಂತರದ 50 ಜಿಎಂಗಳು ಕೇವಲ 9 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಮೂಡಿಬಂದರು.

ಕೇವಲ 2026ರ ಒಂದೇ ವರ್ಷದಲ್ಲಿ 10 ಹೊಸ ಗ್ರ್ಯಾಂಡ್‌ಮಾಸ್ಟರ್‌ಗಳು ಮೂಡಿಬಂದರು. ಈ ಯುವ ಅಲೆ ಭಾರತವು 100ರ ಮೈಲಿಗಲ್ಲನ್ನು ವೇಗವಾಗಿ ತಲುಪುವಂತೆ ಮಾಡಿತು.

ಮೊದಲ ಗ್ರ್ಯಾಂಡ್‌ಮಾಸ್ಟರ್‌ ಏನಂತಾರೆ?

“ಇಂದಿನ ಯುವ ಆಟಗಾರರಲ್ಲಿ ಯಾವುದೇ ಭಯವಿಲ್ಲ. ಅವರಲ್ಲಿರುವ ಆಳವಾದ ಜ್ಞಾನ ಮತ್ತು ಅಪ್ರತಿಮ ಆತ್ಮವಿಶ್ವಾಸ ಭಾರತೀಯ ಚೆಸ್‌ನ ನಿಯಮಗಳನ್ನೇ ಬದಲಾಯಿಸಿದೆ,” ಎಂದು ಫಿಡೆ (FIDE) ಉಪಾಧ್ಯಕ್ಷ ಹಾಗೂ ಭಾರತದ ಹೆಮ್ಮೆಯ ಮೊದಲ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ ಅಫ್ಘಾನ್ ಸ್ಪಿನ್ನರ್!

ಹೌದು, 1988ರಲ್ಲಿ ಆನಂದ್ ಬಿತ್ತಿದ ಆ ಒಂದು ಒಂಟಿ ಸಣ್ಣ ಬೀಜ, ಇಂದು 100 ಮಹಾವೃಕ್ಷಗಳ ಬೃಹತ್ ಸಾಮ್ರಾಜ್ಯವಾಗಿ ಜಾಗತಿಕ ಚೆಸ್ ಲೋಕವನ್ನೇ ಆಳುತ್ತಿರುವುದು ಭಾರತೀಯ ಕ್ರೀಡಾ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಹಾಗೂ ಸುವರ್ಣ ಸಾಧನೆಯಾಗಿದೆ!

ಭಾರತದ 100 ಗ್ರ್ಯಾಂಡ್‌ಮಾಸ್ಟರ್‌ಗಳ ಪಟ್ಟಿ (1988 – 2026):

ಸಂಖ್ಯೆ ಗ್ರ್ಯಾಂಡ್‌ಮಾಸ್ಟರ್ ಹೆಸರು ರಾಜ್ಯ
1 ವಿಶ್ವನಾಥನ್ ಆನಂದ್
ತಮಿಳುನಾಡು
2 ದೀಬ್ಯೇಂದು ಬರುವಾ ಪಶ್ಚಿಮ ಬಂಗಾಳ
3 ಪ್ರವೀಣ್ ಥಿಪ್ಸೆ ಮಹಾರಾಷ್ಟ್ರ
4 ಅಭಿಜಿತ್ ಕುಂಟೆ ಮಹಾರಾಷ್ಟ್ರ
5 ಕೃಷ್ಣನ್ ಶಶಿಕಿರಣ್ ತಮಿಳುನಾಡು
6 ಪೆಂಟಾಲ ಹರಿಕೃಷ್ಣ ಆಂಧ್ರಪ್ರದೇಶ
7 ಕೋನೇರು ಹಂಪಿ ಆಂಧ್ರಪ್ರದೇಶ
8 ಸೂರ್ಯ ಶೇಖರ್ ಗಂಗೂಲಿ ಪಶ್ಚಿಮ ಬಂಗಾಳ
9 ಸಂದೀಪನ್ ಚಂದಾ ಪಶ್ಚಿಮ ಬಂಗಾಳ
10 ರಾಮಚಂದ್ರನ್ ರಮೇಶ್ ತಮಿಳುನಾಡು
11 ತೇಜಸ್ ಬಕ್ರೆ ಗುಜರಾತ್
12 ಮಗೇಶ್ ಚಂದ್ರನ್ ಪಂಚನಾಥನ್ ತಮಿಳುನಾಡು
13 ಜೆ. ದೀಪನ್ ಚಕ್ರವರ್ತಿ ತಮಿಳುನಾಡು
14 ನೀಲೋತ್ಪಲ್ ದಾಸ್ ಪಶ್ಚಿಮ ಬಂಗಾಳ
15 ಪರಿಮಾರ್ಜನ್ ನೇಗಿ ದೆಹಲಿ
16 ಗೀತಾ ನಾರಾಯಣನ್ ಗೋಪಾಲ್ ಕೇರಳ
17 ಅಭಿಜೀತ್ ಗುಪ್ತಾ ದೆಹಲಿ
18 ಸುಬ್ರಮಣಿಯನ್ ಅರುಣ್ ಪ್ರಸಾದ್ ತಮಿಳುನಾಡು
19 ಸುಂದರರಾಜನ್ ಕಿದಂಬಿ ತಮಿಳುನಾಡು
20 ಆರ್. ಆರ್. ಲಕ್ಷ್ಮಣ್ ತಮಿಳುನಾಡು
21 ಶ್ರೀರಾಮ್ ಝಾ ದೆಹಲಿ
22 ದೀಪ್ ಸೇನ್‌ಗುಪ್ತಾ ಪಶ್ಚಿಮ ಬಂಗಾಳ
23 ಭಾಸ್ಕರನ್ ಅಧಿಬನ್ ತಮಿಳುನಾಡು
24 ಎಸ್. ಪಿ. ಸೇತುರಾಮನ್ ತಮಿಳುನಾಡು
25 ವಿದಿತ್ ಗುಜರಾತಿ ಮಹಾರಾಷ್ಟ್ರ
26 ಎಂ. ಆರ್. ವೆಂಕಟೇಶ್ ತಮಿಳುನಾಡು
27 ಸಹಜ್ ಗ್ರೋವರ್ ದೆಹಲಿ
28 ಅಕ್ಷತ್ ಖಾಮ್ರಿಯಾ ಮಧ್ಯಪ್ರದೇಶ
29 ಎಂ. ಶ್ಯಾಮ್ ಸುಂದರ್ ತಮಿಳುನಾಡು
30 ಅನುರಾಗ್ ಮ್ಹಮಲ್ ಗೋವಾ
31 ವಿಷ್ಣು ಪ್ರಸನ್ನ ತಮಿಳುನಾಡು
32 ಸ್ವಾಮಿನಾಥನ್ ಸೌಮ್ಯರಂಜನ್ ಒಡಿಶಾ
33 ಅಂಕಿತಾ ರಾಜಪಾರಾ ಗುಜರಾತ್
34 ಮುರಳಿ ಕಾರ್ತಿಕೇಯನ್ ತಮಿಳುನಾಡು
35 ಅಶ್ವಿನ್ ಜಯರಾಮ್ ಕರ್ನಾಟಕ
36 ಸೈತನ್ ದಾಸ್ ಪಶ್ಚಿಮ ಬಂಗಾಳ
37 ದೀಪ್ತಾಯನ್ ಘೋಷ್ ಪಶ್ಚಿಮ ಬಂಗಾಳ
38 ಹರಿಕೃಷ್ಣನ್ ರಘುನಂದನ್ ತಮಿಳುನಾಡು
39 ಎಸ್‌ಎಲ್‌ ನಾರಾಯಣನ್ ಕೇರಳ
40 ಶಾರ್ದೂಲ್ ಗಗಾರೆ ಮಹಾರಾಷ್ಟ್ರ
41 ದಿಪ್ತಾಂಶು ಚಕ್ರವರ್ತಿ ಪಶ್ಚಿಮ ಬಂಗಾಳ
42 ಅಭಿಮನ್ಯು ಪುರಾಣಿಕ್ ಮಹಾರಾಷ್ಟ್ರ
43 ಆರ್ಯನ್ ಚೋಪ್ರಾ ದೆಹಲಿ
44 ಹರ್ಷವರ್ಧನ್ ಜಿ.ಬಿ ತಮಿಳುನಾಡು
45 ಹಿಮನ್ಶು ಶರ್ಮಾ ಹರಿಯಾಣ
46 ಅನುರಾಗ್ ಖೇತಾನ್ ಉತ್ತರ ಪ್ರದೇಶ
47 ಕೆ. ಪ್ರಿಯದರ್ಶನ್ ತಮಿಳುನಾಡು
48 ದ್ರೋಣವಲ್ಲಿ ಹಾರಿಕಾ ಆಂಧ್ರಪ್ರದೇಶ
49 ನಿಹಾಲ್ ಸರಿನ್ ಕೇರಳ
50 ಅರ್ಜುನ್ ಎರಿಗೈಸಿ ತೆಲಂಗಾಣ
51 ಆರ್ ಪ್ರಜ್ಞಾನಂದ ತಮಿಳುನಾಡು
52 ಕಾರ್ತಿಕ್ ವೆಂಕಟರಾಮನ್ ಆಂಧ್ರಪ್ರದೇಶ
53 ಹರ್ಷ ಭರತಕೋಟಿ ಆಂಧ್ರಪ್ರದೇಶ
54 ಪಿ. ಕಾರ್ತಿಕೇಯನ್ ತಮಿಳುನಾಡು
55 ಸ್ಟ್ಯಾನಿ ಜಿ.ಎ. ಕರ್ನಾಟಕ
56 ಎನ್. ಆರ್. ವಿಶಾಖ್ ತಮಿಳುನಾಡು
57 ಡಿ. ಗುಕೇಶ್ ತಮಿಳುನಾಡು
58 ಪಿ. ಇನಿಯನ್ ತಮಿಳುನಾಡು
59 ಸ್ವಯಂಸ್ ಮಿಶ್ರಾ ಒಡಿಶಾ
60 ಗಿರೀಶ್ ಎ. ಕೌಶಿಕ್ ಕರ್ನಾಟಕ
61 ಪ್ರಿಥು ಗುಪ್ತಾ ದೆಹಲಿ
62 ರೌನಕ್ ಸದ್ವಾನಿ ಮಹಾರಾಷ್ಟ್ರ
63 ಜಿ. ಆಕಾಶ್ ತಮಿಳುನಾಡು
64 ಲಿಯೋನ್ ಲ್ಯೂಕ್ ಮೆಂಡೋನ್ಕಾ ಗೋವಾ
65 ಅರ್ಜುನ್ ಕಲ್ಯಾಣ್ ತಮಿಳುನಾಡು
66 ಹರ್ಷಿತ್ ರಾಜಾ ಮಹಾರಾಷ್ಟ್ರ
67 ಮಿತ್ರಾಭ ಗುಹಾ ಪಶ್ಚಿಮ ಬಂಗಾಳ
68 ಸಂಕಲ್ಪ್ ಗುಪ್ತಾ ಮಹಾರಾಷ್ಟ್ರ
69 ಭರತ್ ಸುಬ್ರಮಣ್ಯಂ ತಮಿಳುನಾಡು
70 ರಾಹುಲ್ ಶ್ರೀವಾತ್ಸವ್ ಪಿ. ತೆಲಂಗಾಣ
71 ವಿ ಪ್ರಣವ್ ತಮಿಳುನಾಡು
72 ಪ್ರಣವ್ ಆನಂದ್ ಕರ್ನಾಟಕ
73 ಆದಿತ್ಯ ಮಿತ್ತಲ್ ಮಹಾರಾಷ್ಟ್ರ
74 ಕೌಸ್ತುವ್ ಚಟರ್ಜಿ ಪಶ್ಚಿಮ ಬಂಗಾಳ
75 ಪ್ರಣೇಶ್ ಎಂ ತಮಿಳುನಾಡು
76 ವಿಘ್ನೇಶ್ ಎನ್ ಆರ್ ತಮಿಳುನಾಡು
77 ಸಯಂತನ್ ದಾಸ್ ಪಶ್ಚಿಮ ಬಂಗಾಳ
78 ಅನಿಶ್ ಸರ್ಕಾರ್ ಪಶ್ಚಿಮ ಬಂಗಾಳ
79 ವಿಘ್ನೇಶ್ ಉಪಾಧ್ಯಾಯ ಕರ್ನಾಟಕ
80 ಕೌಸ್ತುಭ್ ಕುಲಕರ್ಣಿ ಮಹಾರಾಷ್ಟ್ರ
81 ಪ್ರಣವ್ ವಿ ವೆಂಕಟೇಶ್ ತಮಿಳುನಾಡು
82 ಸಿದ್ಧಾರ್ಥ್ ಜಗದೀಶ್ ತಮಿಳುನಾಡು
83 ಆದಿತ್ಯ ಸಾಮಂತ್ ಮಹಾರಾಷ್ಟ್ರ
84 ವಿಷ್ಣು ಪ್ರಸಾದ್ ತಮಿಳುನಾಡು
85 ಪಿ ಶ್ಯಾಮ್ ನಿಖಿಲ್ ತಮಿಳುನಾಡು
86 ಆರ್ ವೈಶಾಲಿ ತಮಿಳುನಾಡು
87 ದಿವ್ಯಾ ದೇಶ್‌ಮುಖ್ ಮಹಾರಾಷ್ಟ್ರ
88 ಆರ್ಯನ್ ವರ್ಷ್ನೇಯ ದೆಹಲಿ
89 ಆರವ್ ಡೆಂಗ್ಲಾ ಮಹಾರಾಷ್ಟ್ರ
90 ಮಯಾಂಕ್ ಚಕ್ರವರ್ತಿ ಅಸ್ಸಾಂ
91 ಶ್ರೀಹರಿ ಎಲ್.ಆರ್ ತಮಿಳುನಾಡು
92 ಆನಂದ್ ಪ್ರದೀಪ್ ಕೇರಳ
93 ಉತ್ತಮ್ ಶರ್ಮಾ ರಾಜಸ್ಥಾನ
94 ರೋಹಿತ್ ಕೃಷ್ಣನ್ ತಮಿಳುನಾಡು
95 ಆರ್ಯನ್ ಸಿಂಗ್ ಬಿಹಾರ
96 ಈಥನ್ ವಾಜ್ ಗೋವಾ
97 ಹರ್ಷವರ್ಧನ್ ಜಿ.ಬಿ. ತಮಿಳುನಾಡು
98 ಎಸ್. ಅಶ್ವಥ್ ತಮಿಳುನಾಡು
99 ವಿ. ಎಸ್. ರತ್ನವೇಲ್ ತಮಿಳುನಾಡು
100 ಅನುಜ್ ಶ್ರೀವಾತ್ರಿ ಮಧ್ಯಪ್ರದೇಶ

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us