India vs Australia 2nd Test ಭರ್ಜರಿ ಗೆಲುವಿನೊಂದಿಗೆ 2020ಕ್ಕೆ ವಿದಾಯ ಹೇಳಿದ ಭಾರತ, ಕುತೂಹಲಕಾರಿ ಘಟ್ಟದತ್ತ ಟೆಸ್ಟ್ ಸರಣಿ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ರೆಡನೇ ಟೆಸ್ಟ್ ಸರಣಿಯ ನಾಲ್ಕನೇ ದಿನದ ಪಂದ್ಯ ಇತಿಹಾಸ ಪ್ರಸಿದ್ಧ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿದ್ದು 8 ವಿಕೆಟ್‌ಗಳಿಂದ ಭಾರತ ಜಯ ಸಾಧಿಸಿದೆ.
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಇತಿಹಾಸ ಪ್ರಸಿದ್ಧ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಭಾರತ 8 ವಿಕೆಟ್‌ಗಳಿಂದ ಜಯ ಸಾಧಿಸಿದೆ. 4 ನೇ ದಿನದ ಬಾಕ್ಸಿಂಗ್ ದಿನದ ಟೆಸ್ಟ್ ಪಂದ್ಯವನ್ನು ಗೆಲ್ಲಲು ಭಾರತ 70 ರನ್ ಮೊತ್ತವನ್ನು ಬೆನ್ನಟ್ಟಿದ ಕಾರಣ ಪೂಜಾರಾ ಮತ್ತು ಅಗರ್ವಾಲ್ ವಿಕೆಟ್ ಕಳೆದುಕೊಂಡ ನಂತರ ಗಿಲ್ ಮತ್ತು ರಹಾನೆ ತಮ್ಮ ಹಿಡಿತವನ್ನು ಉಳಿಸಿಕೊಂಡರು.
ಆರು ವಿಕೆಟ್ ಕಳೆದುಕೊಂಡು 133ರನ್ಗಳಿಂದ ದ್ವಿತೀಯ ಇನ್ನಿಂಗ್ಸ್ ಮುಂದುವರೆಸಿದ ಆಸ್ಟ್ರೇಲಿಯಾ, 103.1 ಓವರ್ಗಳಿಗೆ 200 ರನ್ಗಳಿಗೆ ಆಲೌಟ್ ಆಯಿತು. ಟೆಸ್ಟ್ ಗೆಲ್ಲಲು ಮತ್ತು ಸರಣಿಯನ್ನು ನೆಲಸಮ ಮಾಡಲು ಭಾರತಕ್ಕೆ 70 ರನ್ಗಳ ಅಗತ್ಯವಿತ್ತು.
ಕುತೂಹಲಕಾರಿ ಘಟ್ಟದತ್ತ ಟೆಸ್ಟ್ ಸರಣಿ: ಅಡಿಲೇಡ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿತ್ತು. ಆದ್ರೆ ಈಗ ಅಜಿಂಕ್ಯ ರಹಾನೆ ಅವರ ಅಗ್ರೆಸೀವ್ ಆಟ, ಹಾಗೂ ಅಮೋಘ ಶತಕದ ಕ್ಯಾಪ್ಟನ್ಸ್ ನಾಕ್ನಿಂದಾಗಿ ತಂಡಕ್ಕೆ ಸುಲಭದ ಗೆಲುವು ದಕ್ಕಿಸಿಕೊಳ್ಳುವಲ್ಲಿ ಯಶ ಸಾಧಿಸಿದ್ದಾರೆ. ತನ್ಮೂಲಕ 4 ಟೆಸ್ಟ್ ಪಂದ್ಯಗಳ ಸರಣಿಯನ್ನು ಜೀವಂತವಾಗಿರಿಸಿದ್ದಾರೆ. ಇದೀಗ ಸಿಡ್ನಿಯಲ್ಲಿ ಮುಂದಿನ ವರ್ಷ ನಡೆಯುವ ಮೂರನೆಯ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. Over to SCG Jan 7th …
Published On - 9:31 am, Tue, 29 December 20