India vs England: ಎರಡನೇ ಟೆಸ್ಟ್​ನಲ್ಲಿ ಪಿಚ್​ ಹೇಗೆ ವರ್ತಿಸಲಿದೆ.. ಟೆಸ್ಟ್​ನ ನೇರ ಪ್ರಸಾರ ಯಾವ ಚಾನೆಲ್​ನಲ್ಲಿ? ಇಲ್ಲಿದೆ ಮಾಹಿತಿ

India vs England: ಎರಡನೇ ಟೆಸ್ಟ್‌ನ ಹವಾಮಾನ ಪರಿಸ್ಥಿತಿಗಳು ಮೊದಲ ಟೆಸ್ಟ್‌ನಂತೆಯೇ ಇರಲಿದೆ. ಈ ಐದು ದಿನಗಳಲ್ಲಿ ಯಾವುದೇ ಮಳೆಯಾಗುವ ನಿರೀಕ್ಷೆಯಿಲ್ಲ. ಸರಾಸರಿ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಳಿದಂತೆ ಪಿಚ್​ ರಿಪೋರ್ಟ್​ ಹಾಗೂ ಮ್ಯಾಚ್​ ಪ್ರಸಾರದ ಬಗೆಗಿನ ಮಾಹಿತಿ ಇಲ್ಲಿದೆ.

India vs England: ಎರಡನೇ ಟೆಸ್ಟ್​ನಲ್ಲಿ ಪಿಚ್​ ಹೇಗೆ ವರ್ತಿಸಲಿದೆ.. ಟೆಸ್ಟ್​ನ ನೇರ ಪ್ರಸಾರ ಯಾವ ಚಾನೆಲ್​ನಲ್ಲಿ? ಇಲ್ಲಿದೆ ಮಾಹಿತಿ
ಎಂ ಎ ಚಿದಂಬರಂ​ ಕ್ರೀಡಾಂಗಣ
Follow us
ಪೃಥ್ವಿಶಂಕರ
|

Updated on:Feb 12, 2021 | 5:29 PM

ಚೆನ್ನೈ: ಫೆಬ್ರವರಿ 13 ರಿಂದ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಪೇಟಿಎಂ ಟೆಸ್ಟ್ ಸರಣಿಯ 2 ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು  ಪ್ರವಾಸಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ 227 ರನ್​ಗಳ ಭಾರಿ ಸೋಲು ಅನುಭವಿಸಿದ ನಂತರ ಟೀಂ ಇಂಡಿಯಾ ಪುಟಿದೇಳುವ ನಿರೀಕ್ಷೆ ಇದೆ. ಮೊದಲ ಟೆಸ್ಟ್​ನಲ್ಲಿ ಟಾಸ್ ಸೋತ ನಂತರ ಇಂಗ್ಲೆಂಡ್ ವಿರುದ್ದ ಬೌಲಿಂಗ್ ಮಾಡಲು ಭಾರತ ಹೆಣಗಾಡಿತು. ಕುಲ್ದೀಪ್ ಯಾದವ್‌ಗಿಂತ ಶಹಬಾಜ್ ನದೀಮ್ ಅವರ ಆಯ್ಕೆಯನ್ನು ಅನೇಕ ಅಭಿಮಾನಿಗಳು ಮತ್ತು ಕ್ರಿಕೆಟ್​ ಪಂಡಿತರು ಪ್ರಶ್ನಿಸಿದ್ದರು. ಮೊದಲ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ಅವರ ನೀರಸ ಪ್ರದರ್ಶನಕ್ಕೆ ಕೆಲವು ಟೀಕೆಗಳು ಕೇಳಿ ಬಂದಿವೆ. ಹೀಗಾಗಿ ಈ ಇಬ್ಬರು ಆಟಗಾರರು 2ನೇ ಪಂದ್ಯದಲ್ಲಿ ಟ್ರ್ಯಾಕ್​​ಗೆ ಮರಳಲ್ಲಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಅವರ ಪ್ರವರ್ಧಮಾನ ಇನ್ನಿಂಗ್ಸ್‌ ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ತಂಡಕ್ಕೆ ಸಕಾರಾತ್ಮಕ ಅಂಶಗಳಾಗಿವೆ.

ಅಲ್ಲದೆ ಇಂಗ್ಲೆಂಡ್ ತಂಡ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದೆ. ಶ್ರೀಲಂಕಾ ವಿರುದ್ಧದ ಸರಣಿ ಗೆಲುವಿನ ಖುಷಿಯಲ್ಲಿರುವ ಇಂಗ್ಲೆಂಡ್‌ನ ಆತ್ಮ ವಿಶ್ವಾಸ ಹೆಚ್ಚಿದೆ. ನಾಯಕ ಜೋ ರೂಟ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಉತ್ತಮ ಬ್ಯಾಟಿಂಗ್​ ಆಡಿದ್ದಾರೆ. ಜೊತೆಗೆ ಡೊಮಿನಿಕ್ ಬೆಸ್, ಜ್ಯಾಕ್ ಲೀಚ್, ಮತ್ತು ಜೇಮ್ಸ್ ಆಂಡರ್ಸನ್ ಬೌಲಿಂಗ್​ನಲ್ಲಿ ಮಿಂಚು ಹರಿಸಿದ್ದಾರೆ.

ಹವಾಮಾನ ವರದಿ ಎರಡನೇ ಟೆಸ್ಟ್‌ನ ಹವಾಮಾನ ಪರಿಸ್ಥಿತಿಗಳು ಮೊದಲ ಟೆಸ್ಟ್‌ನಂತೆಯೇ ಇರಲಿದೆ. ಈ ಐದು ದಿನಗಳಲ್ಲಿ ಯಾವುದೇ ಮಳೆಯಾಗುವ ನಿರೀಕ್ಷೆಯಿಲ್ಲ. ಸರಾಸರಿ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಪಿಚ್ ವರದಿ ಈ ಪಂದ್ಯವನ್ನು ಮೊದಲ ಟೆಸ್ಟ್‌ ನಡೆದ ಕ್ರೀಡಾಂಗಣದಲ್ಲೇ ಆಡಲಾಗುತ್ತದೆಯಾದರೂ, ಪಿಚ್​ ಅನ್ನು ಪಕ್ಕದಲ್ಲೇ ಬೇರೆಡೆ ನಿರ್ಮಿಸಲಾಗಿದೆ. ಆದರೆ ಈ ಪಿಚ್​ ಸಹ ಮೊದಲಿನ ಪಿಚ್​ನಂತೆಯೇ ವರ್ತಿಸಬಹುದು. ಮೂರನೇ ದಿನದಿಂದ ಈ ಪಿಚ್​ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗಲಿದೆ. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಟಾಸ್​ ಗೆದ್ದ ತಂಡ ದೊಡ್ಡ ಸ್ಕೋರ್ ಮಾಡುವುದು ಪ್ರಮುಖ ಪ್ರಾಮುಖ್ಯತೆಯನ್ನು ಪಡೆಯುತ್ತದೆ.

ಪಂದ್ಯದ ಭವಿಷ್ಯ ತವರಿನ ಪಿಚ್​ಗಳಲ್ಲಿ ಟೀಂ ಇಂಡಿಯಾದ ದಾಖಲೆಯನ್ನು ಗಮನಿಸಿದರೆ, ಟೀಂ ಇಂಡಿಯಾ ತನ್ನ ಗೆಲುವಿನ ಟ್ರ್ಯಾಕ್​ಗೆ ಮತ್ತೆ ಮರಳುವುದರಲ್ಲಿ ಅನುಮಾನವಿಲ್ಲ​. ಜೊತೆಗೆ ಟೀಂ ಇಂಡಿಯಾ ಆಟಗಾರರು 2 ನೇ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಗಳಿವೆ. ಮೊದಲನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಅದ್ಭುತ ಪ್ರದರ್ಶನದ ಹೊರತಾಗಿಯೂ ವಿರಾಟ್ ಕೊಹ್ಲಿ ತಂಡವು ಸರಣಿಯನ್ನು 1-1ರಿಂದ ಸಮಗೊಳಿಸುವ ಸಾಧ್ಯತೆಯಿದೆ.

ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರಗಳು.. ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಫೆ. 13-17ರ ನಡುವೆ ನಡೆಯಲಿದೆ. ಎರಡನೇ ಟೆಸ್ಟ್ ಭಾರತೀಯ ಕಾಲಮಾನ ಬೆಳಿಗ್ಗೆ 9.30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ ಪ್ರಕ್ರಿಯೆ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್​ನಲ್ಲಿ ಪಂದ್ಯವನ್ನು ಲೈವ್​ ಆಗಿ ವೀಕ್ಷಿಸಬಹುದಾಗಿದೆ. ಜೊತೆಗೆ ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯಲ್ಲಿ ಲೈವ್ ಸ್ಟ್ರೀಮಿಂಗ್ ನೋಡಬಹುದಾಗಿದೆ.

BCCI: ಹೊಸ ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲರಾದ 6 ಕ್ರಿಕೆಟಿಗರು.. ಮುಂದಿನ ಸರಣಿಗೆ ಇವರ ಆಯ್ಕೆ ಹೇಗೆ?

Published On - 5:19 pm, Fri, 12 February 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ