IPL 2021 Auction: IPL ಹರಾಜಿನಿಂದ ಶ್ರೀಶಾಂತ್ ಔಟ್​.. 8 ವರ್ಷದಿಂದ ಕಾದೆ, ಮುಂದೆಯೂ ಕಾಯುತ್ತೇನೆಂದ ಕೇರಳ ಎಕ್ಸ್​ಪ್ರೆಸ್​..!

IPL 2021 Auction: 2021 ರ ಐಪಿಎಲ್ ಹರಾಜು ಫೆ.18 ರಂದು ಚೆನ್ನೈನಲ್ಲಿ ನಡೆಯಲಿದೆ. ಎಸ್ ಶ್ರೀಶಾಂತ್ ಅವರನ್ನು ಈ ಹರಾಜು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ ಅವರನ್ನು ಅಂತಿಮ ಪಟ್ಟಿಯಿಂದ ಕೈಬಿಡಲಾಗಿದೆ.

IPL 2021 Auction: IPL ಹರಾಜಿನಿಂದ ಶ್ರೀಶಾಂತ್ ಔಟ್​.. 8 ವರ್ಷದಿಂದ ಕಾದೆ, ಮುಂದೆಯೂ ಕಾಯುತ್ತೇನೆಂದ ಕೇರಳ ಎಕ್ಸ್​ಪ್ರೆಸ್​..!
ಎಸ್ ಶ್ರೀಶಾಂತ್
Follow us
ಪೃಥ್ವಿಶಂಕರ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 12, 2021 | 6:38 PM

ಚೆನ್ನೈ: ಕಳೆದ ವರ್ಷ, ಕೊರೊನಾ ಸೋಂಕಿನ ಕಾರಣದಿಂದಾಗಿ ಯುಎಇಯಲ್ಲಿ ಐಪಿಎಲ್ ನಡೆಯಿತು. ಆದರೆ, ಈ ವರ್ಷ ಐಪಿಎಲ್ ಮತ್ತೆ ದೇಶದಲ್ಲೇ ಆಯೋಜನೆಗೊಳ್ಳಲಿದೆ. 2021ರ ಐಪಿಎಲ್ ಹರಾಜು ಫೆಬ್ರವರಿ 18 ರಂದು ಚೆನ್ನೈನಲ್ಲಿ ನಡೆಯಲಿದೆ. ಎಸ್.ಶ್ರೀಶಾಂತ್ ಅವರನ್ನು ಈ ಹರಾಜು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ ಅವರನ್ನು ಅಂತಿಮ ಪಟ್ಟಿಯಿಂದ ಕೈಬಿಡಲಾಗಿದೆ. ಕೆಲವು ದಿನಗಳ ಹಿಂದೆ ಸೈಯದ್ ಮುಷ್ತಾಕ್ ಆಲಿ ಟ್ರೋಫಿಯಲ್ಲಿ ಭಾಗವಹಿಸುವ ಮೂಲಕ ಶ್ರೀಶಾಂತ್ ಕ್ರಿಕೆಟ್‌ಗೆ ಮರಳಿದ್ದರು. ಜೊತೆಗೆ ಈ ಬಾರಿಯ ಐಪಿಎಲ್ ಆಡಲು ಶ್ರೀಶಾಂತ್​ ಆಶಿಸಿದ್ದರು.

ಈ ವರ್ಷ ಅಂತಿಮ ಪಟ್ಟಿಯಿಂದ ಕೈಬಿಡುವ ನಿರ್ಧಾರದಿಂದ ಶ್ರೀಶಾಂತ್​ಗೆ ಭಾರಿ ಹಿನ್ನಡೆಯಾಗಿದೆ. ಐಪಿಎಲ್‌ನ 14 ನೇ ಆವೃತ್ತಿಗಾಗಿ, ಫೆಬ್ರವರಿ 18 ರಂದು ಚೆನ್ನೈನಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ಬಾಗವಹಿಸಲು 1114 ಆಟಗಾರರು ನೋಂದಾಯಿಸಿಕೊಂಡಿದ್ದರು. ಆದರೆ ಇದರಲ್ಲಿ 292 ಆಟಗಾರರ ಅಂತಿಮ ಪಟ್ಟಿಯನ್ನು ಬಿಸಿಸಿಐ ಸಿದ್ಧಪಡಿಸಿದೆ.

ನಾನು ಹೋರಾಟ ಮುಂದುವರಿಸುತ್ತೇನೆ.. 2013ರ ಐಪಿಎಲ್‌ನಲ್ಲಿ ಮ್ಯಾಚ್​ ಫಿಕ್ಸಿಂಗ್ ಆರೋಪದಿಂದಾಗಿ ಶ್ರೀಶಾಂತ್ ಅವರನ್ನು ಕ್ರಿಕೆಟ್​ನಿಂದ 8 ವರ್ಷಗಳ ಕಾಲ ನಿಷೇಧಿಸಲಾಯಿತು. ಹೀಗಾಗಿ ಎಂಟು ವರ್ಷಗಳ ಕಾಯುವಿಕೆಯ ನಂತರ ಶ್ರೀಶಾಂತ್​ ಮತ್ತೆ ಕ್ರಿಕೆಟ್​ ಆಡಲು ಬಯಸಿದ್ದರು. ಆದರೆ ಐಪಿಎಲ್‌ನಲ್ಲಿ ಭಾಗವಹಿಸಲು ಅವರಿಗೆ ಅವಕಾಶ ನಿರಾಕರಿಸಲಾಗಿದೆ. ಇದರಿಂದ ಆಘಾತಗೊಳಗಾಗಿರುವ ಶ್ರೀಶಾಂತ್ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ತುಣುಕಿಗೆ ದೇವರ ಯೋಜನೆ, ಕ್ರಿಕೆಟ್, ಕುಟುಂಬ, ಪ್ರೀತಿ ಎಂದು ಶೀರ್ಷಿಕೆ ನೀಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಅವರು, ಐಪಿಎಲ್ ಹರಾಜು ಅಂತಿಮ ಪಟ್ಟಿಯಲ್ಲಿ ನನ್ನ ಹೆಸರಿಲ್ಲದಿರುವುದರಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ. ಆದರೆ ನಾನು ಹೋರಾಟ ಮುಂದುವರಿಸುತ್ತೇನೆ. ಜೊತೆಗೆ ಎಂಟು ವರ್ಷಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಇನ್ನೂ ಮುಂದೆ ಸಹ ಕಾಯಲು ನಾನು ಸಿದ್ಧನಿದ್ದೇನೆ. ಅಷ್ಟು ಸುಲಭವಾಗಿ ನಾನು ಬಿಟ್ಟುಕೊಡಲು ಹೋಗುವುದಿಲ್ಲ ಎಂದಿದ್ದಾರೆ.

ಐಪಿಎಲ್‌ನಲ್ಲಿ 292 ಆಟಗಾರರು ಹರಾಜಿನ ಭಾಗವಾಗಲಿದ್ದಾರೆ.. 292 ಕಿರು-ಪಟ್ಟಿ ಆಟಗಾರರಲ್ಲಿ ಒಟ್ಟು 164 ಭಾರತೀಯ ಮತ್ತು 125 ವಿದೇಶಿ ಆಟಗಾರರಿದ್ದಾರೆ. ಜೊತೆಗೆ 3 ಆಟಗಾರರು ನೆರೆ ದೇಶಗಳಿಂದ ಬಂದಿದ್ದಾರೆ. ಐಪಿಎಲ್ 2021 ರ ಹರಾಜು ಫೆಬ್ರವರಿ 18 ರಂದು ಮಧ್ಯಾಹ್ನ 3 ಗಂಟೆಗೆ ಚೆನ್ನೈನಲ್ಲಿ ಪ್ರಾರಂಭವಾಗಲಿದೆ. ಹರಾಜಿನಲ್ಲಿ ಬಿಡ್ಡಿಂಗ್ ಮಾಡಲು ಕಿಂಗ್ಸ್ ಇಲೆವೆನ್ ಪಂಜಾಬ್ ಹೆಚ್ಚಿನ ಹಣವನ್ನು ಹೊಂದಿದೆ. ಅದರ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಹಣವನ್ನು ಉಳಿಸಿಕೊಂಡಿವೆ.

ಇದನ್ನೂ ಓದಿ: ಚೆನ್ನೈನಲ್ಲಿ ಫೆ. 18 ರಂದು IPL ಹರಾಜು.. 292 ಆಟಗಾರರ ಭವಿಷ್ಯ ಪ್ರಾಂಚೈಸಿಗಳ ತೀರ್ಮಾನದಲ್ಲಿದೆ..!

Published On - 6:37 pm, Fri, 12 February 21