Dravid mimics Sachin: ಸವ್ಯಸಾಚಿ ಸಚಿನ್​ ಧ್ವನಿಯನ್ನ ಅನುಕರಣೆ ಮಾಡಿದ ಜಂಟಲ್​ಮೆನ್​ ಗೇಮ್​ನ ಜಂಟಲ್​ ಮ್ಯಾನ್​ ದ್ರಾವಿಡ್​..!

Dravid mimics Sachin: ಇವರ ಸಂವಾದವನ್ನು ನೆನಪಿಸಿಕೊಂಡ ದ್ರಾವಿಡ್​, ಈ ಸಂವಾದದಲ್ಲಿ ಸಚಿನ್​ ಮಾತಾನಾಡಿದ ‘ಮುಖ್ಯ ದಲೆಗಾ’ ಎಂಬ ಪದವನ್ನು, ಸಚಿನ್​ ಧ್ವನಿಯಲ್ಲಿಯೇ ಅನುಕರಿಸಿ ಮಾತಾನಾಡಿದ್ದಾರೆ. ದ್ರಾವಿಡ್​ ಅವರ ಈ ಅನುಕರಣೆಯನ್ನು ಕೇಳಿದ ಜನ ನಗೆಗಡಲಲ್ಲಿ ತೇಲಿದ್ದಾರೆ.

Dravid mimics Sachin: ಸವ್ಯಸಾಚಿ ಸಚಿನ್​ ಧ್ವನಿಯನ್ನ ಅನುಕರಣೆ ಮಾಡಿದ ಜಂಟಲ್​ಮೆನ್​ ಗೇಮ್​ನ ಜಂಟಲ್​ ಮ್ಯಾನ್​ ದ್ರಾವಿಡ್​..!
ಸಚಿನ್​, ದ್ರಾವಿಡ್​
Follow us
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​

Updated on: Feb 13, 2021 | 1:21 PM

ಭಾರತೀಯ ಕ್ರಿಕೆಟ್‌ಗೆ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಸೇರಿ ಇನ್ನೂ ಹಲವರ ಕೊಡುಗೆ ಅಪಾರವಾಗಿದೆ. ಅದರಲ್ಲೂ ದ್ರಾವಿಡ್ ಮತ್ತು ಸಚಿನ್ ಇಬ್ಬರೂ ಹಲವಾರು ವರ್ಷಗಳ ಕಾಲ ಒಟ್ಟಿಗೆ ಟೀಂ ಇಂಡಿಯಾಕ್ಕಾಗಿ ಆಡಿ ಅದೆಷ್ಟೋ ಪಂದ್ಯಗಳನ್ನ ಜೊತೆಯಾಗಿ ಗೆಲ್ಲಿಸಿಕೊಟ್ಟಿದ್ದಾರೆ. ಜೊತೆಯಾಗಿ ಆಡಿದ ಅಷ್ಟೂ ವರ್ಷಗಳಲ್ಲಿ, ಇವರಿಬ್ಬರು ಮೈದಾನದ ಒಳಗೆ ಮತ್ತು ಹೊರಗೆ ಪರಸ್ಪರ ಗೌರವ ನೀಡುತ್ತಾ ತಮ್ಮೊಳಗಿನ ಬಂಧವನ್ನು ಹೆಚ್ಚಿಸಿಕೊಂಡಿದ್ದಾರೆ.ಆದರೆ ಈಗ ದ್ರಾವಿಡ್​ ಅವರು ಸಮಾರಂಭವೊಂದರಲ್ಲಿ ತೆಂಡೂಲ್ಕರ್ ಅವರ ಧ್ವನಿಯನ್ನು ಅನುಕರಣೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ರಾಹುಲ್ ದ್ರಾವಿಡ್ ಒಬ್ಬ ಅಪ್ಪಟ ಕ್ರಿಕೆಟಿಗನಾಗಿದ್ದು, ವಿವಾದಾತ್ಮಕ ಹೇಳಿಕೆ ನೀಡುವುದರಿಂದ ದ್ರಾವಿಡ್​ ತುಂಬಾನೇ ದೂರ. ಆದರೆ ಈಗ ದ್ರಾವಿಡ್​, ಸಚಿನ್ ತೆಂಡೂಲ್ಕರ್ ಅವರ ಧ್ವನಿಯನ್ನು ಸಾರ್ವಜನಿಕವಾಗಿ ಸಮಾರಂಭದಲ್ಲಿ ಅನುಕರಿಸಿದ ಹಳೆಯ ವಿಡಿಯೋ ಯೂಟ್ಯೂಬ್‌ನಲ್ಲಿ (Youtube) ವೈರಲ್ ಆಗಿದೆ.

ಪುಸ್ತಕ ಬಿಡುಗಡೆ ಸಮಾರಂಭ.. ನವೆಂಬರ್ 2012 ರಂದು ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಈ ಘಟನೆ ನಡೆದಿದ್ದು, ಆ ಸಮಾರಂಭದಲ್ಲಿ ದ್ರಾವಿಡ್, ಸಚಿನ್​ ಅವರ ಜೀವನ ಚರಿತ್ರೆಗೆ ಸಂಬಂಧಿಸಿದ “ಸಚಿನ್ ಬಾರ್ನ್ ಟು ಬ್ಯಾಟ್ ದಿ ಜರ್ನಿ ಆಫ್​ ಕ್ರಿಕೆಟ್ಸ್​ ಅಲ್ಟಿಮೇಟ್​ ಸೆಂಚುರಿಯನ್” (Sachin Born to Bat: The journey of cricket’s ultimate centurion) ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು. ಪುಸ್ತಕ ಬಿಡುಗಡೆ ಮಾಡಿ ಮಾತಾನಾಡಿದ ದ್ರಾವಿಡ್​ ಸಚಿನ್​ ಬಗೆಗಿನ ಕುತೂಹಲಕಾರಿ ಮಾಹಿತಿಯನ್ನು ಸಚಿನ್​ ಧ್ವನಿಯನ್ನ ಅನುಕರಿಸಿ ಹಂಚಿಕೊಂಡಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನೆಂದರೆ.. ಸಮಾರಂಭದಲ್ಲಿ ಮಾತಾನಾಡಿದ ದ್ರಾವಿಡ್​, ಸಂಜಯ್ ಮಂಜ್ರೇಕರ್ ಅವರು ವಿವರಿಸಿದ ಘಟನೆಯೊಂದನ್ನು ನೆನಪಿಸಿಕೊಂಡರು. ಆ ಘಟನೆ ಏನೆಂದರೆ.. ದಕ್ಷಿಣ ವಲಯದ ವಿರುದ್ಧ ಟರ್ನಿಂಗ್ ಟ್ರ್ಯಾಕ್‌ನಲ್ಲಿ ಆಡಲು ಪಶ್ಚಿಮ ವಲಯ ತಂಡದಲ್ಲಿ ಗುಣಮಟ್ಟದ ಸ್ಪಿನ್ನರ್‌ಗಳು ಇಲ್ಲ ಎಂದು ಮಂಜ್ರೇಕರ್ ಮತ್ತು ರವಿಶಾಸ್ತ್ರಿ ಇಬ್ಬರು ಮಾತಾನಾಡಿಕೊಳ್ಳುತ್ತಿದ್ದರಂತೆ.

ಮುಖ್ಯ ದಲೆಗಾ.. ಇದನ್ನು ಕೇಳಿಸಿಕೊಂಡು ಅಲ್ಲೇ ಇದ್ದ ಸಚಿನ್​ ಕೂಡಲೇ, ’ಮುಖ್ಯ ದಲೆಗಾ’ (ನಾನು ಬೌಲ್ ಮಾಡುತ್ತೇನೆ) ಎಂದು ಹೇಳಿದರಂತೆ. ಸಚಿನ್​ ಹೇಳಿದನ್ನು ಕೇಳಿದ ರವಿಶಾಸ್ತ್ರಿ ‘ಕ್ಯಾ ದಲೇಗಾ?’ (ನೀವು ಏನು ಬೌಲ್ ಮಾಡುತ್ತೀರಿ?) ಎಂದು ಸಚಿನ್​ಗೆ ಮರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಚಿನ್,​ ‘ಕುಚ್ ಭೀ ಚಾಹಿಯೆ ದಲೆಗಾ, ಆಫ್-ಸ್ಪಿನ್ ಭಿ ಯಾ ಲೆಗ್-ಸ್ಪಿನ್ ಭಿ’ (ಏನು ಬೇಕಾದರೂ ನಾನು ಬೌಲ್ ಮಾಡುತ್ತೇನೆ, ಆಫ್-ಸ್ಪಿನ್ ಅಥವಾ ಲೆಗ್-ಸ್ಪಿನ್) ಎಂದರಂತೆ.

ಇವರ ಸಂವಾದವನ್ನು ನೆನಪಿಸಿಕೊಂಡ ದ್ರಾವಿಡ್​, ಈ ಸಂವಾದದಲ್ಲಿ ಸಚಿನ್​ ಮಾತಾನಾಡಿದ ‘ಮುಖ್ಯ ದಲೆಗಾ’ ಎಂಬ ಪದವನ್ನು, ಸಚಿನ್​ ಧ್ವನಿಯಲ್ಲಿಯೇ ಅನುಕರಿಸಿ ಮಾತಾನಾಡಿದ್ದಾರೆ. ದ್ರಾವಿಡ್​ ಅವರ ಈ ಅನುಕರಣೆಯನ್ನು ಕೇಳಿದ ಜನ ನಗೆಗಡಲಲ್ಲಿ ತೇಲಿದ್ದಾರೆ. ಅಂದು ನಡೆದ ಈ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

ದ್ರಾವಿಡ್​ ಮಾತಿನ ನಂತರ ಮಾತಾನಾಡಿದ ಕ್ರಿಕೆಟ್ ತಜ್ಞ/ ನಿರೂಪಕ ಹರ್ಷ ಭೋಗ್ಲೆ ಅವರು ಭಾರತದ ಮಾಜಿ ನಾಯಕ ದ್ರಾವಿಡ್​ ಅವರ ಈ ಅನುಕರಣೆ ಖಂಡಿತವಾಗಿಯೂ ಯೂಟ್ಯೂಬ್‌ನಲ್ಲಿ ಭಾರಿ ಹಿಟ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇಲ್ಲಿಯವರೆಗೆ, ಈ ವೀಡಿಯೊವನ್ನು 50 ಲಕ್ಷಕ್ಕೂ ಹೆಚ್ಚು ವೀಕ್ಷಕರು ವೀಕ್ಷಿಸಿದ್ದಾರೆ.

ತೆಂಡೂಲ್ಕರ್ ಮತ್ತು ದ್ರಾವಿಡ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಸಚಿನ್​ ಅವರು ಕ್ರಿಕೆಟ್​ನ ಎಲ್ಲಾ ಆವೃತ್ತಿಯಲ್ಲಿ ಒಟ್ಟು 34,000 ರನ್​ ಬಾರಿಸಿದ್ದಾರೆ. ಇದರಲ್ಲಿ ಬರೋಬ್ಬರಿ 100 ಶತಕಗಳು ಸೇರಿವೆ. ಮತ್ತೊಂದೆಡೆ, ದ್ರಾವಿಡ್ ಕ್ರಮವಾಗಿ 13,288 ಮತ್ತು 10,889 ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ರನ್ ಗಳಿಸಿದ್ದಾರೆ. ಪ್ರಸ್ತುತ, ದ್ರಾವಿಡ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥರಾಗಿದ್ದರೆ, ಸಚಿನ್ ಮುಂಬೈ ಇಂಡಿಯನ್ಸ್ (ಎಂಐ) ತಂಡದ ಮಾರ್ಗದರ್ಶಕರಾಗಿದ್ದಾರೆ.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ