AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: 2ನೇ ಏಕದಿನ ಪಂದ್ಯಕ್ಕೆ ಇದೆಯೇ ಮಳೆಯ ಕಾಟ?: ಹವಾಮಾನ ವರದಿ ಏನು ಹೇಳುತ್ತೆ?

ಭಾರತ - ಶ್ರೀಲಂಕಾ ಪಂದ್ಯಕ್ಕೆ ಮಳೆಯ ಕಾಟವಿದೆಯೇ ಎಂಬುದನ್ನು ನೋಡುವುದಾದರೆ, ದಿನದ ಒಟ್ಟಾರೆ ಮುನ್ಸೂಚನೆಯ ಹವಾಮಾನವು ಭಾಗಶಃ ಬಿಸಿಲಿನಿಂದ ಕೂಡಿರುತ್ತದೆ.

IND vs SL: 2ನೇ ಏಕದಿನ ಪಂದ್ಯಕ್ಕೆ ಇದೆಯೇ ಮಳೆಯ ಕಾಟ?: ಹವಾಮಾನ ವರದಿ ಏನು ಹೇಳುತ್ತೆ?
IND vs SL
TV9 Web
| Updated By: Vinay Bhat|

Updated on: Jul 20, 2021 | 11:49 AM

Share

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದು ಬೀಗಿರುವ ಭಾರತದ ಯುವ ಪಡೆ ಮತ್ತೊಂದು ಗೆಲುವಿನ ತವಕದಲ್ಲಿದೆ. ಇಂದು ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಸರಣಿ ವಶಪಡಿಸಿಕೊಳ್ಳಲು ಹೊಂಚುಹಾಕಿದೆ. ಯಂಗ್‌ ಇಂಡಿಯಾ ಎಂದೇ ಗುರುತಿಸಲ್ಪಡುವ ದ್ರಾವಿಡ್‌ ಮಾರ್ಗದರ್ಶನದ ಧವನ್‌ ಪಡೆ ಭರ್ಜರಿ ಫಾರ್ಮ್​ನಲ್ಲಿದ್ದರೆ, ಇತ್ತ ಆತಿಥೇಯರ ಮೇಲೆ ಒತ್ತಡ ತೀವ್ರಗೊಂಡಿದೆ.

ಮೊದಲ ಏಕದಿನ ಪಂದ್ಯದಲ್ಲಿ ಯುವ ಆಟಗಾರರಾದ ಪೃಥ್ವಿ ಶಾ, ಪದಾರ್ಪಣೆ ಪಂದ್ಯವಾಡಿದ ಇಶಾನ್ ಕಿಶನ್ ಹಾಗೂ ಸೂರ್ಯ ಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದರು. ಮತ್ತೊಂದು ತುದಿಯಲ್ಲಿ ನಾಯಕ ಶಿಖರ್ ಧವನ್ ತಾಳ್ಮೆಯ ಆಟವಾಡುತ್ತಾ ಗೆಲುವಿನ ದಡ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್​ಗಳು ಪರಿಣಮಕಾರಿಯಾಗಿ ಗೋಚರಿಸಿದದ್ದರು. ಹೀಗಾಗಿ ತಂಡದಲ್ಲಿ ಬದಲಾವಣೆ ಅನುಮಾನ ಎನ್ನಬಹುದು.

ಕೊಲಂಬೋದ ಆರ್‌. ಪ್ರೇಮದಾಸ ಸ್ಟೇಡಿಯಂ ಬ್ಯಾಟಿಂಗಿಗೆ ಹೆಸರುವಾಸಿ. ತಿರುವು ಪಡೆಯುವುದರಿಂದ ಸ್ಪಿನ್‌ ಸ್ನೇಹಿಯೂ ಹೌದು. ಈ ಎರಡೂ ಅಂಶಗಳನ್ನು ಭಾರತ ಮೊದಲ ಪಂದ್ಯದಲ್ಲಿ ಸಾಬೀತುಪಡಿಸಿದೆ. ಹೀಗಾಗಿ ಹೋಮ್ ಗ್ರೌಂಡ್ ಆಗಿದ್ದರೂ ಸಿಂಹಳೀಯರಿಗೆ ಅಪಾಯ ಕಟ್ಟಿಟ್ಟಬುತ್ತಿ.

ಮಳೆಯ ಕಾಟವಿದೆಯೇ:

ಇನ್ನೂ ಇಂದಿನ ಪಂದ್ಯಕ್ಕೆ ಮಳೆಯ ಕಾಟವಿದೆಯೇ ಎಂಬುದನ್ನು ನೋಡುವುದಾದರೆ, ದಿನದ ಒಟ್ಟಾರೆ ಮುನ್ಸೂಚನೆಯ ಹವಾಮಾನವು ಭಾಗಶಃ ಬಿಸಿಲಿನಿಂದ ಕೂಡಿರುತ್ತದೆ. ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ. ಆದರೆ, ಪಂದ್ಯಕ್ಕೆ ಮಳೆ ಅಡ್ಡಿಸುವ ಸಾಧ್ಯತೆ ಇಲ್ಲ ಎಂದು ಹವಮಾನ ಇಲಾಖೆ ತಿಳಿಸಿದೆ.

ಮೊದಲ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಗೆದ್ದು ವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಇಂದಿನ ಪಂದ್ಯವನ್ನೂ ಜಯಿಸಿ ಸರಣಿ ವಶಪಡಿಸಿಕೊಳ್ಳುವ ಪ್ಲಾನ್​ನಲ್ಲಿದೆ. ಇತ್ತ ಸಿಂಹಳೀಯರಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆದ್ದರೆ ಮಾತ್ರ ಸರಣಿ ಆಸೆ ಜೀವಂತವಾಗಿರಲಿದೆ. ಹೀಗಾಗಿ ಪ್ರೇಮದಾಸ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯವಾಗುವ ಎಲ್ಲಾ ಲಕ್ಷಣಗಳಿವೆ.

ಈ ಪಂದ್ಯ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ ಮಧ್ಯಾಹ್ನ 2.30 ಕ್ಕೆ ನಡೆಯಲಿದೆ. ಸೋನಿ ಸಿಕ್ಸ್, ಸೋನಿ ಸಿಕ್ಸ್ ಎಚ್ಡಿ, ಸೋನಿ ಟೆನ್ 3, ಸೋನಿ ಟೆನ್ 3 ಎಚ್ಡಿ ಯಲ್ಲಿ ಪಂದ್ಯವನ್ನು ಲೈವ್ ವೀಕ್ಷಿಸಬಹುದು.

ತಂಡಗಳು:

ಭಾರತ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್-ಕೀಪರ್), ಕೆ ಗೌತಮ್, ಕ್ರುನಾಲ್ ಪಾಂಡ್ಯ, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ (ಉಪನಾಯಕ), ದೀಪಕ್ ಚಹರ್, ಕುಲದೀಪ್ ಯಾದವ್, ನವದೀಪ್ ಸೈನಿ, ಚೇತನ್ ಸಕರಿಯಾ, ಯಜುವೇಂದ್ರ ಚಹಾಲ್.

ಶ್ರೀಲಂಕಾ: ದಾಸುನ್ ಶಾನಕಾ (ನಾಯಕ), ಧನಂಜಯ ಡಿ ಸಿಲ್ವಾ (ಉಪನಾಯಕ), ಅವಿಷ್ಕಾ ಫರ್ನಾಂಡೊ, ಭನುಕಾ ರಾಜಪಕ್ಸೆ, ಪಾತುಮ್ ನಿಸ್ಸಂಕ, ಚರಿತ್ ಅಸಲಂಕಾ, ವನಿಂದು ಹಸರಂಗ, ಆಶೆನ್ ಬಂಡರಾ, ಮಿನೋಡ್ ಭನುಕಾ, ಲಹಿರು ಉದಾರ, ಚಮೇಮರಾಮಾನಾ ಲಕ್ಷನ್ ಸಂದಕನ್, ಅಕಿಲಾ ಧನಂಜಯ, ಶಿರನ್ ಫರ್ನಾಂಡೊ, ಧನಂಜಯ ಲಕ್ಷನ್, ಇಶಾನ್ ಜಯರತ್ನ, ಪ್ರವೀಣ್ ಜಯವಿಕ್ರೆಮಾ, ಅಸಿಥಾ ಫರ್ನಾಂಡೊ, ಕಸುನ್ ರಾಜಿತಾ, ಲಹೀರು ಕುಮಾರ, ಇಸುರು ಉದಾನ.

IND vs SL: ಯುಜ್ವೇಂದ್ರ ಚಹಲ್ ಮೇಲೆ ಎಲ್ಲರ ಕಣ್ಣು: ಹೊಸ ದಾಖಲೆ ಬರೆಯುವತ್ತ ಟೀಮ್ ಇಂಡಿಯಾ ಸ್ಪಿನ್ನರ್

ಟ್ವೀಟ್​ಗಳು ಸೂಕ್ತವಲ್ಲ ಮತ್ತು ದಾರಿತಪ್ಪಿಸುತ್ತವೆ: ಬೋಪಣ್ಣ, ಸಾನಿಯಾ ಮಿರ್ಝಾ ಟ್ವೀಟ್​ಗೆ ಎಐಟಿಎ ಖಂಡನೆ

(India vs Sri Lanka 2nd ODI Colombo weather today There is any rain affect play today)

‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್