AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಭಾರತ- ಶ್ರೀಲಂಕಾ ಆರಂಭಕ್ಕೂ ಮುನ್ನ ಲಂಕಾ ಪಾಳಯಕ್ಕೆ ಕೊರೊನಾ ಕಾಟ! ಬ್ಯಾಟಿಂಗ್ ಕೋಚ್​ಗೆ ಕೊರೊನಾ ಸೋಂಕು

IND vs SL: ಭಾರತ ಮತ್ತು ಶ್ರೀಲಂಕಾ ನಡುವಿನ ಸರಣಿಗೂ ಮೊದಲು ಕೆಟ್ಟ ಸುದ್ದಿ ಹೊರಬಿದ್ದಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಕೊರೊನಾ ಪಾಸಿಟಿವ್ ಎಂದು ಕಂಡುಬಂದಿದೆ.

IND vs SL: ಭಾರತ- ಶ್ರೀಲಂಕಾ ಆರಂಭಕ್ಕೂ ಮುನ್ನ ಲಂಕಾ ಪಾಳಯಕ್ಕೆ ಕೊರೊನಾ ಕಾಟ! ಬ್ಯಾಟಿಂಗ್ ಕೋಚ್​ಗೆ ಕೊರೊನಾ ಸೋಂಕು
ಶ್ರೀಲಂಕಾ ತಂಡ
ಪೃಥ್ವಿಶಂಕರ
| Edited By: |

Updated on: Jul 09, 2021 | 8:21 AM

Share

ಭಾರತ ಮತ್ತು ಶ್ರೀಲಂಕಾ ನಡುವಿನ ಸರಣಿಗೂ ಮೊದಲು ಕೆಟ್ಟ ಸುದ್ದಿ ಹೊರಬಿದ್ದಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಕೊರೊನಾ ಪಾಸಿಟಿವ್ ಎಂದು ಕಂಡುಬಂದಿದೆ. ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದ ಗ್ರಾಂಟ್ ಫ್ಲವರ್‌ನ ಮಾದರಿ ಪಾಸಿಟಿವ್ ಬಂದಿದೆ. ಭಾರತದೊಂದಿಗಿನ ಸರಣಿಗೆ ಕೇವಲ ಒಂದು ವಾರ ಮಾತ್ರ ಉಳಿದಿರುವ ಸಮಯದಲ್ಲಿ ಶ್ರೀಲಂಕಾದ ಬ್ಯಾಟಿಂಗ್ ಕೋಚ್ ಕೊರೊನಾಗೆ ತುತ್ತಾಗಿರುವುದು ಆತಂಕಕಾರಿ ಸುದ್ದಿಯಾಗಿದೆ. ಜುಲೈ 13 ರಿಂದ ಭಾರತ ಮತ್ತು ಶ್ರೀಲಂಕಾ ನಡುವೆ ಮೂರು ಏಕದಿನ ಮತ್ತು ಮೂರು ಟಿ 20 ಪಂದ್ಯಗಳ ಸರಣಿ ನಡೆಯಲಿದೆ. ಗ್ರಾಂಟ್ ಫ್ಲವರ್ ಅನ್ನು ತಂಡದ ಉಳಿದ ಆಟಗಾರರಿಂದ ಬೇರ್ಪಡಿಸಲಾಗಿದೆ. ಇಂಗ್ಲೆಂಡ್‌ನಿಂದ ಹಿಂದಿರುಗಿದ ನಂತರ, ಶ್ರೀಲಂಕಾ ತಂಡದ ಎಲ್ಲಾ ಆಟಗಾರರು ಕಟ್ಟುನಿಟ್ಟಿನ ಸಂಪರ್ಕತಡೆಯಲ್ಲಿದ್ದಾರೆ. ಇಂಗ್ಲೆಂಡ್ ತಂಡದ ಏಳು ಸದಸ್ಯರಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಶ್ರೀಲಂಕಾ ಕ್ರಿಕೆಟ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಶ್ರೀಲಂಕಾದ ರಾಷ್ಟ್ರೀಯ ತಂಡದ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇಂದು ಅವರ ಪಿಸಿಆರ್ ಪರೀಕ್ಷೆಯನ್ನು ಮಾಡಲಾಯಿತು, ಅದರಲ್ಲಿ ಕೊರೊನಾ ತಗುಲಿರುವುದು ಸ್ಪಷ್ಟವಾಗಿದೆ. ಅವರಲ್ಲಿ ಈ ರೋಗದ ಸೌಮ್ಯ ಲಕ್ಷಣಗಳು ಕಂಡುಬಂದಿವೆ. ಫಲಿತಾಂಶ ಬಂದ ನಂತರ, ಅವರನ್ನು ತಂಡದ ಉಳಿದ ಸದಸ್ಯರಿಂದ ತಕ್ಷಣವೇ ಪ್ರತ್ಯೇಕಿಸಲಾಯಿತು. ಉಳಿದ ಸದಸ್ಯರು ಇನ್ನೂ ಸಂಪರ್ಕತಡೆಯಲ್ಲಿದ್ದಾರೆ. ಗ್ರಾಂಟ್ ಫ್ಲವರ್ ವೈದ್ಯಕೀಯ ಪ್ರೋಟೋಕಾಲ್ ಅಡಿಯಲ್ಲಿದ್ದಾರೆ. ಎಲ್ಲಾ ಇತರ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಯನ್ನು ಸಹ ಪರೀಕ್ಷಿಸಲಾಗಿದೆ.

ಶ್ರೀಲಂಕಾ ತಂಡದ ಅದೃಷ್ಟ ಸರಿಯಾಗಿ ಕೈಕೊಟ್ಟಿದೆ ಗ್ರಾಂಟ್ ಫ್ಲವರ್ ಮಾಜಿ ಜಿಂಬಾಬ್ವೆಯ ಕ್ರಿಕೆಟಿಗ. ಅವರು ಶ್ರೀಲಂಕಾ ತಂಡದೊಂದಿಗೆ ದೀರ್ಘಕಾದಿಂದ ಇದ್ದಾರೆ. ಶ್ರೀಲಂಕಾ ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದಿಂದ ಮರಳಿದೆ. ಅಲ್ಲಿ ಅವರ ಸಾಧನೆ ತುಂಬಾ ಕಳಪೆಯಾಗಿತ್ತು. ಟಿ 20 ಯಲ್ಲಿ 3-0 ಮತ್ತು ಏಕದಿನ ಪಂದ್ಯಗಳಲ್ಲಿ 2-0 ಅಂತರದಿಂದ ಸೋಲಬೇಕಾಯಿತು. ಈ ಪ್ರವಾಸದಲ್ಲಿ, ತಂಡದ ಮೂವರು ಹಿರಿಯ ಆಟಗಾರರು ಬಯೋ ಬಬಲ್ ಮುರಿಯುವ ಮೂಲಕ ಬೀದಿಗಳಲ್ಲಿ ತಿರುಗಾಡುತ್ತಿರುವುದು ಕಂಡುಬಂದಿತು. ಈ ಆಟಗಾರರನ್ನು ನಿರೋಷನ್ ಡಿಕ್ವೆಲ್ಲಾ, ಧನಂಜಯ್ ಡಿ ಸಿಲ್ವಾ ಮತ್ತು ಕುಸಲ್ ಮೆಂಡಿಸ್ ಎಂದು ಗುರುತಿಸಲಾಗಿದೆ. ವಿಷಯ ಬೆಳಕಿಗೆ ಬಂದಾಗ, ಮೂವರನ್ನೂ ಪ್ರವಾಸದ ಮಧ್ಯದಿಂದ ಶ್ರೀಲಂಕಾಕ್ಕೆ ಕಳುಹಿಸಲಾಯಿತು ಮತ್ತು ತನಿಖಾ ಸಮಿತಿಯನ್ನು ರಚಿಸಲಾಯಿತು. ಈ ಮೂವರನ್ನು ಭಾರತ ವಿರುದ್ಧದ ಸರಣಿಯಿಂದ ಹೊರಗಿಡಲಾಗಿದೆ. ಮೂವರನ್ನೂ ಒಂದು ವರ್ಷ ನಿಷೇಧಿಸಲಾಗುವುದು ಎಂದು ಹೇಳಲಾಗುತ್ತಿದೆ.

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ