Father’s Day 2021: ತಂದೆ ನೆನೆದು ಭಾವುಕರಾದ ಸಚಿನ್; ವಿಶೇಷ ದಿನದಂದು ಕ್ರಿಕೆಟ್ ದೇವರು ಹಂಚಿಕೊಂಡ್ರು ಭಾವನಾತ್ಮಕ ವಿಡಿಯೋ

Father's Day 2021: ಅದು 1999 ರ ವಿಶ್ವಕಪ್‌ನಲ್ಲಿ ಕೀನ್ಯಾ ವಿರುದ್ಧ ಸಚಿನ್ 140 ರನ್ ಗಳಿಸಿದರು. ತಂದೆ ತೀರಿಕೊಂಡ ಮೂರು ದಿನಗಳ ನಂತರ ಅವರು ಈ ಅದ್ಭುತ ಇನ್ನಿಂಗ್ಸ್ ಆಡಿದರು.

Father's Day 2021: ತಂದೆ ನೆನೆದು ಭಾವುಕರಾದ ಸಚಿನ್; ವಿಶೇಷ ದಿನದಂದು ಕ್ರಿಕೆಟ್ ದೇವರು ಹಂಚಿಕೊಂಡ್ರು ಭಾವನಾತ್ಮಕ ವಿಡಿಯೋ
ತಂದೆ ನೆನೆದು ಭಾವುಕರಾದ ಸಚಿನ್
Follow us
ಪೃಥ್ವಿಶಂಕರ
|

Updated on: Jun 20, 2021 | 3:14 PM

ಬ್ಯಾಟಿಂಗ್ ಪರಾಕ್ರಮದಿಂದ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಸಚಿನ್ ರಮೇಶ್ ತೆಂಡೂಲ್ಕರ್ ಅವರ ಹೆಸರು ಕ್ರಿಕೆಟ್​ ದುನಿಯಾದಲ್ಲಿ ಅಚ್ಚಳಿಯದೆ ಉಳಿದಿದೆ. ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿರುವ ಸಚಿನ್ ಅವರು ಇಂದು ತಂದೆಯ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸುವ ವಿಶೇಷ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಸಚಿನ್ ತನ್ನ ತಂದೆ ರಮೇಶ್ ತೆಂಡೂಲ್ಕರ್ ಅವರ ನೆನಪಿಗಾಗಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ತಮ್ಮ ತಂದೆಯೊಂದಿಗಿನ ಘಟನೆಯನ್ನು ಹಂಚಿಕೊಂಡಿದ್ದಾರೆ.

ಸಚಿನ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಅವರ ತಂದೆ ವಿಶ್ರಾಂತಿ ಪಡೆಯಲು ಕೂರುತ್ತಿದ್ದ ತೂಗುಯ್ಯಾಲೆ ಮಾದರಿಯ ಚೇರ್​ ಬಗ್ಗೆ ಭಾವನಾತ್ಮಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಸಚಿನ್ ಇದನ್ನು ಹೇಳುತ್ತಿರುವಾಗ, ಅವರು ಕೂಡ ಭಾವುಕರಾಗುವುದನ್ನು ಕಾಣಬಹುದು.

ತಂದೆ ಸಾವಿನ ದುಃಖದಲ್ಲೂ ಕ್ರಿಕೆಟ್ ಆಡಿದ ಸಚಿನ್ ಸಚಿನ್ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಪ್ರಶಂಸಿಸಲ್ಪಟ್ಟಿದ್ದಾರೆ. ಆದರೆ ಸಚಿನ್ ಈ ಪದವಿಗಾಗಿ ಶ್ರಮಿಸಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಅನುಭವಿ ಬೌಲರ್‌ನನ್ನು ಎದುರಿಸಿದ ಸಚಿನ್, ಪ್ರತಿಯೊಂದು ಪರಿಸ್ಥಿತಿಯಲ್ಲೂ ಭಾರತ ಪರ ಮಿಂಚಿದ್ದಾರೆ. ಅಂತಹ ಸ್ಮರಣಿಯ ಆಟವನ್ನು ಅನೇಕರು ಮರೆತಿರಬಹುದು. ಅದು 1999 ರ ವಿಶ್ವಕಪ್‌ನಲ್ಲಿ ಕೀನ್ಯಾ ವಿರುದ್ಧ ಸಚಿನ್ 140 ರನ್ ಗಳಿಸಿದರು. ತಂದೆ ತೀರಿಕೊಂಡ ಮೂರು ದಿನಗಳ ನಂತರ ಅವರು ಈ ಅದ್ಭುತ ಇನ್ನಿಂಗ್ಸ್ ಆಡಿದರು. ಸಚಿನ್ ಸಂದರ್ಶನವೊಂದರಲ್ಲಿ ಈ ಘಟನೆಯನ್ನು ನೆನೆದು ಭಾವುಕರಾಗಿದ್ದರು. ತಂದೆಯ ಹಠಾತ್ ಸಾವಿನಿಂದ ಸಚಿನ್ ವಿಶ್ವಕಪ್‌ನಿಂದ ಹಿಂದೆ ಸರಿಯಲಿದ್ದಾರೆ ಎಂಬ ಊಹಪೋಹಗಳು ಎದ್ದಿದ್ದವು. ಆದರೆ ವಿಶ್ವಕಪ್‌ನಲ್ಲಿ ಆಡುವುದನ್ನು ಮುಂದುವರೆಸಲು ತಾಯಿ ಒತ್ತಾಯಿಸಿದ ನಂತರ ಸಚಿನ್ ಮೈದಾನಕ್ಕೆ ಇಳಿದಿದ್ದರು.