India’s T20 World Cup Squad: ಟಿ20 ವಿಶ್ವಕಪ್ಗೆ ಭಾರತ ತಂಡ ಪ್ರಕಟ
T20 World Cup Team India: ತಂಡದಲ್ಲಿ ಆರಂಭಿಕರಾಗಿ ಕೆಎಲ್ ರಾಹುಲ್, ರೋಹಿತ್ ಶರ್ಮಾ ಇದ್ದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳಾಗಿ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಸ್ಥಾನ ಪಡೆದಿದ್ದಾರೆ.

India’s T20 World Cup Squad: ಐಸಿಸಿ ಟಿ 20 ವಿಶ್ವಕಪ್ಗಾಗಿ (India’s T20 World Cup Squad) ಟೀಮ್ ಇಂಡಿಯಾವನ್ನು (Team India) ಪ್ರಕಟಿಸಲಾಗಿದೆ. ವಿರಾಟ್ ಕೊಹ್ಲಿ (Virat kohli) ಮುನ್ನಡೆಸಲಿರುವ ಈ ಬಳಗದಲ್ಲಿ ಒಟ್ಟು 18 ಮಂದಿ ಸ್ಥಾನ ಪಡೆದಿದ್ದಾರೆ. ಅದರಲ್ಲಿ 15 ಮಂದಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದು, ಉಳಿದ 3 ಆಟಗಾರರು ಮೀಸಲು ಆಟಗಾರರ ಪಟ್ಟಿಯಲ್ಲಿರಲಿದ್ದಾರೆ. ಕಳೆದ ಒಂದು ವರ್ಷದಿಂದ ಟಿ20 ತಂಡದಿಂದ ಹೊರಗುಳಿದಿದ್ದ ರವಿಚಂದ್ರನ್ ಅಶ್ವಿನ್ಗೆ ಸ್ಥಾನ ನೀಡಲಾಗಿದ್ದು, ಹಾಗೆಯೇ ಯುಜುವೇಂದ್ರ ಚಹಲ್ ಅವರನ್ನು ಕೈ ಬಿಡಲಾಗಿದೆ. ಇನ್ನು ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.
ಅದರಂತೆ ತಂಡದಲ್ಲಿ ಆರಂಭಿಕರಾಗಿ ಕೆಎಲ್ ರಾಹುಲ್, ರೋಹಿತ್ ಶರ್ಮಾ ಇದ್ದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳಾಗಿ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಸ್ಥಾನ ಪಡೆದಿದ್ದಾರೆ. ಆಲ್ರೌಂಡರ್ಗಳಾಗಿ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯಗೆ ಅವಕಾಶ ನೀಡಲಾಗಿದೆ. ಇಬ್ಬರು ವಿಕೆಟ್ ಕೀಪರ್ಗಳನ್ನು ಆಯ್ಕೆ ಮಾಡಲಾಗಿದ್ದು, ಅದರಂತೆ ರಿಷಭ್ ಪಂತ್ ಹಾಗೂ ಇಶಾನ್ ಕಿಶನ್ ಸ್ಥಾನ ಪಡೆದಿದ್ದಾರೆ. ಇನ್ನು ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿಗೆ ಸ್ಥಾನ ನೀಡಲಾಗಿದೆ.
ಸ್ಪಿನ್ನರ್ಗಳಾಗಿ ನಾಲ್ವರನ್ನು ಆಯ್ಕೆ ಮಾಡಲಾಗಿದ್ದು, ಅದರಂತೆ ಅಶ್ವಿನ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಹಾಗೂ ರಾಹುಲ್ ಚಹರ್ ಸ್ಥಾನ ಪಡೆದಿದ್ದಾರೆ. ಇವರಲ್ಲದೆ ಮೀಸಲು ಆಟಗಾರರಾಗಿ ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಹಾಗೂ ದೀಪಕ್ ಚಹರ್ಗೆ ಮಣೆ ಹಾಕಲಾಗಿದೆ.
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಹೀಗಿದೆ – ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ , ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (WK), ಇಶಾನ್ ಕಿಶನ್ (WK), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ
ಮೀಸಲು ಆಟಗಾರರ ಆಟಗಾರರು – ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್.
ಐಸಿಸಿ ಪುರುಷರ ಟಿ20 ವಿಶ್ವಕಪ್ ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಓಮನ್ ಮತ್ತು ಯುಎಇಯಲ್ಲಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ, ಭಾರತವು ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಅಕ್ಟೋಬರ್ 24 ರಂದು ಆಡಲಿದೆ.
ಐಸಿಸಿ ಟಿ 20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ವೇಳಾಪಟ್ಟಿ: ಭಾರತ vs ಪಾಕಿಸ್ತಾನ – 24 ಅಕ್ಟೋಬರ್ ಭಾರತ vs ನ್ಯೂಜಿಲ್ಯಾಂಡ್ – 31 ಅಕ್ಟೋಬರ್ ಭಾರತ vs ಅಫ್ಘಾನಿಸ್ತಾನ – 3 ನವೆಂಬರ್ ಭಾರತ vs ಕ್ವಾಲಿಫೈಯರ್ ಬಿ 1 – 5 ನವೆಂಬರ್ ಭಾರತ vs ಕ್ವಾಲಿಫೈಯರ್ ಎ 2 8 ನವೆಂಬರ್
ಐಸಿಸಿ ಟಿ 20 ವಿಶ್ವಕಪ್ ನಾಕೌಟ್ ಹಂತದ ವೇಳಾಪಟ್ಟಿ: ನವೆಂಬರ್ 10 – ಸೆಮಿ ಫೈನಲ್ 1 ನವೆಂಬರ್ 11 – ಸೆಮಿ -ಫೈನಲ್ 2 ನವೆಂಬರ್ 14 – ಫೈನಲ್
ಐಸಿಸಿ ಟಿ 20 ವಿಶ್ವಕಪ್ ಗುಂಪು ರೌಂಡ್ 1 ಗ್ರೂಪ್ ಎ: ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್, ನಂಬಿಯಾ ಗ್ರೂಪ್ ಬಿ: ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ, ಓಮನ್
ಸೂಪರ್ 12 ಗ್ರೂಪ್ 1: ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಎ 1, ಬಿ 2 ಗ್ರೂಪ್ 2 : ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್, ಅಫ್ಘಾನಿಸ್ತಾನ, ಬಿ 1, ಎ 2.
ಇದನ್ನೂ ಓದಿ: ವಿಚ್ಛೇದಿತ ಮಹಿಳೆಯರನ್ನು ಪ್ರೀತಿಸಿ ಮದುವೆಯಾದ ಭಾರತೀಯ ಕ್ರಿಕೆಟಿಗರು ಇವರೇ
ಇದನ್ನೂ ಓದಿ: Shardul Thakur: ಮುಂಬೈ ಲೋಕಲ್ ಟ್ರೈನ್ ಹುಡುಗ ಇದೀಗ ಟೀಮ್ ಇಂಡಿಯಾ ಸೆನ್ಸೇಷನ್
ಇದನ್ನೂ ಓದಿ: IPL 2022: ಐಪಿಎಲ್ನ 2 ಹೊಸ ತಂಡಗಳಿಗಾಗಿ 6 ನಗರಗಳ ಆಯ್ಕೆ
(India’s T20 World Cup Squad 2021)
Published On - 9:13 pm, Wed, 8 September 21
