IPL 2021: ಐಪಿಎಲ್ನಲ್ಲಿ ಭಾಗಿಯಾಗಿದ್ದ ಆಸಿಸ್ ಆಟಗಾರರನ್ನು ಸ್ವದೇಶಕ್ಕೆ ಕಳುಹಿಸಲು ಹೊಸ ಉಪಾಯ, ಬಿಸಿಸಿಐ ಸಹಾಯ!
ನಮ್ಮ ದೇಶದ ಆಟಗಾರರನ್ನು ಮರಳಿ ಕರೆಸಿಕೊಳ್ಳುವ ಬಗ್ಗೆ ಬಿಸಿಸಿಐ ಜೊತೆ ಸಂಪರ್ಕದಲ್ಲಿದ್ದೇವೆ. ಬಿಸಿಸಿಐ ಕೂಡ ಅತ್ಯುತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದೆ ಎಂದು ಸಿಡ್ನಿಯಲ್ಲಿ ಮಾತನಾಡಿದ ಹೋಕ್ಲೆ ತಿಳಿಸಿದ್ದಾರೆ.
ಐಪಿಎಲ್ 2021 ಸರಣಿಯಲ್ಲಿ ಭಾಗಿಯಾಗಿದ್ದ ಕೆಲವು ಆಟಗಾರರು ಮತ್ತು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣ ಈ ಬಾರಿಯ ಟೂರ್ನಿ ರದ್ಧಾಗಿದೆ. ಐಪಿಎಲ್ 2021ನ್ನು ರದ್ದುಗೊಳಿಸಿ ಬಿಸಿಸಿಐ ಮಂಗಳವಾರ ಅಧಿಕೃತ ಆದೇಶ ಹೊರಡಿಸಿದೆ. ಈ ಮಧ್ಯೆ ವಿದೇಶಿ ಆಟಗಾರರು ತಮ್ಮ ದೇಶಕ್ಕೆ ಮರಳುವುದು ಹೇಗೆ ಎಂದು ಪ್ರಶ್ನೆಗಳು ಮೂಡಿವೆ. ಆಸ್ಟ್ರೇಲಿಯಾ ಮತ್ತು ಇತರ ಕೆಲ ದೇಶಗಳ ಆಟಗಾರರಿಗೆ ಸ್ವದೇಶಕ್ಕೆ ಮರಳುವುದು ಹೇಗೆ ಎಂಬ ವಿಚಾರ ಕಗ್ಗಂಟಾಗಿ ಉಳಿದಿದೆ. ಆಸ್ಟ್ರೇಲಿಯಾ ದೇಶವು ಭಾರತದಿಂದ ಮರಳುವ ಜನರಿಗೆ ನಿರ್ಬಂಧ ಹೇರಿದೆ. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ಹೋಕ್ಲೆ ಪ್ರತಿಕ್ರಿಯೆ ನೀಡಿದ್ದಾರೆ.
ಐಪಿಎಲ್ನಲ್ಲಿ ಭಾಗವಹಿಸಲು ಭಾರತಕ್ಕೆ ಬಂದು ಈಗ ಇಲ್ಲಿ ಉಳಿದಿರುವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರರು, ಸದ್ಯ ಭಾರತದ ಹೊರಗೆ ನಿಗದಿತ ದಿನಗಳ ಕಾಲ ತಂಗಬೇಕಾಗಿದೆ. ಸ್ವದೇಶಕ್ಕೆ ಮರಳಲು ಮೊದಲು ಭಾರತದಿಂದ ಹೊರಗೆ ಕೆಲದಿನಗಳ ಕಾಲ ಉಳಿಯಬೇಕಾಗಿದೆ. ಇದಕ್ಕೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಕೂಡ ಸಹಾಯ ಮಾಡಲಿದೆ.
ಬಿಸಿಸಿಐ, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸಿರುವ ಎಲ್ಲಾ ಆಸ್ಟ್ರೇಲಿಯಾ ಜನರನ್ನು ಮಾಲ್ಡೀವ್ಸ್ ಅಥವಾ ಶ್ರೀಲಂಕಾಗೆ ಕಳುಹಿಸಲಿದೆ. ಬಳಿಕ, ಅಲ್ಲಿಂದ ಆಸ್ಟ್ರೇಲಿಯಾಗೆ ಮರಳುವ ವ್ಯವಸ್ಥೆ ಮಾಡಲಾಗುವ ಬಗ್ಗೆ ಸ್ವತಃ ಕ್ರಿಕೆಟ್ ಆಸ್ಟ್ರೇಲಿಯಾದ ನಿಕ್ ಹೋಕ್ಲೆ ಬುಧವಾರ ಹೇಳಿಕೆ ನೀಡಿದ್ದಾರೆ. ಈ ಕಾರ್ಯಕ್ಕೆ ಬಿಸಿಸಿಐ ಸಹಕಾರ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ದೇಶದ ಆಟಗಾರರನ್ನು ಮರಳಿ ಕರೆಸಿಕೊಳ್ಳುವ ಬಗ್ಗೆ ಬಿಸಿಸಿಐ ಜೊತೆ ಸಂಪರ್ಕದಲ್ಲಿದ್ದೇವೆ. ಬಿಸಿಸಿಐ ಕೂಡ ಅತ್ಯುತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದೆ ಎಂದು ಸಿಡ್ನಿಯಲ್ಲಿ ಮಾತನಾಡಿದ ಹೋಕ್ಲೆ ತಿಳಿಸಿದ್ದಾರೆ. ಶ್ರೀಲಂಕಾ ಅಥವಾ ಮಾಲ್ಡೀವ್ಸ್ಗೆ ಆಟಗಾರರನ್ನು ಕಳುಹಿಸಲಾಗುವುದು. ಈ ಸಂಬಂಧ ಇನ್ನೆರಡು ದಿನದಲ್ಲಿ ಕೆಲಸವಾಗಲಿದೆ ಎಂದು ಅವರು ಹೇಳಿದ್ದಾರೆ. ಆಸ್ಟ್ರೇಲಿಯಾವು ಮೇ 15ರ ವರೆಗೆ ಭಾರತದಿಂದ ಆಗಮಿಸುವ ಪ್ರವಾಸಿಗರ ಮೇಲೆ ನಿರ್ಬಂಧ ಹೇರಿದೆ.
ಈ ವೇಳೆ, ಆಸಿಸ್ ಮಾಜಿ ಬ್ಯಾಟ್ಸ್ಮನ್ ಹಾಗೂ ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ನ ಕೋಚ್ ಮೈಕ್ ಹಸ್ಸಿ ಕೊವಿಡ್-19 ಸೋಂಕಿಗೆ ತುತ್ತಾಗಿರುವುದನ್ನು ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ ಕೂಡ ದೃಢಪಡಿಸಿದೆ.
ಇದನ್ನೂ ಓದಿ: IPL 2021: ಐಪಿಎಲ್ ಒಳಗೆ ಕೊರೊನಾ ಪ್ರವೇಶಿಸಲು ದೋಷಪೂರಿತ ಜಿಪಿಎಸ್ ಸಾಧನ ಕಾರಣವಾಯ್ತ? ಇಲ್ಲಿದೆ ರೋಚಕ ಸುದ್ದಿ
IPL 2021: ಪ್ಲೀಸ್ ಡ್ಯಾಡಿ, ಬೇಗ ಮನೆಗೆ ಬನ್ನಿ.. ಮಗಳ ಭಾವನಾತ್ಮಾಕ ಸಂದೇಶ ಹಂಚಿಕೊಂಡ ಡೇವಿಡ್ ವಾರ್ನರ್
Published On - 3:44 pm, Wed, 5 May 21