IPL 2021: ಕ್ರಿಸ್ ಮಾರಿಸ್ ಕಾಲೆಳೆದ ವಿರೇಂದ್ರ ಸೆಹ್ವಾಗ್; ಟ್ವಿಟರ್ನಲ್ಲಿ ವೈರಲ್ ಆಯ್ತು ತಮಾಷೆ!
ಐಪಿಎಲ್ ಟೂರ್ನಿಯ ರಾಜಸ್ಥಾನ್ ರಾಯಲ್ಸ್ನ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮಾರಿಸ್ಗೆ ಸ್ಟ್ರೈಕ್ ಬಿಟ್ಟುಕೊಡಲು ನಿರಾಕರಿಸಿದ್ದರು. ಹಾಗೂ ನಿನ್ನೆ ಗೆಲುವಿನಲ್ಲಿ ಮಾರಿಸ್ ಮುಖ್ಯ ಪಾತ್ರ ವಹಿಸಿದ್ದರು. ಈ ಎರಡು ಪಂದ್ಯದ ಕುರಿತ ಎರಡು ಫೋಟೊಗಳಿಗೆ ವಿಭಿನ್ನ ಕ್ಯಾಪ್ಶನ್ ಕೊಟ್ಟು ಸೆಹ್ವಾಗ್ ಹಂಚಿಕೊಂಡಿದ್ದಾರೆ.
ಭಾರತದ ಆಟಗಾರನಾಗಿ ಬ್ಯಾಟಿಂಗ್ನಲ್ಲಿ ಬೌಲರ್ಗಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದ ವಿರೇಂದ್ರ ಸೆಹ್ವಾಗ್ ಈಗ ಸೋಷಿಯಲ್ ಮೀಡಿಯಾದಲ್ಲೂ ಆಗಾಗ ಬೌಂಡರಿ ಸಿಕ್ಸರ್ ಬಾರಿಸುತ್ತಿರುತ್ತಾರೆ. ಇತರರ ಕಾಲೆಳೆಯುತ್ತಿರುತ್ತಾರೆ. ಐಪಿಎಲ್ ಟೂರ್ನಮೆಂಟ್ ಪಂದ್ಯಗಳ ಕುರಿತಾಗಿಯೂ ಸೆಹ್ವಾಗ್ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಅಂಥದ್ದೇ ಒಂದು ಟ್ವೀಟ್ ನಿನ್ನೆ ಮಾಡಿದ್ದಾರೆ. ಕ್ರಿಸ್ ಮಾರಿಸ್ ಬಗ್ಗೆ ಬರೆದುಕೊಂಡಿರುವ ಸಾಲುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೆಹ್ವಾಗ್, ಮಾರಿಸ್ರ ಎರಡು ಫೊಟೊಗಳಿರುವ ಮಿಮ್ಸ್ನ್ನು ಹಂಚಿಕೊಂಡಿದ್ದಾರೆ. ಐಪಿಎಲ್ ಟೂರ್ನಿಯ ರಾಜಸ್ಥಾನ್ ರಾಯಲ್ಸ್ನ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮಾರಿಸ್ಗೆ ಸ್ಟ್ರೈಕ್ ಬಿಟ್ಟುಕೊಡಲು ನಿರಾಕರಿಸಿದ್ದರು. ಹಾಗೂ ನಿನ್ನೆ ಗೆಲುವಿನಲ್ಲಿ ಮಾರಿಸ್ ಮುಖ್ಯ ಪಾತ್ರ ವಹಿಸಿದ್ದರು. ಈ ಎರಡು ಪಂದ್ಯದ ಕುರಿತ ಎರಡು ಫೋಟೊಗಳಿಗೆ ವಿಭಿನ್ನ ಕ್ಯಾಪ್ಶನ್ ಕೊಟ್ಟು ಸೆಹ್ವಾಗ್ ಹಂಚಿಕೊಂಡಿದ್ದಾರೆ.
ಒಂದು ಮೊದಲ ಪಂದ್ಯದ ರಿಯಾಕ್ಷನ್ ಹಾಗೂ ಮತ್ತೊಂದು ಫೊಟೊ ಎರಡನೇ ಪಂದ್ಯದ ರಿಯಾಕ್ಷನ್ ಎಂದು ಅವರು ಹೇಳಿದ್ದಾರೆ. ರಾಜಸ್ಥಾನ್ ರಾಯಲ್ಸ್ 16.25 ಕೋಟಿ ಕೊಟ್ಟು ಕ್ರಿಸ್ ಮಾರಿಸ್ರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಆ ಮೂಲಕ ಐಪಿಎಲ್ ಸೀಸನ್ನ ಅತಿ ದೊಡ್ಡ ಮೊತ್ತ ಪಡೆದ ಆಟಗಾರನಾಗಿ ಮಾರಿಸ್ ಹೊರಹೊಮ್ಮಿದ್ದರು. ಆ ಬಳಿಕ, ಮಾರಿಸ್ ಬಗ್ಗೆ ಹಾಗೂ ಅವರಿಗೆ ಹರಾಜಿನಲ್ಲಿ ನೀಡಿದ ಮೊತ್ತದ ಬಗ್ಗೆ ಮಾತುಕತೆ ಆಗುತ್ತಲೇ ಇತ್ತು.
Pic 1 last match – Paisa mila par izzat nahi mili
Pic 2 today – Isse kehte hain Izzat. Izzat bhi , Paisa bhi – Well done Chris Morris #RRvsDC pic.twitter.com/9hLqMk7OKT
— Virender Sehwag (@virendersehwag) April 15, 2021
ನಿನ್ನೆ ನಡೆದ, ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ರೋಚಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 3 ವಿಕೆಟ್ಗಳ ಗೆಲುವು ದಾಖಲಿಸಿದೆ. ಡೇವಿಡ್ ಮಿಲ್ಲರ್ ಹಾಗೂ ಕ್ರಿಸ್ ಮಾರಿಸ್ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಮಿಲ್ಲರ್ 62(43) ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದು ಔಟ್ ಆದರೆ, ಕೊನೆಗೆ ಬಂದ ಮಾರಿಸ್ 36(18), 4 ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಡೆಲ್ಲಿ ಬೌಲರ್ಗಳು ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಅವೇಶ್ ಖಾನ್ 3, ವೋಕ್ಸ್ ಹಾಗೂ ರಬಾಡ ತಲಾ 2 ವಿಕೆಟ್ ಕಬಳಿಸಿದ್ದರು. ಆದರೆ, ಅಂತಿಮ ಓವರ್ಗಳಲ್ಲಿ ರಾಯಲ್ಸ್ ಬ್ಯಾಟಿಂಗ್ ಕಟ್ಟಿಹಾಕಲು ವಿಫಲರಾಗಿದ್ದರು. ಮಿಲ್ಲರ್-ಮಾರಿಸ್ ಆಟಕ್ಕೆ ಡೆಲ್ಲಿ ಬೌಲರ್ಗಳು ಸುಸ್ತಾದರು. ಈ ಮೂಲಕ ರಾಜಸ್ತಾನ್ ತಂಡ ಮೊದಲ ಗೆಲುವನ್ನು ಕಂಡಿತು.
(IPL 2021 RR vs DC Virender Sehwag on Chris Morris Rajasthan Royals Match)
Published On - 3:56 pm, Fri, 16 April 21