IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಗ್ ಶಾಕ್: ಸ್ಟಾರ್ ಆಟಗಾರ ಔಟ್
Anrich Nortje: ವಿಶೇಷ ಎಂದರೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕಗಿಸೊ ರಬಾಡ ಅವರನ್ನು ಕೈಬಿಟ್ಟು ಅನ್ರಿಕ್ ನೋಕಿಯಾರನ್ನು ಮೆಗಾ ಹರಾಜಿಗೂ ಮುನ್ನ ಉಳಿಸಿಕೊಂಡಿತ್ತು.
ಐಪಿಎಲ್ (IPL 2022) ಆರಂಭಕ್ಕೆ ಇನ್ನು ವಾರಗಳು ಮಾತ್ರ ಉಳಿದಿವೆ. ಆದರೆ ಈ ಬಾರಿ ಟೂರ್ನಿಗೆ ಕೆಲ ಆಟಗಾರರು ಅಲಭ್ಯರಾಗುವುದು ಖಚಿತವಾಗಿದೆ. ಅವರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ವೇಗಿ ಅನ್ರಿಕ್ ನೋಕಿಯಾ (Anrich Nortje) ಕೂಡ ಒಬ್ಬರು. ಏಕೆಂದರೆ ಸೌತ್ ಆಫ್ರಿಕಾ ತಂಡವು ಮಾರ್ಚ್ 18 ರಿಂದ ಬಾಂಗ್ಲಾದೇಶ್ ವಿರುದ್ದ ಏಕದಿನ ಸರಣಿ ಆಡಲಿದೆ. ಆದರೆ ಈ ಸರಣಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಅನ್ರಿಕ್ ನೋಕಿಯಾ ಸ್ಥಾನ ಪಡೆದಿಲ್ಲ. ಗಾಯಗೊಂಡಿರುವ ಅನ್ರಿಕ್ ನೋಕಿಯಾ ಇನ್ನೂ ಕೂಡ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರನ್ನು ಬಾಂಗ್ಲಾದೇಶ್ ವಿರುದ್ದದ ಸರಣಿಗೆ ಆಯ್ಕೆ ಮಾಡಿಲ್ಲ. ಆದರೆ ಈ ಸರಣಿ ಮುಕ್ತಾಯದ ಬೆನ್ನಲ್ಲೇ ಐಪಿಎಲ್ ಶುರುವಾಗಲಿದೆ. ಅಂದರೆ ಗಾಯದ ಕಾರಣದಿಂದ ಈ ಸರಣಿಯಿಂದ ಹೊರಗುಳಿದಿರುವ ಅನ್ರಿಕ್ ನೋಕಿಯಾ ಐಪಿಎಲ್ನ ಮೊದಲಾರ್ಧದಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಐಪಿಎಲ್ನ ಮೊದಲಾರ್ಧದಲ್ಲಿ ಅನ್ರಿಕ್ ನೋಕಿಯಾ ಕಾಣಿಸಿಕೊಳ್ಳುವುದಿಲ್ಲ ಎಂದೇ ಹೇಳಬಹುದು.
ಅನ್ರಿಕ್ ನೋಕಿಯಾ ಭಾರತದ ದಕ್ಷಿಣ ಆಫ್ರಿಕಾ ಸರಣಿಯಿಂದ ಕೂಡ ಗಾಯದ ಕಾರಣ ಹೊರಗುಳಿದಿದ್ದರು. ಇದೀಗ ತಿಂಗಳುಗಳೇ ಕಳೆದರೂ ಅನ್ರಿಕ್ ಮತ್ತೊಮ್ಮೆ ಬೌಲಿಂಗ್ ಮಾಡುವಷ್ಟು ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಶಸ್ತ್ರಚಿಕಿತ್ಸೆಯ ಮೊರೆ ಹೋಗುವ ಸಾಧ್ಯತೆ ಕೂಡ ಇದೆ. ಒಂದು ವೇಳೆ ಅನ್ರಿಕ್ ನೋಕಿಯಾ ಮೂಳೆ ಸರ್ಜರಿಗೆ ಒಳಗಾದರೆ ಹೆಚ್ಚಿನ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಇದರಿಂದಾಗಿ ಅವರು ಸಂಪೂರ್ಣ ಐಪಿಎಲ್ ತಪ್ಪಿಸಿಕೊಳ್ಳಬೇಕಾಗಿ ಬರಬಹುದು. ಒಟ್ಟಿನಲ್ಲಿ ಇತ್ತ ಚೇತರಿಸಿಕೊಳ್ಳದ, ಅತ್ತ ಶಸ್ತ್ರಚಿಕಿತ್ಸೆಯನ್ನು ಎದುರು ನೋಡುತ್ತಿರುವ ಅನ್ರಿಕ್ ನೋಕಿಯಾ ಐಪಿಎಲ್ನ ಮೊದಲಾರ್ಥದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.
ವಿಶೇಷ ಎಂದರೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕಗಿಸೊ ರಬಾಡ ಅವರನ್ನು ಕೈಬಿಟ್ಟು ಅನ್ರಿಕ್ ನೋಕಿಯಾರನ್ನು ಮೆಗಾ ಹರಾಜಿಗೂ ಮುನ್ನ ಉಳಿಸಿಕೊಂಡಿತ್ತು. ಆದರೀಗ ಗಾಯದ ಕಾರಣ ಅನ್ರಿಕ್ ತಂಡದಿಂದ ಹೊರಗುಳಿದಿರುವುದು ಡೆಲ್ಲಿ ತಂಡದ ಚಿಂತೆಯನ್ನು ಹೆಚ್ಚಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ: ರಿಷಭ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾರ್ದೂಲ್ ಠಾಕೂರ್, ಮುಸ್ತಫಿಜುರ್ ರೆಹಮಾನ್, ಕುಲದೀಪ್ ಯಾದವ್, ಅಶ್ವಿನ್ ಹೆಬ್ಬಾರ್, ಸರ್ಫರಾಜ್ ಖಾನ್, ಕೆಎಸ್ ಭರತ್, ಕಮಲೇಶ್ ನಾಗರಕೋಟಿ, ಮನದೀಪ್ ಸಿಂಗ್, ಖಲೀಲ್ ಅಹ್ಮದ್, ಚೇತನ್ ಸಕರಿಯಾ, ಲಲಿತ್ ಯಾದವ್, ರಿಪಾಲ್ ಪಟೇಲ್, ಯಶ್ ಧುಲ್, ರೋವ್‌ಮನ್ ಪೊವೆಲ್, ಪ್ರವೀಣ್ ದುಬೆ, ಲುಂಗಿ ಎನ್‌ಗಿಡಿ, ಟಿಮ್ ಸೀಫರ್ಟ್, ವಿಕ್ಕಿ ಓಸ್ತ್ವಾಲ್, ಅನ್ರಿಕ್ ನೋಕಿಯಾ
ಇದನ್ನೂ ಓದಿ: Ipl 2022 Rcb Schedule: RCB ತಂಡ ಸಂಪೂರ್ಣ ವೇಳಾಪಟ್ಟಿ ಹೀಗಿದೆ
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(IPL 2022: Bad news for Delhi Capitals CONFIRMED: Anrich Nortje set to miss IPL)