ಈ ದಿನಗಳಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಯುದ್ಧವು ಪ್ರಪಂಚದಾದ್ಯಂತ ಬಾರಿ ಸುದ್ದಿ ಮಾಡುತ್ತಿದೆ. ಪ್ಯಾಲೆಸ್ಟೈನ್ನಲ್ಲಿ ಹಿಂಸಾಚಾರ ಮುಂದುವರೆದಿದೆ. ಈ ವಿಷಯದ ಬಗ್ಗೆ ವಿಶ್ವದಾದ್ಯಂತ ಜನರು ಪ್ಯಾಲೆಸ್ಟೈನ್ ಅನ್ನು ಬೆಂಬಲಿಸುತ್ತಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಪ್ಯಾಲೆಸ್ಟೈನ್ ಅನ್ನು ಬೆಂಬಲಿಸಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದರೆ, ಬಾಲಿವುಡ್ ನಟಿ ಕಂಗನಾ ರನೌತ್ಗೆ ಇರ್ಫಾನ್ ಪ್ಯಾಲೆಸ್ಟೈನ್ನನ್ನು ಬೆಂಬಲಿಸುತ್ತಿರುವುದು ಇಷ್ಟವಾಗಲಿಲ್ಲ ಎಂದು ತೋಚುತ್ತದೆ. ಆದರಿಂದ ಅವರು ಇರ್ಫಾನ್ ಅವರ ಟ್ವೀಟ್ ಅನ್ನು ಗುರಿಯಾಗಿಸಿಕೊಂಡು ಪಠಾಣ್ ಮೇಲೆ ಮಾತಿನ ಯುದ್ಧ ಆರಂಭಿಸಿದ್ದಾರೆ.
ಪ್ಯಾಲೆಸ್ಟೈನ್ನಲ್ಲಿ ಈ ಯುದ್ಧದಲ್ಲಿ ಅನೇಕ ಮಕ್ಕಳು ಮತ್ತು ಜನರು ಸಾಯುತ್ತಿರುವ ವರದಿಗಳಿವೆ. ಮಂಗಳವಾರ, ಇಸ್ರೇಲ್ ಹಮಾಸ್‌ನ ರಾಜಕೀಯ ವಿಂಕ್‌ನ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ 13 ಅಂತಸ್ತಿನ ಕಟ್ಟಡವನ್ನು ನೆಲಸಮ ಮಾಡಿದೆ. ಉಭಯ ದೇಶಗಳ ನಡುವಿನ ಈ ಯುದ್ಧವು 2021 ಮೇ 9 ರ ಭಾನುವಾರದಿಂದ ಪ್ರಾರಂಭವಾಯಿತು ಎಂದು ಊಹಿಸಲಾಗಿದೆ. ಎರಡೂ ಕಡೆಯಿಂದ ರಾಕೆಟ್ ದಾಳಿ ಮುಂದುವರೆದಿದೆ. 1966 ರ ನಂತರ ಮೊದಲ ಬಾರಿಗೆ ಲಾಡ್ ನಗರದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ವಿಧಿಸಲಾಗಿದೆ.
ಇರ್ಫಾನ್ ಅವರ ಟ್ವೀಟ್‌ನಿಂದ ಕಂಗನಾ ಕೋಪ
ಇರ್ಫಾನ್ ಮಂಗಳವಾರ ಟ್ವೀಟ್ ಮಾಡುವ ಮೂಲಕ ಪ್ಯಾಲೆಸ್ಟೈನ್ ಅನ್ನು ಬೆಂಬಲಿಸಿದ್ದಾರೆ. ನೀವು ಸ್ವಲ್ಪ ಮಾನವೀಯತೆಯನ್ನು ಹೊಂದಿದ್ದರೆ, ಪ್ಯಾಲೆಸ್ಟೈನ್ನಲ್ಲಿ ಏನು ನಡೆಯುತ್ತಿದೆಯೋ ಅದನ್ನು ನೀವು ಬೆಂಬಲಿಸುವುದಿಲ್ಲ ಎಂದು ಅವರು ಟ್ವೀಟ್ ಮಾಡಿದ್ದರು.
If you have even slightest of humanity you will not support what’s happening in #Palestine #SaveHumanity
— Irfan Pathan (@IrfanPathan) May 10, 2021
ಬಂಗಾಳದ ಬಗ್ಗೆ ಟ್ವೀಟ್ ಹಾಕಲು ಸಾಧ್ಯವಾಗಲಿಲ್ಲ
ಇರ್ಫಾನ್ ಅವರ ಈ ಟ್ವೀಟ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ತಿರುಗೇಟು ನೀಡಿರುವ ಕಂಗನಾ ರನೌತ್, ಇರ್ಫಾನ್ ಪಠಾಣ್ ಅವರಿಗೆ ಇತರ ದೇಶದ ಬಗ್ಗೆ ತುಂಬಾ ಪ್ರೀತಿ ಇದೆ, ಆದರೆ ತಮ್ಮದೇ ದೇಶದಲ್ಲಿರುವ ಬಂಗಾಳದ ಬಗ್ಗೆ ಟ್ವೀಟ್ ಹಾಕಲು ಸಾಧ್ಯವಾಗಲಿಲ್ಲ ಎಂದು ಕಂಗನಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಕಂಗನಾ ಅವರ ಈ ಪ್ರತಿಕ್ರಿಯೆಯಿಂದ ಅಸಮಾದಾನಗೊಮಡಿರುವ ಇರ್ಫಾನ್ ಪಠಾಣ್, ಈ ರೀತಿಯ ಹೇಳಿಕೆಗಳಿಂದಾಗಿ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಸರಿಯಾದ ತಿರುಗೇಟು ನೀಡಿದ್ದಾರೆ.
ಮಾನವೀಯತೆ ಅಥವಾ ದೇಶವಾಸಿಗಳಿಗೆ ಸಂಬಂಧಿಸಿದ್ದಾಗಿರುತ್ತದೆ
ನನ್ನ ಎಲ್ಲಾ ಟ್ವೀಟ್‌ಗಳು ಮಾನವೀಯತೆ ಅಥವಾ ದೇಶವಾಸಿಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಇದರಲ್ಲಿ, ದೇಶವನ್ನು ಉನ್ನತ ಮಟ್ಟದಲ್ಲಿ ಪ್ರತಿನಿಧಿಸಿದ ವ್ಯಕ್ತಿಯ ದೃಷ್ಟಿಕೋನವಿದೆ. ಆದರೆ ದೇಶದಲ್ಲಿ ದ್ವೇಷ ಬೀಜ ಬಿತ್ತಿ ಟ್ವಿಟರ್ನಿಂದ ಅಮಾನತಿಗೊಳಗಾದ ಕಂಗನಾ ಅವರಂತಹ ವ್ಯಕ್ತಿಗಳಿಂದ ನಾನು ಇಂತಹ ಮಾತುಗಳನ್ನು ಕೇಳಬೇಕಾಗಿದೆ ಎಂದರು.
All My tweets are either 4 humanity or countrymen, from a point of view of a guy who has represented India at d highest level. On d contrary counters I get from ppl like Kangna who’s account get dismissed by spreading hate n some other paid accounts are only about hate. #planned
— Irfan Pathan (@IrfanPathan) May 13, 2021