‘ಖೇಲೋ ಇಂಡಿಯಾ ಪದಕ ವಿಜೇತರು ಸರ್ಕಾರಿ ಉದ್ಯೋಗಗಳಿಗೆ ಅರ್ಹರು’; ಅನುರಾಗ್ ಠಾಕೂರ್

Khelo India: ಕೇಂದ್ರ ಸಚಿವ ಅನುರಾಗ್ ಠಾಕೂರ್ ಖೇಲೋ ಇಂಡಿಯಾದ ಅಥ್ಲೀಟ್‌ಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಅದರಂತೆ ಬುಧವಾರ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ಠಾಕೂರ್, ಇನ್ನು ಮುಂದೆ ಖೇಲೋ ಇಂಡಿಯಾ ಕ್ರೀಡಾಕೂಟದ ಪದಕ ವಿಜೇತರು ಸರ್ಕಾರಿ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

‘ಖೇಲೋ ಇಂಡಿಯಾ ಪದಕ ವಿಜೇತರು ಸರ್ಕಾರಿ ಉದ್ಯೋಗಗಳಿಗೆ ಅರ್ಹರು’; ಅನುರಾಗ್ ಠಾಕೂರ್
ಅನುರಾಗ್ ಠಾಕೂರ್
Follow us
|

Updated on:Mar 06, 2024 | 9:48 PM

ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಖೇಲೋ ಇಂಡಿಯಾದ ಅಥ್ಲೀಟ್‌ಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಅದರಂತೆ ಬುಧವಾರ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ಠಾಕೂರ್, ಇನ್ನು ಮುಂದೆ ಖೇಲೋ ಇಂಡಿಯಾ (Khelo India) ಕ್ರೀಡಾಕೂಟದ ಪದಕ ವಿಜೇತರು ಸರ್ಕಾರಿ ಉದ್ಯೋಗಗಳಿಗೆ (Government Jobs) ಅರ್ಹರಾಗಲಿದ್ದಾರೆ ಎಂಬ ಶುಭ ಸುದ್ದಿ ನೀಡಿದ್ದಾರೆ.ವಾಸ್ತವವಾಗಿ 2018 ರಿಂದ ಆರಂಭವಾಗಿರುವ ಖೇಲೋ ಇಂಡಿಯಾ ಗೇಮ್ಸ್‌ನ ಪದಕ ವಿಜೇತ ಕ್ರೀಡಾಪಟುಗಳು ಇದುವರೆಗೆ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿರಲಿಲ್ಲ. ಆದರೆ ಇನ್ನು ಮುಂದೆ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಪದಕ ಜಯಿಸುವ ಕ್ರೀಡಾಪಟುಳಿಗೆ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಲಿದ್ದಾರೆ.

ಸರ್ಕಾರಿ ಉದ್ಯೋಗಗಳಿಗೆ ಅರ್ಹರು

ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಠಾಕೂರ್, ‘ಸಿಬ್ಬಂದಿ, ತರಬೇತಿ ಇಲಾಖೆ ಮತ್ತು ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯದೊಂದಿಗೆ ಚರ್ಚಿಸಿದ ನಂತರ ಸರ್ಕಾರಿ ಉದ್ಯೋಗಗಳ ಮಾನದಂಡಗಳನ್ನು ಬದಲಾಯಿಸಲಾಗಿದೆ ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. ಈ ಹಂತವು ಈಗ ಯೂತ್ ಗೇಮ್ಸ್, ಯುನಿವರ್ಸಿಟಿ ಗೇಮ್ಸ್, ಪ್ಯಾರಾ ಗೇಮ್ಸ್ ಮತ್ತು ವಿಂಟರ್ ಗೇಮ್ಸ್ ಸೇರಿದಂತೆ ಖೇಲೋ ಇಂಡಿಯಾದ ಪದಕ ವಿಜೇತರನ್ನು ಸರ್ಕಾರಿ ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡುತ್ತದೆ. ಎಲ್ಲಾ ಖೇಲೋ ಇಂಡಿಯಾ ಸ್ಪರ್ಧೆಗಳಲ್ಲಿ ಪದಕ ವಿಜೇತರು ಈಗ ಪರಿಷ್ಕೃತ ಮಾನದಂಡಗಳ ಪ್ರಕಾರ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿರುತ್ತಾರೆ.

What India Thinks Today: ಖೇಲೋ ಇಂಡಿಯಾ ದೇಶವನ್ನು ಬಲಿಷ್ಠಗೊಳಿಸುತ್ತಿದೆ: ಅನುರಾಗ್ ಠಾಕೂರ್

ಬಲವಾದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ರಚಿಸುವುದು, ತಳಮಟ್ಟದಲ್ಲಿ ಪ್ರತಿಭೆಯನ್ನು ಪೋಷಿಸುವುದು ಮತ್ತು ಕ್ರೀಡೆಯನ್ನು ಆಕರ್ಷಕ ಮತ್ತು ಕಾರ್ಯಸಾಧ್ಯವಾದ ವೃತ್ತಿ ಆಯ್ಕೆಯನ್ನಾಗಿ ಪರಿವರ್ತಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಗೆ ಅನುಗುಣವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೆ ಈ ಪರಿಷ್ಕೃತ ನಿಯಮಗಳು ಭಾರತವನ್ನು ಕ್ರೀಡಾ ಸೂಪರ್ ಪವರ್ ಮಾಡುವಲ್ಲಿ ನಮ್ಮ ಕ್ರೀಡಾಪಟುಗಳನ್ನು ಬೆಂಬಲಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತವೆ’ ಎಂದು ಠಾಕೂರ್ ಬರೆದುಕೊಂಡಿದ್ದಾರೆ.

ಖೇಲೋ ಇಂಡಿಯಾ ಗೇಮ್ಸ್

ತಳಮಟ್ಟದಲ್ಲಿ ಕ್ರೀಡೆಯನ್ನು ಉತ್ತೇಜಿಸುವ ಭಾರತದ ಉಪಕ್ರಮದ ಮೂಲಾಧಾರವಾದ ಖೇಲೋ ಇಂಡಿಯಾ ಗೇಮ್ಸ್ ದೇಶದಾದ್ಯಂತ ಯುವ ಪ್ರತಿಭೆಗಳನ್ನು ಪೋಷಿಸುವ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ. ಅನೇಕ ವಿಭಾಗಗಳಲ್ಲಿ ವ್ಯಾಪಿಸಿರುವ, ಖೇಲೋ ಇಂಡಿಯಾ ಯೂತ್ ಗೇಮ್ಸ್ 17 ವರ್ಷದೊಳಗಿನ ಶಾಲಾ ವಿದ್ಯಾರ್ಥಿಗಳಿಗೆ ಮತ್ತು 21 ವರ್ಷದೊಳಗಿನ ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು, ತಮ್ಮ ಗೆಳೆಯರೊಂದಿಗೆ ಸ್ಪರ್ಧಿಸಲು ಮತ್ತು ರಾಷ್ಟ್ರೀಯ ಮನ್ನಣೆಯನ್ನು ಪಡೆಯಲು ವೇದಿಕೆಯನ್ನು ಒದಗಿಸುತ್ತದೆ. ಎಂಟು ವರ್ಷಗಳ ಕಾಲ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ 1,000 ಕ್ರೀಡಾಪಟುಗಳಿಗೆ 5 ಲಕ್ಷ ರೂಪಾಯಿಗಳ ವಾರ್ಷಿಕ ವಿದ್ಯಾರ್ಥಿವೇತನವನ್ನು ಒದಗಿಸುವುದರೊಂದಿಗೆ, ಈ ಕಾರ್ಯಕ್ರಮವು ಈ ಯುವ ಕ್ರೀಡಾಪಟುಗಳನ್ನು ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಸಿದ್ಧಪಡಿಸುವ ಗುರಿಯನ್ನು ಹೊಂದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:45 pm, Wed, 6 March 24

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್