Khelo India University Games: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್​ಗೆ ಚಾಲನೆ

Khelo India University Games: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್​ಗೆ ಚಾಲನೆ
Khelo India University Games

Khelo India University Games: 2020 ರಲ್ಲಿ ನಡೆದಿದ್ದ ಚೊಚ್ಚಲ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್​ನಲ್ಲಿ 158 ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಂದ 3182 ಆಟಗಾರರು ಭಾಗವಹಿಸಿದ್ದರು. ಈ ಬಾರಿ 200 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ 4,000 ಕ್ಕೂ ಹೆಚ್ಚು ಆಟಗಾರರು 20 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ.

TV9kannada Web Team

| Edited By: Vinay Bhat

Apr 25, 2022 | 10:33 AM

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್​ಗೆ (Khelo India University Games) ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ ನೀಡಿದ್ದಾರೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ , ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಕಳೆದ ವರ್ಷ ಈ ವಿಶೇಷ ಕ್ರೀಡಾಕೂಟವನ್ನು ಕೊರೋನಾತಂಕದ ಕಾರಣದಿಂದಾಗಿ ಆಯೋಜಿಸಲಾಗಿಲ್ಲ. ಇದೀಗ ಎರಡನೇ ಆವೃತ್ತಿಗೆ ಚಾಲನೆ ನೀಡಲಾಗಿದ್ದು, ಅದರಂತೆ ಮುಂದಿನ 10 ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟದಲ್ಲಿ ದೇಶದ ಹಲವು ವಿಶ್ವವಿದ್ಯಾಲಯದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

2020 ರಲ್ಲಿ ನಡೆದಿದ್ದ ಚೊಚ್ಚಲ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್​ನಲ್ಲಿ 158 ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಂದ 3182 ಆಟಗಾರರು ಭಾಗವಹಿಸಿದ್ದರು. ಈ ಬಾರಿ 200 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ 4,000 ಕ್ಕೂ ಹೆಚ್ಚು ಆಟಗಾರರು 20 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ.

 

 

 

ಪಂದ್ಯ ನಡೆಯುವುದು ಎಲ್ಲಿ?
ಬೆಂಗಳೂರಿನ ಜೈನ್ ಗ್ಲೋಬಲ್ ಯೂನಿವರ್ಸಿಟಿ ಕ್ಯಾಂಪಸ್ (11 ಕ್ರೀಡೆಗಳು), ಜೈನ್ ಸ್ಪೋರ್ಟ್ಸ್ ಸ್ಕೂಲ್ (ಬ್ಯಾಡ್ಮಿಂಟನ್, ಟೆನಿಸ್, ಫುಟ್‌ಬಾಲ್ ಮತ್ತು ಟೇಬಲ್ ಟೆನಿಸ್), ಕಂಠೀರವ ಸ್ಟೇಡಿಯಂ ಕಾಂಪ್ಲೆಕ್ಸ್ (ಬ್ಯಾಸ್ಕೆಟ್‌ಬಾಲ್ ಮತ್ತು ಅಥ್ಲೆಟಿಕ್ಸ್), ಫೀಲ್ಡ್ ಮಾರ್ಷಲ್ ಕರಿಯಪ್ಪ ಹಾಕಿ ಕ್ರೀಡಾಂಗಣ ಮತ್ತು ಕ್ರೀಡಾ ಪ್ರಾಧಿಕಾರದ ಐದು ಸ್ಥಳಗಳಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಭಾರತದ (SAI) SAI ಅನ್ನು ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ ಶೂಟಿಂಗ್ ಕೂಡ ನಡೆಸಲಾಗುತ್ತದೆ.

ಯಾವೆಲ್ಲಾ ಕ್ರೀಡೆಗಳು ನಡೆಯಲಿದೆ?
ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಬಾಕ್ಸಿಂಗ್, ಫೆನ್ಸಿಂಗ್, ಫುಟ್‌ಬಾಲ್, ಹಾಕಿ, ಜೂಡೋ, ಕಬಡ್ಡಿ, ಶೂಟಿಂಗ್, ಈಜು, ಟೆನಿಸ್, ಟೇಬಲ್ ಟೆನಿಸ್, ವಾಲಿಬಾಲ್, ವೇಟ್‌ಲಿಫ್ಟಿಂಗ್, ವ್ರೆಸ್ಲಿಂಗ್, ಕರಾಟೆ ಮುಂತಾದ ಕ್ರೀಡೆಗಳು ನಡೆಯಲಿದೆ. ಹಾಗೆಯೇ ಈ ಬಾರಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ಸ್ಥಳೀಯ ಕ್ರೀಡೆಗಳಾದ ಮಲ್ಲಾಕಂಬ್ ಮತ್ತು ಯೋಗಾಸನ ಕೂಡ ಸೇರ್ಪಡೆಯಾಗಿರುವುದು ವಿಶೇಷ. ಅದರಂತೆ ಒಟ್ಟು 257 ಚಿನ್ನದ ಪದಕಗಳಿಗಾಗಿ ಪೈಪೋಟಿ ನಡೆಯಲಿದೆ.

ಮೊದಲ ಬಾರಿಗೆ ಗ್ರೀನ್ ಗೇಮ್ಸ್:
ಈ ಬಾರಿ ಮೊದಲ ಬಾರಿಗೆ ಈ ಕ್ರೀಡಾಕೂಟಗಳಲ್ಲಿ ಹಲವು ವಿಷಯಗಳನ್ನು ಆಯೋಜಿಸಲಾಗುತ್ತಿದೆ. ಈ ಕ್ರೀಡಾಕೂಟವನ್ನು ಗ್ರೀನ್ ಗೇಮ್ಸ್ ಅಡಿಯಲ್ಲಿ ನಡೆಸುತ್ತಿರುವುದು ವಿಶೇಷ. ಅಂದರೆ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಆಟಗಳಲ್ಲಿ ಬಳಸಲಾಗುತ್ತದೆ. ಶೂನ್ಯ ತ್ಯಾಜ್ಯ ಮತ್ತು ಶೂನ್ಯ ಪ್ಲಾಸ್ಟಿಕ್ ಮಾದರಿಯಲ್ಲಿ ಈ ಆಟಗಳನ್ನು ಆಯೋಜಿಸಲಾಗುತ್ತಿದೆ. ಹೆಚ್ಚುವರಿಯಾಗಿ, ಖೇಲೋ ಇಂಡಿಯಾ ಗೇಮ್ಸ್​ ಬಗ್ಗೆಗಿನ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಕ್ರೀಡೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒಳಗೊಂಡಿರುತ್ತದೆ.

 

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ

Follow us on

Related Stories

Most Read Stories

Click on your DTH Provider to Add TV9 Kannada