WTC Final: ಕೊಹ್ಲಿಯೇನೋ ಸಂತೋಷದಲ್ಲಿದ್ದಾರೆ ಅದರೆ ಸರಣಿ ಗೆದ್ದಿರುವ ವಿಲಿಯಮ್ಸನ್ ಆತ್ಮವಿಶ್ವಾಸದ ಮೂಟೆಯಾಗಿದ್ದಾರೆ!
ವಿಲಿಯಮ್ಸನ್ ಅವರ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ಗಳ ಸರಣಿ ಆಡಿದ್ದೂ ಅಲ್ಲದೆ ಕೊನೆಯ ಟೆಸ್ಟ್ನಲ್ಲಿ 8 ವಿಕೆಟ್ಗಳ ಸುಲಭ ಗೆಲುವು ಸಾಧಿಸಿ ಭರ್ಜರಿ ತಯಾರಿಯೊಂದಿಗೆ ಭಾರತವನ್ನು ಎದುರಿಸಲಿದೆ.
ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಈಗಿನ ಅತ್ಯುತ್ತಮ ಬೌಲರ್ಗಳ ಬೆವರಿಳಿಸರೋದು ಸತ್ಯ. ಅಷ್ಟ್ಯಾಕೆ, ಹಲವು ಖ್ಯಾತನಾಮರು ಕೊಹ್ಲಿಗೆ ಬೌಲ್ ಮಾಡುವುದಕ್ಕಿಂತ ಮಿಡ್-ಆನ್ ಇಲ್ಲವೇ ಮಿಡ್-ಆಫ್ನಲ್ಲಿ ಫೀಲ್ಡ್ ಮಾಡುತ್ತಾ ಅವರ ಬ್ಯಾಟಿಂಗ್ ಮಾಡುವುದನ್ನು ನೋಡಲಿಚ್ಛಿಸುವುದಾಗಿ ಹೇಳಿದ್ದಾರೆ. ಆದರೆ ಕೊಹ್ಲಿ ತಮ್ಮ ಟೀಮಿನ ಬೌಲರ್ಗಳ ವಿರುದ್ಧ ಆಡುವುದನ್ನು ನೀವು ನೋಡಿದ್ದೀರಾ? ಹೌದು ನೆಟ್ಸ್ನಲ್ಲಿ ಅವರು ಬುಮ್ರಾ, ಶಮಿ, ಇಶಾಂತ್, ಸಿರಾಜ್ ಮೊದಲಾವರನ್ನು ಎದುರಿಸುತ್ತಾರಾದರೂ ಮ್ಯಾಚ್ನಂಥ ಸ್ಥಿತಿಯಲ್ಲಿ ಅಲ್ಲ. ಆದರೆ, ಇಂಗ್ಲೆಂಡ್ನ ಸೌತಾಂಪ್ಟನ್ನಲ್ಲಿ ಅದು ಸಾಧ್ಯವಾಗಿದೆ, ಟೀಮ್ ಇಂಡಿಯಾ ತನ್ನ ಸದಸ್ಯರದ್ದೇ ಎರಡು ಟೀಮಗಳನ್ನು ಮಾಡಿಕೊಂಡು ಈ ಮೈದಾನದಲ್ಲಿ ಮ್ಯಾಚ್ಗಳನ್ನು ಆಡುತ್ತಿದ್ದು ಕೊಹ್ಲಿ ತಾನಿದನ್ನು ತುಂಬಾ ಆನಂದಿಸುತ್ತಿರುವುದಾಗಿ ಹೇಳಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಮೊದಲು ಟೀಮ್ ಇಂಡಿಯಾ ಸೌತಾಂಪ್ಟನಲ್ಲಿ ಜೋರಾಗಿ ಅಭ್ಯಾಸ ನಡೆಸುತ್ತಿರುವ ಸಮಯದಲ್ಲೇ ಕೊಹ್ಲಿ ಟೀಮಿನ ಪ್ರಮುಖ ವೇಗದ ಬೌಲರ್ಗಳಾಗಿರುವ ಮೊಹಮ್ಮದ್ ಸಿರಾಜ್ ಮತ್ತು ಇಶಾಂತ್ ಶರ್ಮ ಅವರೊಂದಿಗೆ ಸೆಲ್ಫೀಯೊಂದನ್ನು ಟ್ಯಾಗ್ ಮಾಡಿ ‘ಇವರಿಬ್ಬರು ಪ್ರತಿದಿನ ಬ್ಯಾಟ್ಸ್ಮನ್ಗಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾರೆ,’ ಅಂತ ಟ್ವೀಟ್ ಮಾಡಿದ್ದಾರೆ.
ಕೊಹ್ಲಿ ನಾಯಕತ್ವದ ಭಾರತ ಮತ್ತು ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ವಿರುದ್ಧ ಮೊಟ್ಟ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪೈನಲ್ ಜೂನ್ 18ರಿಂದ ಸೌತಾಂಪ್ಟನ್ನ ಏಜಿಸ್ ಬೋಲ್ ಮೈದಾನದಲ್ಲಿ ನಡೆಯಲಿದೆ.
These quicks are dominating everyday ??? @mdsirajofficial @ImIshant pic.twitter.com/anUrYhgaRu
— Virat Kohli (@imVkohli) June 14, 2021
ಸೌತಾಂಪ್ಟನಲ್ಲಿ ನಡೆಯುತ್ತಿರುವ ಅಭ್ಯಾಸದ ಪಂದ್ಯಗಳಲ್ಲಿ ವಿಕೆಟ್-ಕೀಪರ್ ಬ್ಯಾಟ್ಸಮನ್ ರಿಷಭ್ ಪಂತ್, ಶುಭ್ಮನ್ ಗಿಲ್, ಕೆ ಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಟೀಮ್ ಮೂಲಗಳು ತಿಳಿಸಿವೆ, ಹಾಗೆ ನೋಡಿದರೆ, ಅತ್ಯಂತ ಮಹತ್ವಪೂರ್ಣ ಡಬ್ಲ್ಯೂಟಿಸಿ ಫೈನಲ್ ಪಂದ್ಯಕ್ಕೆ ಭಾರತ ಮ್ಯಾಚ್ ಪ್ರ್ಯಾಕ್ಟೀಸ್ ಇಲ್ಲದೆ ಮೈದಾನಕ್ಕಿಳಿಯಲಿದೆ.
ಆದರೆ ಮತ್ತೊಂದೆಡೆ ವಿಲಿಯಮ್ಸನ್ ಅವರ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ಗಳ ಸರಣಿ ಆಡಿದ್ದೂ ಅಲ್ಲದೆ ಕೊನೆಯ ಟೆಸ್ಟ್ನಲ್ಲಿ 8 ವಿಕೆಟ್ಗಳ ಸುಲಭ ಗೆಲುವು ಸಾಧಿಸಿ ಭರ್ಜರಿ ತಯಾರಿಯೊಂದಿಗೆ ಭಾರತವನ್ನು ಎದುರಿಸಲಿದೆ. ಈ ಟೆಸ್ಟ್ ನಡೆದ ಸುಮಾರು ಒಂದೂವರೆ ತಿಂಗಳ ನಂತರ ಭಾರತ ಮತ್ತ್ತು ಇಂಗ್ಲೆಂಡ್ 5-ಟೆಸ್ಟ್ ಪಂದ್ಯಗಳ ಸರಣಿಯನ್ನಾಡಲಿವೆ.
ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲುವ ತಂಡ ಸುಮಾರು 12 ಕೋಟಿ ರೂಪಾಯಿಗಳನ್ನು ಬಹುಮಾನದ ರೂಪದಲ್ಲಿ ಪಡೆಯಲಿದೆ. ಈ ಕುರಿತತು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು ಸೋಲುವ ತಂಡಕ್ಕೆ ಸುಮಾರು 6 ಕೋಟಿ ರೂಪಾಯಿ ಸಿಗಲಿದೆ ಅಂತ ಹೇಳಿದೆ. ಚಾಂಪಿಯನ್ ತಂಡಕ್ಕೆ ಹಣದ ಜೊತೆ ಐಸಿಸಿ ಟೆಸ್ಟ್ ಚಾಂಪಿಯನ್ಸಿಪ್ ಗದೆ ಸಹ ಸಿಗಲಿದೆ.
‘ಒಂಭತ್ತು ತಂಡಗಳು ಭಾಗವಹಿಸಿದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅನ್ನು ಗೆಲ್ಲುವ ತಂಡ 1.6 ಮಿಲಿಯನ್ ಡಾಲರ್ಗಳನ್ನು ಪಡೆದರೆ, ಸೋಲುವ ತಂಡ 8 ಲಕ್ಷ ಡಾಲರ್ಗಳನ್ನು ಜೇಬಿಗಿಳಿಸಲಿದೆ. ಕ್ರಿಕೆಟ್ನ ಸಾಂಪ್ರದಾಯಿಕ ಆವೃತ್ತಿಯಲ್ಲಿ ಚಾಂಪಿಯನ್ ತಂಡ ಹೊರಹೊಮ್ಮುವಂತಾಗಲು ಎರಡು ವರ್ಷಗಳ ಟೆಸ್ಟ್ ಕ್ರಿಕೆಟ್ ಸೈಕಲ್ ನಡೆಸಲಾಯಿತು,’ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಇದನ್ನೂ ಓದಿ: WTC Final: ಕೊಹ್ಲಿ ಹುಡುಗರ ನಡುವೆ ಅಭ್ಯಾಸ ಪಂದ್ಯ; ಶತಕ ಸಿಡಿಸಿದ ಪಂತ್, ಗಿಲ್ ಅರ್ಧ ಶತಕ.. ಬೌಲಿಂಗ್ನಲ್ಲಿ ಮಿಂಚಿದ ಇಶಾಂತ್