ಕೆಪಿಎಲ್ ಮ್ಯಾಚ್ ಫಿಕ್ಸಿಂಗ್, ಅಂತರಾಷ್ಟ್ರೀಯ ಬುಕ್ಕಿ ಸಯ್ಯಂ ಸಿಸಿಬಿ ಬಲೆಗೆ
ಬೆಂಗಳೂರು: ಕೆಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಹರಿಯಾಣ ಮೂಲದ ಸಯ್ಯಂ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತ ಓರ್ವ ಇಂಟರ್ನ್ಯಾಷನಲ್ ಕ್ರಿಕೆಟ್ ಬುಕ್ಕಿ ಎಂದು ತಿಳಿದು ಬಂದಿದೆ. ಮೊದಲಿಗೆ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಬಯಲಾಗ್ತಿದ್ದಂತೆ ಸಯ್ಯಂ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಆರೋಪಿ ನಿನ್ನೆ ದೆಹಲಿಗೆ ಬಂದ ಕೂಡಲೇ ವಶಕ್ಕೆ ಪಡೆದಿದ್ದು, ಸಯ್ಯಂ ವಿರುದ್ಧ LOC ಜಾರಿಗೊಳಿಸಲಾಗಿದೆ. ಆರೋಪಿಯನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಬುಕ್ಕಿ ಸಯ್ಯಂ ಆರ್ಸಿಬಿ […]
ಬೆಂಗಳೂರು: ಕೆಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಹರಿಯಾಣ ಮೂಲದ ಸಯ್ಯಂ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತ ಓರ್ವ ಇಂಟರ್ನ್ಯಾಷನಲ್ ಕ್ರಿಕೆಟ್ ಬುಕ್ಕಿ ಎಂದು ತಿಳಿದು ಬಂದಿದೆ. ಮೊದಲಿಗೆ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಬಯಲಾಗ್ತಿದ್ದಂತೆ ಸಯ್ಯಂ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಆರೋಪಿ ನಿನ್ನೆ ದೆಹಲಿಗೆ ಬಂದ ಕೂಡಲೇ ವಶಕ್ಕೆ ಪಡೆದಿದ್ದು, ಸಯ್ಯಂ ವಿರುದ್ಧ LOC ಜಾರಿಗೊಳಿಸಲಾಗಿದೆ. ಆರೋಪಿಯನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ಬುಕ್ಕಿ ಸಯ್ಯಂ ಆರ್ಸಿಬಿ ಡ್ರಮ್ಮರ್ ಭವೇಶ್ ಭಾಪ್ಲಾ ಮೂಲಕ ಕೆಪಿಎಲ್ ಬೌಲರ್ ಭವೇಶ್ ಗುಳೇಚ್ಚಾಗೆ ಜೆ.ಪಿ.ನಗರದ ಕೆಫೆಯಲ್ಲಿ ಭೇಟಿ ಮಾಡಿ ಹಣದ ಆಮಿಷವೊಡ್ಡಿದ್ದ. ಒಂದು ಓವರ್‌ಗೆ 10 ರನ್ ನೀಡಿದರೆ 5 ಲಕ್ಷ ಹಣ ನೀಡುವುದಾಗಿ ಆಫರ್ ನೀಡಿದ್ದ. ಆದರೆ ಭವೇಶ್ ಗುಳೇಚ್ಚಾ ಆಫರ್ ನಿರಾಕರಿಸಿದ್ದಾರೆ. ಪ್ರಕರಣ ಬೆಳಕಿಗೆ ಬರ್ತಿದ್ದಂತೆ ಭವೇಶ್ ಗುಳೇಚ್ಚಾ ಜೆ.ಪಿ.ನಗರ ಠಾಣೆಗೆ ತೆರಳಿ ಸಯ್ಯಂ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈಗ ಸಯ್ಯಂ ಬಂಧಿಯಾಗಿದ್ದು, ದೇಶಿ ಕ್ರಿಕೆಟ್ನ ಹಲವು ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಕೇಸ್ಗಳು ಬೆಳಕಿಗೆ ಬರೊ ಸಾಧ್ಯತೆ ಹೆಚ್ಚಾಗಿದೆ.
Published On - 10:20 am, Sun, 10 November 19