
ಇದು ಯಾರ ಯಾರ ಮನೆ ಹೇಳ್ತೀರಾ? ಸುಳಿವು... ಕ್ರಿಕೆಟಿಗರ ಐಷಾರಾಮಿ ಮನೆಗಳ ಚಿತ್ರಗಳು ಇಲ್ಲಿವೆ ನೋಡಿ ಹೇಳಿ..

ಸಚಿನ್ ತೆಂಡೂಲ್ಕರ್ (Sachin Tendulkar): ಮುಂಬೈ ಪಾಶ್ ಏರಿಯಾಗಳಲ್ಲಿ ಒಂದಾದ ಬಾಂದ್ರಾದ ಪಶ್ಚಿಮದಲ್ಲಿರುವ ಪೆರಿ ಕ್ರಾಸ್ ರಸ್ತೆಯಲ್ಲಿದೆ ಸಚಿನ್ ನಿವಾಸ. ಅವರು ತಮ್ಮ ಇಡೀ ಕುಟುಂಬದವರೊಂದಿಗೆ ವಾಸಿಸುತ್ತಿರುವುದು ಇದೇ ವಿಶಾಲ ಮನೆಯಲ್ಲಿ. 2007ರಲ್ಲಿ 39 ಕೋಟಿ ರೂಪಾಯಿಗೆ ಅವರು ಇದನ್ನು ಖರೀದಿಸಿದ್ದಾರೆ. 6,000 ಚದರ ಅಡಿಯಷ್ಟು ವಿಶಾಲವಾಗಿರುವ ಈ ಬಂಗಲೆ ಬೆಲೆ ಈಗ ಅಂದಾಜು 100 ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

ವಿರಾಟ್ ಕೊಹ್ಲಿ (Virat Kohli): ಅತ್ತ ಇಂಗ್ಲೆಂಡಿನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಒಳ್ಳೆಯ ಫಾರಂನಲ್ಲಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಹ ತಮ್ಮ ಪತ್ನಿ-ಪುತ್ರಿಯೊಂದಿಗೆ ಮುಂಬೈನಲ್ಲೇ ಪಾಶ್ ಏರಿಯಾ ಒಂದರಲ್ಲಿ ಮನೆ ಮಾಡಿಕೊಂಡಿದ್ದಾರೆ. ನಾಲ್ಕು ಬೆಡ್ ರೂಂಗಳಿರುವ ವಿಶಾಲ ವರಾಂಡ ಇರುವ ಮನೆಯದು. ಮುಂಬೈನ ವೊರ್ಲಿಯ್ಲಿರುವ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾರ ಈ ಮನೆ 34 ಕೋಟಿ ರೂಪಾಯಿಯದ್ದಾಗಿದೆ. ಮದುವೆಯಾದ ನಂತರ 2017ರಲ್ಲಿ ದಂಪತಿ ಈಮನೆಗೆ ಶಿಫ್ಟ್ ಆದರು.

ಎಂಎಸ್ ಧೋನಿ (MS Dhoni): ಧೋನಿ, ಕೇರಾಫ್ ರಾಂಚಿ ನಿವಾಸ! ನೋಡಲೆರಡು ಕಣ್ಣುಗಳು ಸಾಲದಪ್ಪಾ ಅನ್ನುವಂತಿದೆ ನಮ್ಮ ಕ್ಯಾಪ್ಟನ್ ಕೂಲ್ ಧೋನಿ ಮನೆ. 7 ಎಕರೆಗಳಲ್ಲಿರುವ ಸುವಿಶಾಲ ಫಾರ್ಮ್ ಹೌಸ್ ಅದು. ತುಂಟ ಮಗಳು ಜೀವಾ ಜೊತೆ ಧೋನಿ-ಸಾಕ್ಷಿ ದಂಪತಿ ಕ್ವಾಲಿಟಿ ಟೈಂ ಕಳೆಯುತ್ತಿರುವುದು ಇಲ್ಲೆಯೇ. ನೀವೂ ನೋಡಿ.

ರೋಹಿತ್ ಶರ್ಮಾ

ಯುವರಾಜ್ ಸಿಂಗ್ (Yuvraj Singh): ಸಿಕ್ಸರ್ಗಳ ರಾಜ ಯುವಿ ತಮ್ಮ ಪತ್ನಿ ಹ್ಯಾಜೆಲ್ ಕೀಚ್ ಜೊತೆ ಇದೇ ಅಪಾರ್ಟ್ಮೆಂಟ್ನಲ್ಲಿರುವುದು. ಇದರ ಮಾರುಕಟ್ಟೆ ಮೌಲ್ಯ 64 ಕೋಟಿ ರೂಪಾಯಿ. 16,000 ಚದರಡಿ ವಿಸ್ತೀರ್ಣದಲ್ಲಿದೆ. ಅದೂ 29 ನೆಯ ಮಹಡಿಯಲ್ಲಿ! ಇವರ ಮನೆಯೂ ಅಷ್ಟೇ ಅರಬ್ಬಿ ಸಮುದ್ರದ ಎದುರಿಗಿದೆ.
Published On - 1:53 pm, Wed, 23 June 21