ಆಸ್ಟ್ರೇಲಿಯಾ ಏಕದಿನ ತಂಡಕ್ಕೆ ಭಾರತದ ಧೋನಿ ಅಧಿಪತಿ!

ಆಸ್ಟ್ರೇಲಿಯಾ ಏಕದಿನ ತಂಡಕ್ಕೆ ಭಾರತದ ಧೋನಿ ಅಧಿಪತಿ!

ಟೀಂ ಇಂಡಿಯಾದ ಮಾಜಿ ನಾಯಕ, ಭಾರತ ಕಂಡ ಅತ್ಯದ್ಭುತ ಮ್ಯಾಚ್ ಫಿನಿಶರ್ ಮಹೇಂದ್ರ ಸಿಂಗ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಎಂಟ್ರಿಕೊಟ್ಟು 15ವರ್ಷಗಳೇ ಕಳೆದಿವೆ. ಭಾರತಕ್ಕೆ ಎರಡೆರೆಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಸರ್ವಶ್ರೇಷ್ಠ ನಾಯಕ ಮಹೇಂದ್ರ. ಆಸ್ಟ್ರೇಲಿಯಾ ಏಕದಿನ ತಂಡಕ್ಕೆ ಮಾಹಿ ಅಧಿಪತಿ! 2019ರ ವಿಶ್ವಕಪ್ ಸೆಮಿಫೈನಲ್ ಆಡಿದ್ದೇ ಮಾಹಿಯ ಕೊನೇ ಪಂದ್ಯ. 2020ರ ಟಿ-ಟ್ವೆಂಟಿ ವಿಶ್ವಕಪ್ ಆಡ್ತಾರೋ ಇಲ್ವೋ ಅನ್ನೋ ಕ್ಲ್ಯಾರಿಟಿಯೂ ಸಿಕ್ಕಿಲ್ಲ. ಆದ್ರೂ ವಿಶ್ವ ಕ್ರಿಕೆಟ್​ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಹವಾ ಮಾತ್ರ ಕಡಿಮೆಯಾಗಿಲ್ಲ. ಯಾಕಂದ್ರೆ, ಧೋನಿ […]

sadhu srinath

|

Dec 25, 2019 | 3:33 PM

ಟೀಂ ಇಂಡಿಯಾದ ಮಾಜಿ ನಾಯಕ, ಭಾರತ ಕಂಡ ಅತ್ಯದ್ಭುತ ಮ್ಯಾಚ್ ಫಿನಿಶರ್ ಮಹೇಂದ್ರ ಸಿಂಗ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಎಂಟ್ರಿಕೊಟ್ಟು 15ವರ್ಷಗಳೇ ಕಳೆದಿವೆ. ಭಾರತಕ್ಕೆ ಎರಡೆರೆಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಸರ್ವಶ್ರೇಷ್ಠ ನಾಯಕ ಮಹೇಂದ್ರ.

ಆಸ್ಟ್ರೇಲಿಯಾ ಏಕದಿನ ತಂಡಕ್ಕೆ ಮಾಹಿ ಅಧಿಪತಿ! 2019ರ ವಿಶ್ವಕಪ್ ಸೆಮಿಫೈನಲ್ ಆಡಿದ್ದೇ ಮಾಹಿಯ ಕೊನೇ ಪಂದ್ಯ. 2020ರ ಟಿ-ಟ್ವೆಂಟಿ ವಿಶ್ವಕಪ್ ಆಡ್ತಾರೋ ಇಲ್ವೋ ಅನ್ನೋ ಕ್ಲ್ಯಾರಿಟಿಯೂ ಸಿಕ್ಕಿಲ್ಲ. ಆದ್ರೂ ವಿಶ್ವ ಕ್ರಿಕೆಟ್​ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಹವಾ ಮಾತ್ರ ಕಡಿಮೆಯಾಗಿಲ್ಲ. ಯಾಕಂದ್ರೆ, ಧೋನಿ ಅನ್ನೋ ಚಾಂಪಿಯನ್ ಕ್ರಿಕೆಟಿಗ ಈಗ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಅಧಿಪತಿಯಾಗಿದ್ದಾರೆ.

ಬ್ಯಾಟ್ಸ್​ಮನ್ ಆಗಿ ಅಬ್ಬರಿಸಿರೋ ಧೋನಿ, ವಿಕೆಟ್ ಹಿಂದೆ ಜಾದೂ ಮಾಡೋದ್ರಲ್ಲೂ ಪಂಟರ್.. ಜಾಗತಿಕ ಕ್ರಿಕೆಟ್​ನಲ್ಲಿ ದಿ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಂಡಿರೋ ಮಹೇಂದ್ರ, ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಏಕದಿನ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿ ಆಸ್ಟ್ರೇಲಿಯಾದ ಡಿ ಬಾಸ್ ಆಗಿ ಹೊರಹೊಮ್ಮಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ 2010ರಿಂದ 2020ರವರೆಗಿನ ದಶಕದ ಏಕದಿನ ಇಲೆವೆನ್ ತಂಡವನ್ನ ಪ್ರಕಟಿಸಿದ್ದು, ಧೋನಿ ಅನ್ನೋ ಮಾಸ್ಟರ್ ಮೈಂಡ್​ಗೆ ನಾಯಕತ್ವ ಪಟ್ಟವನ್ನ ನೀಡಲಾಗಿದೆ. ಅಲ್ಲದೇ, ಕ್ರಿಕೆಟ್ ಆಸ್ಟ್ರೇಲಿಯಾ ಈ ತಂಡದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಧೋನಿಗೆ ವಹಿಸಿದೆ.

15ವರ್ಷದ ಕರಿಯರ್​ನಲ್ಲಿ ಹಲವು ಟೂರ್ನಿಯನ್ನ ಗೆಲ್ಲಿಸಿಕೊಟ್ಟಿರೋ ಮಾಹಿ, ದಶಕದ ಏಕದಿನ ತಂಡದಲ್ಲಿ ಎಂದಿನಂತೆ 5ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಹೀಗಾಗಿ ಧೋನಿ ಕ್ರಿಕೆಟ್​ನಿಂದ ದೂರವಾಗಿದ್ರೂ ಲೆಜೆಂಡ್ ಆಟಗಾರ ಅನ್ನೋದನ್ನ ಕ್ರಿಕೆಟ್ ಆಸ್ಟ್ರೇಲಿಯಾ ಸಾಬೀತು ಮಾಡಿದೆ. ಈ ಮೂಲಕ ಕಾಂಗರೂ ತಂಡದ ಡಿ ಬಾಸ್ ಆಗಿ ಧೋನಿ ಹೊರಹೊಮ್ಮಿದ್ದಾರೆ.

ಆಸ್ಟ್ರೇಲಿಯಾದ ದಶಕದ ಏಕದಿನ ತಂಡ: ಕ್ರಿಕೆಟ್ ಆಸ್ಟ್ರೇಲಿಯಾದ ದಶಕದ ಟೆಸ್ಟ್ ತಂಡವನ್ನ ಕ್ರಿಕೆಟ್ ದುನಿಯಾದ ಡಿ ಬಾಸ್ ಎಂ.ಎಸ್.ಧೋನಿ ಮುನ್ನಡೆಸಲಿದ್ರೆ, ಭಾರತದ ರೋಹಿತ್ ಶರ್ಮಾ, ಹಾಶೀಂ ಆಮ್ಲಾ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಶಕಿಬ್ ಅಲ್ ಹಸನ್, ಜೋಸ್ ಬಟ್ಲರ್, ರಶೀದ್ ಖಾನ್, ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್, ಲಸಿತ್ ಮಲಿಂಗಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕಾಂಗರೂ ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿಯೇ ಚಕ್ರವರ್ತಿ! ಇದೇ ವರ್ಷ ಜನವರಿಯಲ್ಲಿ ಆಸಿಸ್ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಇತಿಹಾಸ ಬರೆದಿದ್ದ ಕ್ಯಾಪ್ಟನ್ ಕೊಹ್ಲಿ, ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರೋ ಟೆಸ್ಟ್ ತಂಡಕ್ಕೆ ನಾಯಕನಾಗಿದ್ದಾರೆ. ಕಾಂಗರೂಗಳ ನಾಡಲ್ಲಿ ರನ್ ಮಳೆಯನ್ನ ಹರಿಸಿದ್ದ ವಿರಾಟ್, ತಾನೊಬ್ಬ ಚಾಣಕ್ಷ ನಾಯಕ ಅನ್ನೋದನ್ನ ಸಾಬೀತು ಪಡಿಸಿದ್ರು. ಇದೇ ಕಾರಣಕ್ಕೆ ಕೊಹ್ಲಿಗೆ ಕ್ರಿಕೆಟ್ ಆಸ್ಟ್ರೇಲಿಯಾ ತಂಡ ಚಕ್ರವರ್ತಿಯ ಪಟ್ಟ ನೀಡಿದೆ.

ಅಲ್ಲದೇ, ಟೆಸ್ಟ್ ತಂಡದಲ್ಲಿ ಕೊಹ್ಲಿ ಹೊರತುಪಡಿಸಿದ್ರೆ, ಉಳಿದ್ಯಾವ ಭಾರತೀಯ ಆಟಗಾರರ್ಯಾರೂ ಸ್ಥಾನ ಪಡೆದಿಲ್ಲ. ಇಂಗ್ಲೆಂಡ್​ನ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದು, ಆಸ್ಟ್ರೇಲಿಯಾದ ಮೂವರು ಸ್ಥಾನ ಪಡೆದುಕೊಂಡಿದ್ದಾರೆ. 4ನೇ ಕ್ರಮಾಂಕದಲ್ಲಿ ಆಸಿಸ್ ರನ್ ಮಷೀನ್ ಸ್ಟೀವ್ ಸ್ಮಿತ್ ಬ್ಯಾಟ್ ಬೀಸಲಿದ್ದು, ಕಿಂಗ್ ಕೊಹ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.

ಆಸ್ಟ್ರೇಲಿಯಾದ ಟೆಸ್ಟ್ ತಂಡ: ಕ್ರಿಕೆಟ್ ಆಸ್ಟ್ರೇಲಿಯಾದ ಟೆಸ್ಟ್ ತಂಡದಲ್ಲಿ ಯಾವೆಲ್ಲಾ ಆಟಗಾರರು ಸ್ಥಾನ ಪಡೆದಿದ್ದಾರೆ ಅನ್ನೋದನ್ನ ನೋಡೋದಾದ್ರೆ, ಚಕ್ರವರ್ತಿ ವಿರಾಟ್ ಕೊಹ್ಲಿ ನಾಯಕನಾಗಿದ್ದು, ಇಂಗ್ಲೆಂಡ್​ನ ಮಾಜಿ ನಾಯಕ ಅಲಿಸ್ಟರ್ ಕುಕ್, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್, ಎಬಿ ಡಿವಿಲಿಯರ್ಸ್, ಬೆನ್ ಸ್ಟೋಕ್ಸ್, ಡೇಲ್ ಸ್ಟೇನ್, ಸ್ಟುವರ್ಟ್ ಬ್ರಾಡ್, ನಾಥನ್ ಲಿಯಾನ್, ಜೇಮ್ಸ್ ಌಂಡರ್ಸನ್ ಸ್ಥಾನ ಪಡೆದುಕೊಂಡಿದ್ದಾರೆ.

ಸ್ಟೀವ್ ವ್ಹಾ, ಪಾಂಟಿಂಗ್, ಕ್ಲಾರ್ಕ್​ಗೆ ಸಿಗದ ಪಟ್ಟ ಕೊಹ್ಲಿ, ಧೋನಿಗೆ ದಕ್ಕಿದ್ದೇಗೆ? ಆಸ್ಟ್ರೇಲಿಯಾದ ದಿಗ್ಗಜರಾದ ಸ್ಟೀವ್ ವ್ಹಾ, ರಿಕಿ ಪಾಂಟಿಂಗ್, ಮೈಕಲ್ ಕ್ಲಾರ್ಕ್​ರಂತಹ ಲೆಜೆಂಡ್ ನಾಯಕರಿದ್ದಾರೆ. ಈ ಮೂರು ಮಹಾನ್ ದಿಗ್ಗಜ ನಾಯಕರನ್ನೇ ಹಿಂದಿಕ್ಕಿರುವ ಭಾರತೀಯ ನಾಯಕರಿಬ್ಬರು ಚರಿತ್ರೆಯನ್ನ ಸೃಷ್ಠಿಸಿದ್ದಾರೆ. ಮೈದಾನದಲ್ಲಿ ಇತಿಹಾಸ ನಿರ್ಮಿಸಿರುವ ಧೋನಿ ಮತ್ತು ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಮಾತ್ರವಲ್ಲಿ ಇಡೀ ವಿಶ್ವಕ್ರಿಕೆಟ್​ನಲ್ಲಿ ಹವಾ ಕ್ರಿಯೆಟ್ ಮಾಡಿದ್ದಾರೆ ಅನ್ನೋದಕ್ಕೆ ಆಸಿಸ್ ಕ್ರಿಕೆಟ್ ನೀಡಿರುವ ಗೌರವವೇ ಸಾಕ್ಷಿ.

ಕ್ರಿಕೆಟ್ ಆಸ್ಟ್ರೇಲಿಯಾದ ಎರಡೂ ತಂಡಗಳಿಗೆ ಡಿ ಬಾಸ್ ಮಹೇಂದ್ರ ಸಿಂಗ್ ಧೋನಿ ಹಾಗೂ ಕಿಂಗ್ ಕೊಹ್ಲಿ, ನಾಯಕನಾಗಿದ್ದಾರೆ. ಇದ್ರೊಂದಿಗೆ ಈ ಇಬ್ಬರು ಆಟಗಾರರು ಭಾರತೀಯ ಕ್ರಿಕೆಟ್​ನ ಎರಡು ನಕ್ಷತ್ರ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

Follow us on

Most Read Stories

Click on your DTH Provider to Add TV9 Kannada